ಕನ್ನಡಪ್ರಭ ವಾರ್ತೆ ನಾಗಮಂಗಲ
ಸ್ಪರ್ಧೆಯಲ್ಲಿ ವಿಜೇತರಾದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕ್ರಮವಾಗಿ ಪ್ರಥಮ ಬಹಮಾನ 2 ಸಾವಿರ ರು. ನಗದು, ದ್ವಿತೀಯ ಬಹುಮಾನ 1 ಸಾವಿರ ರು. ನಗದು, ತೃತೀಯ ಬಹುಮಾನ 500 ರು. ನಗದು ಬಹುಮಾನದೊಂದಿಗೆ ಪ್ರಮಾಣಪತ್ರ, ನೆನಪಿನ ಕಾಣಿಕೆ ಮತ್ತು ನೋಟ್ ಬುಕ್-ಪೆನ್ ನೀಡಲಾಯಿತು.
ಜೊತೆಗೆ ಮೂರು ವಿಭಾಗದಲ್ಲಿ 6 ಮಂದಿ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ತಲಾ 200 ರು. ನಗದು, ಪ್ರಮಾಣಪತ್ರ, ನೆನಪಿನ ಕಾಣಿಕೆ ಮತ್ತು ನೋಟ್ ಬುಕ್- ಪೆನ್ ನೀಡಲಾಯಿತು. ಸುಮಾರು 70 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಖುಷಿಯಿಂದಲೇ ಚಿತ್ರ ಬಿಡಿಸಲು ಮುಂದಾದರು.ಚಿತ್ರ ಬಿಡಿಸಲು 2 ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಸ್ಪರ್ಧೆ ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು ಪಾರದರ್ಶಕ ಮೌಲ್ಯಮಾಪನ ನಡೆಸಿ ತೀರ್ಪು ಪ್ರಕಟಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ಮಾತನಾಡಿ, ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ಥಂಭ. ಸಮಾಜ ಮತ್ತು ಸರ್ಕಾರದ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿ ಸರಿದಾರಿಗೆ ತರುವಂತಹ ಸುದ್ದಿಗಳನ್ನು ಪ್ರಕಟಿಸುವ ಜೊತೆಗೆ ಮುಂದಿನ ಸತ್ಪ್ರಜೆಗಳಾಗುವ ವಿದ್ಯಾರ್ಥಿಗಳಿಗೆ ಕನ್ನಡಪ್ರಭ, ಸುವರ್ಣನ್ಯೂಸ್ ವತಿಯಿಂದ ಪರಿಸರ, ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಕಾಳಜಿ ಮತ್ತು ಅರಿವು ಮೂಡಿಸುವ ಕೆಲಸ ನಡೆಯುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
8ನೇ ತರಗತಿ ವಿಭಾಗ: ದೃಪದ್‌ಗೌಡ ಕಾಂತಾಪುರ ಸರ್ಕಾರಿ ಪ್ರೌಢಶಾಲೆ ಪ್ರಥಮ, ಪಲ್ಲವಿ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಚಿಣ್ಯ ದ್ವಿತೀಯ, ಹರ್ಷ ಬಿಆರ್‌ಎಚ್‌ಎಸ್ ರಾಮೇನಹಳ್ಳಿ ತೃತೀಯ, ಕಾಂಚನ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೋಗಾದಿ ಮತ್ತು ಹನ್ಷಿಕಾ ಎಲ್ಲೆನ್ ಶಾಲೆ ಸಮಾಧಾನಕರ ಸ್ಥಾನ.
ಜಿ.ಎಸ್.ಸಿಂಚನ ವಿಸ್ಡಂ ಪಬ್ಲಿಕ್‌ಶಾಲೆ ಪ್ರಥಮ, ಗಾನವಿಗೌಡ ಬಿಜಿಎಸ್ ಪಬ್ಲಿಕ್ ಮಾಡೆಲ್ ಸ್ಕೂಲ್ ದ್ವಿತೀಯ, ಬಿ.ಎನ್.ತನುಜ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೋಗಾದಿ ತೃತೀಯ, ಆಸಿಫಾ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ನಾಗಮಂಗಲ ಮತ್ತು ಮಹಾಲಕ್ಷ್ಮೀ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮೈಲಾರಪಟ್ಟಣ ಸಮಾಧಾನಕರ ಸ್ಥಾನ.
ವಂದನಾಮೂರ್ತಿ ಬಿಜಿಎಸ್ ಪಬ್ಲಿಕ್ ಮಾಡೆಲ್ ಸ್ಕೂಲ್ ಪ್ರಥಮ, ಎಸ್.ಎನ್.ಗಗನ್ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೋಗಾದಿ ದ್ವಿತೀಯ, ವೈ.ಎ.ತರುಣ್‌ಗೌಡ ಸರ್ಕಾರಿ ಪ್ರೌಢಶಾಲೆ ಹರದನಹಳ್ಳಿ ತೃತೀಯ, ಧನುಶ್ರೀ ಕುವೆಂಪು ಪ್ರೌಢಶಾಲೆ ನಾಗಮಂಗಲ ಮತ್ತು ಮೋಹನ ಎಸ್‌ವಿಎಚ್‌ಆರ್‌ಎಸ್ ಬಿಎಂಹಳ್ಳಿ ಸಮಾಧಾನಕರ ಸ್ಥಾನ.
ಟಿಎಪಿಸಿಎಂಎಸ್ ಕಾರ್ಯದರ್ಶಿ ಎಂ.ಕೆ.ಮೋಹನ್‌ರಾಜ್, ವಲಯ ಅರಣ್ಯಾಧಿಕಾರಿ ಸಂಪತ್‌ಪಟೇಲ್, ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ವಿನಯ್‌ಕುಮಾರ್, ನಿರ್ದೇಶಕ ಸುರೇಶ್, ಶಿಕ್ಷಕರಾದ ಕೆಂಪೇಗೌಡ, ಪುಟ್ಟರಾಜು ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಇದ್ದರು.
‘ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ವತಿಯಿಂದ ಚಿತ್ರಕಲಾ ಸ್ಪರ್ಧೆ ಆಯೋಜಿಸಿ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನಗಳಿಸಿದ್ದು ಖುಷಿಯಾಗಿದೆ. ಇಂತಹ ಸ್ಪರ್ಧೆಗಳು ನಿರಂತರವಾಗಿ ನಡೆದರೆ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣವಾಗುತ್ತದೆ.’
- ಜಿ.ಎಸ್.ಸಿಂಚನ, 9ನೇ ತರಗತಿ ಪ್ರಥಮ ಸ್ಥಾನ,---
‘ಅನೇಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಕಲ್ಪನೆಯನ್ನು ಚಿತ್ರ ಬಿಡಿಸುವ ಮೂಲಕ ಹೊರ ಹಾಕಿದ್ದಾರೆ. ಭವಿಷ್ಯದಲ್ಲಿ ಉತ್ತಮ ಚಿತ್ರ ಕಲಾವಿದರಾಗಿ ಹೊರಹೊಮ್ಮಲು ಇಂತಹ ಸ್ಪರ್ಧೆ ಸಹಕಾರಿ. ಇದಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಗೆ ಅಭಿನಂದನೆ.’-ಎಂ.ಕೆ.ಮೋಹನ್‌ರಾಜ್, ಟಿಎಪಿಸಿಎಂಎಸ್ ಕಾರ್ಯದರ್ಶಿ, ನಾಗಮಂಗಲ.
---