ಮಕ್ಕಳಲ್ಲಿ ಕಲಿಕೆಯ ವಿನಮ್ರ ಗುಣ ಇರಲಿ: ಮಾಜಿ ಶಾಸಕ ಬಾಲರಾಜು

KannadaprabhaNewsNetwork |  
Published : Nov 22, 2026, 01:30 AM IST
ಬಿ ಎಡ್ ನಲ್ಲಿ 10ರ್ಯಾಂಕ್ ಗಳ ಪೈಕಿ 9 ಮಾನಸ ಸಂಸ್ಥೆಗೆ  ಹೆಮ್ಮೆಯ ಸಂಗತಿ ಮಾಜಿ ಶಾಸಕ ಎಸ್. ಬಾಲರಾಜು | Kannada Prabha

ಸಾರಾಂಶ

ಮಕ್ಕಳಲ್ಲಿ ಕಲಿಕಾ ಗುಣ ಬೆಳೆಯಬೇಕು. ಕಲಿಸುವ ಶಕ್ತಿ ಶಿಕ್ಷಕರಲ್ಲಿ ಇರಬೇಕು, ಸತ್ಯವನ್ನು ಕಲಿಸಿ, ವಿದ್ಯಾರ್ಥಿಗಳಲ್ಲಿ ತಂದೆ ತಾಯಿ ಗುರುಗಳನ್ನು ಗೌರವಿಸುವ ವಿನಮ್ರತೆಯ ಗುಣ ಸದಾಕಾಲ ಇರಬೇಕು ಎಂದು ಮಾಜಿ ಶಾಸಕ ಎಸ್.ಬಾಲರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಕ್ಕಳಲ್ಲಿ ಕಲಿಕಾ ಗುಣ ಬೆಳೆಯಬೇಕು. ಕಲಿಸುವ ಶಕ್ತಿ ಶಿಕ್ಷಕರಲ್ಲಿ ಇರಬೇಕು, ಸತ್ಯವನ್ನು ಕಲಿಸಿ, ವಿದ್ಯಾರ್ಥಿಗಳಲ್ಲಿ ತಂದೆ ತಾಯಿ ಗುರುಗಳನ್ನು ಗೌರವಿಸುವ ವಿನಮ್ರತೆಯ ಗುಣ ಸದಾಕಾಲ ಇರಬೇಕು ಎಂದು ಮಾಜಿ ಶಾಸಕ ಎಸ್.ಬಾಲರಾಜು ಹೇಳಿದರು.

ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ನಿಸರ್ಗ ವಿದ್ಯಾನಿಕೇತನ ವತಿಯಿಂದ ಅಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಸುಸಂಸ್ಕೃತ ಸಮಾಜವನ್ನು ಸೃಷ್ಟಿ ಮಾಡುವ ಜಿಲ್ಲೆಯ ಹೆಮ್ಮೆಯ ಶಿಕ್ಷಣ ಸಂಸ್ಥೆಗಳ ಪೈಕಿ ಮಾನಸ ಶಿಕ್ಷಣ ಸಂಸ್ಥೆ ತನ್ನದೆ ರೀತಿಯಲ್ಲಿ ಛಾಪು ಮೂಡಿಸಿದೆ. ಪ್ರತಿಭೆ ಎಲ್ಲರಲ್ಲೂ ಇದೆ, ಆದರೆ ಪ್ರತಿಭೆಯನ್ನು ಅನಾವರಣ ಮಾಡಲು ಮತ್ತು ಸಾಧಿಸಲು ಹತ್ತಾರು ದಾರಿಗಳಿವೆ. ತಂದೆ ದುಡಿದರೆ ತಾಯಿ ಕಾಪಾಡುತ್ತಾಳೆ. ಅಧ್ಯಯನದ ವೇಳೆ ಜಾಲತಾಣಗಳಿಂದ ದೂರವಿದ್ದು ಯಾವುದೇ ದುಶ್ಚಟಗಳಿಗೆ ಬಲಿಯಾಗದಂತಿದ್ದು ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.

