ಬ್ಯಾಡಗಿ: ಲಕ್ಷ ಚೀಲ ದಾಟಿದ ಮೆಣಸಿನಕಾಯಿ ಆವಕ

KannadaprabhaNewsNetwork |  
Published : Jan 09, 2024, 02:00 AM ISTUpdated : Jan 09, 2024, 05:40 PM IST
ಮಮ | Kannada Prabha

ಸಾರಾಂಶ

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆವಕಿನಲ್ಲಿ ದಿಢೀರ್ ಹೆಚ್ಚಳವಾಗಿದೆ. ಸೋಮವಾರ ಲಕ್ಷಕ್ಕೂ ಅಧಿಕ ಚೀಲ ಮಾರುಕಟ್ಟೆಗೆ ಅಗಮಿಸಿದ್ದು ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ ಲಕ್ಷದ ಗಡಿ ದಾಟಿದೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆವಕಿನಲ್ಲಿ ದಿಢೀರ್ ಹೆಚ್ಚಳವಾಗಿದೆ. ಸೋಮವಾರ ಲಕ್ಷಕ್ಕೂ ಅಧಿಕ ಚೀಲ ಮಾರುಕಟ್ಟೆಗೆ ಅಗಮಿಸಿದ್ದು ಪ್ರಸಕ್ತ ವರ್ಷದಲ್ಲಿ ಮೊದಲ ಬಾರಿಗೆ ಲಕ್ಷದ ಗಡಿ ದಾಟಿದೆ. ಆದರೆ ದರಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಾಣದೇ ಕಡ್ಡಿ, ಡಬ್ಬಿ ಮತ್ತು ಗುಂಟೂರು ತಳಿ ದರಗಳಲ್ಲಿ ಸ್ಥಿರತೆ ಮುಂದುವರೆದಿದೆ.

ಕಳೆದ ಸೋಮವಾರ 95 ಸಾವಿರ ಚೀಲಗಳಷ್ಟು ಆವಕವಾಗಿದ್ದು ಲಕ್ಷವನ್ನು ಸಮೀಪಿಸಿತ್ತು. ಆದರೆ 3 ದಿನಗಳಲ್ಲಿ ದಿಢೀರ್ ಚೇತರಿಕೆ ಕಂಡುಕೊಂಡ ಮಾರುಕಟ್ಟೆಗೆ ಗುರುವಾರ 1.10 ಲಕ್ಷಕ್ಕೂ ಅಧಿಕ ಚೀಲಗಳು ಮಾರಾಟಕ್ಕೆ ಲಭ್ಯವಿದ್ದವು.

ಮಳೆಯ ವಾತಾವರಣ: ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ವ್ಯಾಪಾರಸ್ಥರು ಮಳೆಯಾಗುವ ನಿರೀಕ್ಷೆಯಲ್ಲಿದ್ದರು. ಪ್ರತಿಕೂಲ ಹವಾಮಾನದಿಂದ ರೈತರು ದರಗಳಲ್ಲಿ ಹಿನ್ನಡೆಯಾಗುವ ಭಯದಲ್ಲಿದ್ದರು. ಬಳಿಕ ಹವಾಮಾನದಲ್ಲಿ ಬದಲಾವಣೆಗೊಂಡು ಬೆಳಗ್ಗೆ 10 ಗಂಟೆಯ ಬಳಿಕ ಬಿಸಿಲು ಆರಂಭವಾಯಿತು. ವರ್ತಕರು ಎಂದಿನಂತೆ ನಿರ್ಭಯವಾಗಿ ಟೆಂಡರ್ ಹಾಕಲು ಮುಂದಾದರು.

ಕಡ್ಡಿತಳಿ ಪ್ರತಿ ಕ್ವಿಂಟಲ್‌ಗೆ ಸರಾಸರಿ ₹39 ಸಾವಿರದವರೆಗೆ ಮಾರಾಟವಾದರೇ, ಡಬ್ಬಿತಳಿ ₹41 ಸಾವಿರ ಹಾಗೂ ಗುಂಟೂರ ತಳಿ ₹16 ಸಾವಿರ ಸರಾಸರಿ ದರದಲ್ಲಿ ಬಿಕರಿಗೊಂಡವು. ಗುಣಮಟ್ಟದ ಕಡ್ಡಿ ತಳಿ ₹59 ಸಾವಿರ, ಡಬ್ಬಿತಳಿ ₹60 ಸಾವಿರಕ್ಕೆ ಮಾರಾಟವಾಗಿದ್ದು ಇಂದಿನ ವಿಶೇಷವಾಗಿತ್ತು.

ಕಳೆದ ಗುರುವಾರ (ಜ.4) ಹೋಲಿಕೆ ಮಾಡಿದಲ್ಲಿ ಸೋಮವಾರ 15 ಸಾವಿರ ಚೀಲಗಳಷ್ಟು ಆವಕಿನಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ಗುರುವಾರ 95 ಸಾವಿರ ಚೀಲಗಳಿಷ್ಟಿದ್ದ ಆವಕ ಈಗ ಒಟ್ಟು 110818 ಚೀಲಕ್ಕೆ ಏರಿಕೆಯಾಗಿದೆ. ಒಟ್ಟು 280 ಕಮೀಶನ್ ಎಜೆಂಟ್‌ರ ಅಂಗಡಿಗಳಲ್ಲಿ ಮೆಣಸಿನಕಾಯಿ ಮಾರಾಟಕ್ಕೆ ಲಭ್ಯವಿದ್ದು, ಒಟ್ಟು 341 ವರ್ತಕರು ಟೆಂಡರ್‌ನಲ್ಲಿ ಪಾಲ್ಗೊಂಡಿದ್ದಾಗಿ ಮಾರುಕಟ್ಟೆ ಮೂಲಗಳು ದೃಢಪಡಿಸಿವೆ.

ಮಾರುಕಟ್ಟೆ ದರ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹3129, ಗರಿಷ್ಠ ₹50091, ಸರಾಸರಿ ₹38729, ಡಬ್ಬಿತಳಿ ಕನಿಷ್ಠ ₹3509, ಗರಿಷ್ಠ ₹60786, ಸರಾಸರಿ ₹41589, ಗುಂಟೂರು ಕನಿಷ್ಠ ₹1609, ಗರಿಷ್ಟ ₹19109, ಸರಾಸರಿ ₹15799ಗೆ ಮಾರಾಟವಾಗಿವೆ.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು