ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಇಲ್ಲಿನ ಸರ್ಕಾರಿ ಪ.ಪೂ.ಕಾಲೇಜ್ ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳೇ ನಾಳಿನ ನಾಡಿನ ಶಿಲ್ಪಿಗಳಾಗಿದ್ದು, ಇಡೀ ಜಗತ್ತು ನಿಮ್ಮ ಕೈಯ್ಯಲ್ಲಿದೆ. ಆದ್ದರಿಂದ ನಗು, ಆಟದ ಜೊತೆಗೆ ಮನವಿಟ್ಟು ಕಲಿತು ದೇಶದ ಉತ್ತಮ ನಾಗರಿಕರಾಗಬೇಕು. ಕಷ್ಟಪಟ್ಟು ಓದಿ ಸಾಧನೆ ಮಾಡಿದ ಮಹನೀಯರು. ನಮಗೆ ಮಾದರಿಯಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾತನಾಡಿ, ಮಹನೀಯರ ದಿನಾಚರಣೆಗಳಿಂದ ಅವರು ಮಾಡಿರುವ ಸಾಧನೆಗಳನ್ನು ಅರಿತು ಅವರಂತೆ ನಡೆಯಲು ಪ್ರೇರಣೆ ಸಿಗುತ್ತದೆ ಎಂದರು.
ಶಿಕ್ಷಕಿ ಚಿತ್ರಾ ಸ್ವಾಗತಿಸಿದರು. ಶಿಕ್ಷಕಿ ಲಿಯೋನಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಪ್ರಕಾಶ್ ವಂದಿಸಿದರು.ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಿ.ಸಿ.ದಿನೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ವಿನ್ಸೆಂಟ್, ನಿರ್ದೇಶಕ ಆಲ್ಫ್ರೆಡ್ ಡಿಸೋಜ, ಸಹ ಶಿಕ್ಷಕಿ ಶಾಂತಾ ಹೆಗಡೆ ಹಾಜರಿದ್ದು ಬಹುಮಾನ ವಿತರಿಸಿದರು.