ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಒನಕೆ ಓಬವ್ವ ಸಂರಕ್ಷಣಾ ಸಮಿತಿಯ ಎನ್.ತಿಪ್ಪೇಸ್ವಾಮಿ ಮಾತನಾಡಿ, ಕಳೆದ 23 ರ ರಾತ್ರಿ ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿರುವ ಜಿಲ್ಲಾಧಿಕಾರಿ ವೃತ್ತದಲ್ಲಿ ಸ್ಥಳೀಯ ಆಡಳಿತ, ಜಿಲ್ಲಾಡಳಿತ, ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದೇ ಏಕಾಏಕಿ ಅಧಿಕೃತವಾಗಿ ನಿರ್ಮಿಸಿರುವ ವೀರ ವನಿತೆ ಓನಕೆ ಓಬವ್ವ ಪ್ರತಿಮೆ ಜಾಗದಲ್ಲಿ ಜಗಜ್ಯೋತಿ ವಿಶ್ವಗುರು ಬಸವೇಶ್ವರರ ಪುತ್ಥಳಿ ಇಡಲು ಪ್ರಯತ್ನಿಸಲಾಗಿದೆ. ವೀರಶೈವ ಯುವ ವೇದಿಕೆ ಎಂದು ಹೇಳಿಕೊಂಡು ಬಂದ ಸ್ಥಳೀಯರು ಒನಕೆ ಓಬವ್ವನ ವಂಶಸ್ಥರಿಗೆ, ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಆ ಮೂಲಕ ಬಸವೇಶ್ವರನ ಅತಿ ಚಿಕ್ಕಮೂರ್ತಿ ತಂದು ಜಗಜ್ಯೋತಿ ವಿಶ್ವಗುರು ಬಸವೇಶ್ವರಿಗೂ ಅಪಾಮಾನವೆಸಗಿದ್ದಾರೆ ಎಂದು ದೂರಿದರು.
ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಶರಣರು ಮಾತನಾಡಿ, ದುರ್ಬಲ ಮನಸ್ಸಿನ ವೀರಶೈವ ಯುವ ವೇದಿಕೆ ಸಮಿತಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಮಾನಗಳಲ್ಲಿ ಇಂತಹ ದೌರ್ಜನ್ಯ ಪ್ರಕರಣಗಳು ಎಲ್ಲಿಯೂ ಜರುಗದಂತೆ ಕ್ರಮ ವಹಿಸಲು ಒತ್ತಾಯಿಸಲಾಯಿತು.ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಕಿಡಿಗೇಡಿಗಳ ವಿರುದ್ಧ ಸುಮೋಟೋ ದೂರನ್ನು ದಾಖಲಿಸಿಕೊಳ್ಳಬೇಕು. ಹಾಗೂ ಹಾಲಿ ರಾಷ್ಟ್ರನಾಯಕರು, ರಾಜ್ಯ ನಾಯಕರ ಯಾವುದೇ ರೀತಿಯ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡದಂತೆ ಕ್ರಮವಹಿಸುವಹಿಸಬೇಕು ಎಂದು ಆಗ್ರಹಿಸಿದರು.