ಹುಬ್ಬಳ್ಳಿ:
ಇಲ್ಲಿನ ಮಂಗಳವಾರಪೇಟೆ ರುದ್ರಾಕ್ಷಿಮಠದಲ್ಲಿ ಸೋಮವಾರದಿಂದ ಆರಂಭಗೊಂಡ ನಿಜಗುಣರ 76ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವರು ನಮ್ಮ ಸನಾತನ ಹಿಂದೂ ಧರ್ಮವನ್ನು ನಾಶ ಮಾಡುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಈ ಕುರಿತು ನಾವೆಲ್ಲರೂ ಎಚ್ಚೆತ್ತುಕೊಳ್ಳುವುದು ಅವಶ್ಯವಾಗಿದೆ. ದೇಶದ ಮೇಲೆ ಆಧ್ಯಾತ್ಮಿಕ ಆಕ್ರಮಣ ನಡೆಯುತ್ತಿದೆ. ನಮ್ಮ ಮಠ, ಮಂದಿರಗಳ ಆಸ್ತಿಯ ಮೇಲೆ ದುಷ್ಟರು ಕಣ್ಣು ಹಾಕಿದ್ದು, ಅದರ ಕುರಿತು ನಾವೆಲ್ಲರೂ ಜಾಗೃತರಾಗಬೇಕಿದೆ ಎಂದು ಸಲಹೆ ನೀಡಿದರು.ನಿಜಗುಣ ಶಿವಯೋಗಿಗಳ ಆಧ್ಯಾತ್ಮಿಕ ಚಿಂತನೆ, ಅವರ ನಡೆದು ಬಂದ ದಾರಿ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು.
ನಂತರ ಬೆಳಗಾವಿ ಕಾರಂಜಿಮಠದ ಡಾ. ಶಿವಯೋಗಿ ದೇವರು ಅನುಭಾವಿಗಳ ತತ್ವಾಮೃತ ವಿಷಯದ ಕುರಿತು ಪ್ರವಚನ ನೀಡಿದರು.ಎರಡೆತ್ತಿನಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸದಾನಂದ ಸ್ವಾಮೀಜಿ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಚನ್ನಬಸವ ಬಾಗೇವಾಡಿ, ಮಲ್ಲಿಕಾರ್ಜುನ ಸಾವುಕಾರ, ಮಹಾಂತೇಶ ಗಿರಿಮಠ ಸೇರಿದಂತೆ ಹಲವವರಿದ್ದರು.