ಬಿಎಡ್‌ನಲ್ಲಿ ಈ ಬಾರಿ ದೊರೆತ ಫಲಿತಾಂಶದಲ್ಲಿ ಚಾ.ನಗರ ವಿಶ್ವವಿದ್ಯಾಲಯ ನೀಡಿದ 10 ರ್‍ಯಾಂಕ್ ಗಳ ಪೈಕಿ 9 ರ್‍ಯಾಂಕ್‌ಗಳನ್ನು ಮಾನಸ ಶಿಕ್ಷಣ ಸಂಸ್ಥೆ ತಮ್ಮದಾಗಿಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ, ಸಂಸ್ಥೆಯ ಸಾಧನೆ ಇದೇ ರೀತಿ ಮುಂದುವರಿಯಲಿ, 10ನೇ ತರಗತಿಯಲ್ಲಿ ಸಾಧನೆಗೈದ 30ಕ್ಕೂ ಅಧಿಕ ಮಕ್ಕಳನ್ನು ಅಭಿನಂದಿಸುತ್ತಿರುವ ಹೆಮ್ಮೆಯ ಸಂಗತಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ನನ್ನ ವೃತ್ತಿ ಬದುಕು ಈಸಂಸ್ಥೆಯಲ್ಲಿ ಕೆಲಸ ಸೇರುವಮೂಲಕ ಪ್ರಾರಂಭವಾಯಿತು. 1997ರಲ್ಲಿ ಸರ್ಕಾರಿ ಹುದ್ದೆ ಸೇರುವ ಮುನ್ನ ನಾನು ಇಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದೆ, ಸಂಸ್ಥೆಯ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ನಿಮ್ಮ ಹೆಜ್ಜೆ ಗುರುತು ಉಳಿಸುವಲ್ಲಿ ಆಮೂಲಕ ಕೊಳ್ಳೇಗಾಲ ತಾಲೂಕಿಗೆ ಕೀರ್ತಿ ತರುವಲ್ಲಿ ಶ್ರಮವಹಿಸಿ ಎಂದರು.

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಕೊಳ್ಳೇಗಾಲ ತಾಲೂಕು ಪ್ರಥಮ ಸ್ಥಾನ ಪಡೆದು, ನಮ್ಮ ತಾಲೂಕಿಗೆ ಉತ್ತಮ ಫಲಿತಾಂಶ ನೀಡಿದ್ದಾರೆ ಮಾತ್ರವಲ್ಲ ಚಾಮರಾಜನಗರ ಜಿಲ್ಲೆಗೆ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನಗಳು ನಮ್ಮ ತಾಲೂಕಿಗೆ ಕೊಡುಗೆ ನೀಡಿದ ಕೀರ್ತಿ ವಿದ್ಯಾರ್ಥಿಗಳದ್ದು ಎಂದರು.

ವೃತ್ತ ನಿರೀಕ್ಷಕ ಶಿವಮಾದಯ್ಯ, ಜೇತವನ ಬೌದ್ದ ವಿಹಾರದ ಬೌದ್ದ ಬಿಕ್ಕು ಮನೋರಕ್ಥಿತ ಬಂತೇಜಿ, ಮುಖ್ಯ ಶಿಕ್ಷಕಿ ಸಂಯೋಜಕ ಶಂಕರ್, ವಿಶೇಷಾಧಿಕಾರಿ ನಾಗಭೂಷಣ್, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಕೃಷ್ಣೆಗೌಡ, ಚನ್ನಶೆಟ್ಟಿ, ಎಂ.ನಟರಾಜಮಾಳಿಗೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳ ಹಸ್ತಕ್ಷೇಪದಿಂದ ಸಹಕಾರ ಸಂಘಗಳು ಹಾಳು: ಎಚ್.ಡಿ.ಕುಮಾರಸ್ವಾಮಿ
ARAI ಸೆಂಟರ್ ಸ್ಥಾಪನೆಗೆ ಭೂಮಿ ಕೊಡದೆ ಸತಾಯಿಸುತ್ತಿರುವ ಸರ್ಕಾರ: ಕೇಂದ್ರ ಸಚಿವ ಎಚ್ಡಿಕೆ ಕಿಡಿ