ಧಾರವಾಡ:
ಅಮರಗೋಳದ ಸಿದ್ದೇಶ್ವರ ಗ್ರಾಮೀಣ ಅಭಿವೃದ್ಧಿ ಸಮಿತಿ ಅಡಿಯ ನವೋದಯ ಕಾನ್ವೆಂಟ್ ಪ್ರಾಥಮಿಕ ಮತ್ತು ಪ್ರೌಢಶಾಲೆ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ಅವರು, ಆಧುನಿಕ ಜೀವನ ಶೈಲಿಯು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ಓದುವ ಜತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸಲಹೆ ನೀಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ, ನವೋದಯ ಸಂಸ್ಥೆಯ ಸಂಸ್ಥಾಪಕರು, ಹಿರಿಯ ಸಹಕಾರಿಗಳೂ ಆದ ಮಲ್ಲಿಕಾರ್ಜುನ ಅಜ್ಜಪ್ಪ ಹೊರಕೇರಿ, ಈ ಶಾಲೆ ಪ್ರಾರಂಭಿಸುವ ಮೊದಲೇ ಗ್ರಾಮೀಣ ಮಕ್ಕಳ ಅಭಿವೃದ್ಧಿಗಾಗಿ ಅಮರಗೋಳ ಸರ್ಕಾರಿ ಶಾಲೆಯ ಉನ್ನತಿಗಾಗಿ ಶ್ರಮ ಪಟ್ಟಿದ್ದಾರೆ ಎಂದರು.ಮಕ್ಕಳಿಗೆ ತಂದೆ-ತಾಯಿಗಳೇ ಪ್ರತಿಬಿಂಬ. ಅವರ ಮಾರ್ಗದಲ್ಲಿ ಮಕ್ಕಳು ನಡೆಯುತ್ತಾರೆ. ಆದ್ದರಿಂದ ಮಕ್ಕಳಿಗೆ ಮೊಬೈಲ್ ಬಳಕೆ ತಪ್ಪಿಸಿ ಪುಸ್ತಕ ಹಿಡಿಯಲು ಪ್ರೋತ್ಸಾಹಿಸಿ. ಈ ಮೂಲಕ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ತಿಳಿಸಿ ಕೊಡಲು ತಿಳಿಸಿದರು.
ಖ್ಯಾತ ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ, ಮಕ್ಕಳಿಗೆ ಸಾಮಾಜಿಕ ಮೌಲ್ಯ ಮತ್ತು ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ, ಯಾವುದೇ ಒಂದು ಕೆಲಸಕ್ಕೆ ಪ್ರಯತ್ನ ತುಂಬ ಮುಖ್ಯ. ಇಂತಹ ಪ್ರಯತ್ನದಿಂದ ಈ ಶಾಲೆಯು ಉನ್ನತ ಮಟ್ಟದ ಯಶಸ್ಸು ಗಳಿಸುವಲ್ಲಿ ಸಾಧ್ಯವಾಗಿದೆ. ಈ ಶಾಲೆಯು ಮಕ್ಕಳಿಗೆ ಓದುವ ಜತೆಗೆ ಮೌಲ್ಯಾಧಾರಿತ ನೀತಿ ಪಾಠ ಹೇಳಿಕೊಡುತ್ತಿರುವುದು ಶ್ಲಾಘನೀಯ ಎಂದರು.ಶಾಲೆಯ ಸಂಸ್ಥಾಪಕ ಮಲ್ಲಿಕಾರ್ಜುನ ಅ. ಹೊರಕೇರಿ, ಮುಖ್ಯೋಪಾಧ್ಯಾಯರಾದ ಸಂಗೀತ ತಟಪಟ್ಟಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಸಹಕಾರಿ ಬ್ಯಾಂಕ್ ಸಿಬ್ಬಂದಿ ಇದ್ದರು. ಅಕ್ಷತಾ ದೊಡ್ಡಮನಿ ಪ್ರಾರ್ಥಿಸಿದರು. ಮಂಜುಳಾ ಹೊರಕೇರಿ ಸ್ವಾಗತಿಸಿದರು. ರಾಧಾ, ದೀಪಾ ನಿರೂಪಿಸಿದರು.