ಮಕ್ಕಳು ಸಮರ್ಥವಾಗಿ ವಾರ್ಷಿಕ ಪರೀಕ್ಷೆ ಎದುರಿಸಿ: ಮಲ್ಲಿಕಾರ್ಜುನಪ್ಪ

KannadaprabhaNewsNetwork |  
Published : Feb 15, 2026, 02:15 AM IST
ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಶಾರದ ಪೂಜಾ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಮಕ್ಕಳು ಸಮರ್ಥವಾಗಿ ಮುಂಬರುವ ವಾರ್ಷಿಕ ಪರೀಕ್ಷೆ ಎದುರಿಸಬೇಕು ಎಂದು ಶಾಲಾ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ. ಟಿ ಹೇಳಿದರು.

ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಶಾರದ ಪೂಜಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳು ಸಮರ್ಥವಾಗಿ ಮುಂಬರುವ ವಾರ್ಷಿಕ ಪರೀಕ್ಷೆ ಎದುರಿಸಬೇಕು ಎಂದು ಶಾಲಾ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ

ಮಲ್ಲಿಕಾರ್ಜುನಪ್ಪ. ಟಿ ಹೇಳಿದರು. ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಏರ್ಪಡಿಸಿದ್ದ ಶಾರದ ಪೂಜಾ ಹಾಗೂ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ಪರೀಕ್ಷೆಗೆ ಹೆದರದೆ ಸಮರ್ಥವಾಗಿ ಅಭ್ಯಸಿ ಸಿದಾಗ ಮಾತ್ರ ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯ. ಅತ್ಯಂತ ಕ್ಲಿಷ್ಟ ವೆನಿಸುವ ವಿಷಯಗಳ ಅಧ್ಯಯನ ಬೆಳಗಿನಜಾವದಲ್ಲಿ ಮಾಡಬೇಕುಎಂದು ಹೇಳಿದರು.

ಶ್ರೀ ಅಮೃತೇಶರ‍್ವ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ ಟಿ. ಮಾತನಾಡಿ ಮಕ್ಕಳು ಚೆನ್ನಾಗಿ ಓದಿ, ಪರೀಕ್ಷೆ ಬರೆದು, ಕಳೆದ ಸಾಲಿನಂತೆ ವೈಯಕ್ತಿಕವಾಗಿ ಮತ್ತು ಶಾಲೆಗೆ ಉತ್ತಮ ಫಲಿತಾಂಶ ನೀಡಬೇಕು. ಹಾಗೆ ಮಾಡಬೇಕಾದರೆ ಮೊದಲು ಮಕ್ಕಳು ಏಕಾಗ್ರತೆ ಬೆಳೆಸಿಕೊಂಡು, ಹಗಲಿರುಳ್ಳೆನ್ನದೆ ಅಭ್ಯಸಿಸಿ, ಓದಿದನ್ನು ಬರೆದು, ಟಿಪ್ಪಣಿ ಮಾಡಿಕೊಂಡು ಮತ್ತೆ ಮತ್ತೆ ಓದುತ್ತಿರಬೇಕು ಎಂದು ಸಲಹೆ ಮಾಡಿದರು.ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ ಮಾತನಾಡಿ, ಮುಚ್ಚುವ ಸ್ಥಿತಿಯಲ್ಲಿದ್ದ ಈ ಶಾಲೆ ಈಗ ಉತ್ತಮ ಸ್ಥಿತಿಗೆ ಬಂದಿದ್ದು, ಇದಕ್ಕೆಲ್ಲ ಕಾರಣ ದಾನಿಗಳ ಉದಾರ ಸಹಾಯ. ಈ ಸಹಾಯದಿಂದ ಇಲ್ಲಿ ಇರಬೇಕಾದ ಎಲ್ಲ ಸೌಲಭ್ಯ ಒದಗಿಸಿದೆ. ಆ ಸೌಲಭ್ಯ ಚೆನ್ನಾಗಿ ಬಳಸಿಕೊಂಡು ಓದಿ, ಶಾಲೆಗೆ ಕೀರ್ತಿ ತರಬೇಕೆಂದರು. ಸ್ಥಳೀಯ ಸಲಹಾ ಸಮಿತಿ ಸದಸ್ಯ ಜಗದೀಶ್, ಶಾಲಾ ಸ್ಥಳೀಯ ಸಲಹಾ ಸಮಿತಿ ಪದಾಧಿಕಾರಿಗಳಾದ ಮಲ್ಲೇಶಪ್ಪ, ಶಿರಳ್ಳಿ ಓಂಕಾರಪ್ಪ, ಮಹೇಶ್ವರಪ್ಪ, ಬಸವರಾಜಪ್ಪ ಎನ್ ಎಂ, ಸಪ್ಪನಹಳ್ಳಿ ನಾಗರಾಜ್, ಪಾರ್ವತಮ್ಮ, ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾದ ಮಧು, ಶಿಕ್ಷಕರಾದ ಖಿಜರ್‌ಖಾನ್, ರಮಾಕಾಂತ್, ಸವಿತಮ್ಮ, ಪಂಚಾಕ್ಷರಪ್ಪ, ಸತೀಶ್ ನಂದಿಹಳ್ಳಿ, ಮಂಜುಳ ಮಲ್ಲಿಗವಾಡ, ಪ್ರಭಾಕರ್, ರೇಖಾ ಮತ್ತು ಪೋಷಕರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.

14ಕೆಟಿಆರ್.ಕೆ.2ಃ ತರೀಕೆರೆ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಕಾರ್ಯಕ್ರಮದಲ್ಲಿ ಶಾಲಾ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಮಾತನಾಡಿದರು. ಮುಖ್ಯ ಶಿಕ್ಷಕ ಹಾಲೇಶ್ ಕೆ ಟಿ. ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಮಾ. 13 ರವರೆಗೆ ಕಪ್ಪಡಿ ಜಾತ್ರಾ ಮಹೋತ್ಸವ
ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ನಂದಿಗ್ರಾಮ ಸಜ್ಜು