ಪ್ರಾರ್ಥನಾ ಮಂದಿರದಲ್ಲಿ ಕ್ರಿಸ್ಮಸ್ ಆಚರಣೆ

KannadaprabhaNewsNetwork |  
Published : Dec 26, 2024, 01:00 AM IST
ಕ್ರಿಸ್ಮಸ್ ಕಾರ್ಯಕ್ರಮವನ್ನು ಸಡಗರ ದಿಂದ ಆಚರಿಸಲಾಯಿತು | Kannada Prabha

ಸಾರಾಂಶ

ಎಂ ಹೊಸಹಳ್ಳಿ ಗ್ರಾಮದ "ಯೇಸು ನಡೆಸುತ್ತಾನೆ " ಪ್ರಾರ್ಥನ ಮಂದಿರದಲ್ಲಿ ಕ್ರಿಸ್ಮಸ್ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು. ನಾಡಿನ ಎಲ್ಲಾ ಜನರಿಗೆ ಕ್ರಿಸ್ಮಸ್ ಶುಭಾಶಯಗಳು ತಿಳಿಸಿದರು. ಅದೇ ರೀತಿಯಾಗಿ ಯೇಸು ನಡೆಸುತ್ತಾನೆ ಪ್ರಾರ್ಥನೆ ಮಂದಿರದ ಸಭಾ ಪಾಲಕರಾದ ಸೋಮಣ್ಣ ಮಾತನಾಡಿ, ಎಲ್ಲ ಜನರಿಗೆ ಆರೋಗ್ಯ ಆಯಸ್ಸು ಹಾಗೂ ರಕ್ಷಣೆಯನ್ನು ಕರ್ತನಾದ ಯೇಸು ಕ್ರಿಸ್ತನು ನೀಡಲಿ ಎಂದು ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಎಂ ಹೊಸಹಳ್ಳಿ ಗ್ರಾಮದ "ಯೇಸು ನಡೆಸುತ್ತಾನೆ " ಪ್ರಾರ್ಥನ ಮಂದಿರದಲ್ಲಿ ಕ್ರಿಸ್ಮಸ್ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು.

ಹಾಸನದ ಬೆಥೆಲ್ ಚರ್ಚ್ ಸಭಾ ಪಾಲಕರಾದ ರೆವೆರೆಂಡ್ ಜಾಕೋಬ್ ಮಾತನಾಡಿ, ಲೋಕದ ರಕ್ಷಕನಾಗಿ ಜನಿಸಿದ ಯೇಸುವಿನ ಜನನದ ಸುದಿನವನ್ನು ಬಹಳ ಸಂತೋಷದಿಂದ ಸಡಗರದಿಂದ ಆಚರಿಸುತ್ತಿದ್ದೇವೆ. ಈ ಸಂತೋಷ ನಮಗೆ ಮಾತ್ರ ಅಲ್ಲ ಲೋಕದ ಎಲ್ಲಾ ಜನರು ಈ ಹಬ್ಬವನ್ನು ಆಚರಿಸುತ್ತಾರೆ. ಕಾರಣ ಯೇಸುವು ನಿಜವಾದ ರಕ್ಷಕನು ಆತನನ್ನ ನಂಬುವವರು ಒಬ್ಬರಾದರೂ ನಾಶವಾಗುವುದಿಲ್ಲ ಎಲ್ಲರೂ ನಿತ್ಯ ಜೀವ ಪಡೆಯುವರು ಎಂದರು. ಹಾಗೂ ನಾಡಿನ ಎಲ್ಲಾ ಜನರಿಗೆ ಕ್ರಿಸ್ಮಸ್ ಶುಭಾಶಯಗಳು ತಿಳಿಸಿದರು. ಅದೇ ರೀತಿಯಾಗಿ ಯೇಸು ನಡೆಸುತ್ತಾನೆ ಪ್ರಾರ್ಥನೆ ಮಂದಿರದ ಸಭಾ ಪಾಲಕರಾದ ಸೋಮಣ್ಣ ಮಾತನಾಡಿ, ಎಲ್ಲ ಜನರಿಗೆ ಆರೋಗ್ಯ ಆಯಸ್ಸು ಹಾಗೂ ರಕ್ಷಣೆಯನ್ನು ಕರ್ತನಾದ ಯೇಸು ಕ್ರಿಸ್ತನು ನೀಡಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಕಣತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕಾರ್ಜುವಳ್ಳಿ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನಿಲುವಾಗಿಲು ರವಿ ಹಾಗೂ ಸುತ್ತಮುತ್ತಲಿನ ಜನರು ಸಭೆಯವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಕ್ಲೈಮ್ಯಾಕ್ಸ್‌ನತ್ತ : ಜಾರಕಿಹೊಳಿ
ಸರ್ಕಾರಿ ಕಾಮಗಾರಿಗೆ ಅನುಮತಿಸಲು ಲಂಚ ಸ್ವೀಕಾರ- ಶಾಸಕ ಲೋಕಾ ಬಲೆಗೆ!