ಕುಷ್ಟಗಿ: ಕುಷ್ಟಗಿಯಲ್ಲಿ ತಾಲೂಕು ಮಟ್ಟದ ಚುಟುಕು ಸಮ್ಮೇಳನ ಆಯೋಜನೆಗೆ ಮುಂದಾಗಬೇಕು ಎಂದು ಕಸಾಪ ಮಾಜಿ ಅಧ್ಯಕ್ಷ ಹನುಮೇಶ ಗುಮಗೇರಿ ಹೇಳಿದರು.
ಹಿರಿಯ ಪತ್ರಕರ್ತ ರವೀಂದ್ರ ಬಾಕಳೆ ಮಾತನಾಡಿ, ಚುಟುಕು ಕವಿ ಗೋಷ್ಠಿ ಜತೆಗೆ ಚುಟುಕು ರಚನೆ ಮಾಡುವ ಕಾರ್ಯಾಗಾರ ಮಾಡುವದು ಸೂಕ್ತ ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ನವೆಂಬರ್ ತಿಂಗಳಲ್ಲಿ ಕನ್ನಡ ಪರ ವೈವಿಧ್ಯಮಯ ಕಾರ್ಯಕ್ರಮ ನಡೆಯಬೇಕು ಎಂದರು.
ಶಿಕ್ಷಕ ನಟರಾಜ ಸೋನಾರ ಮಾತನಾಡಿ, ತಾಲೂಕಿನಲ್ಲಿ ಸಾಹಿತ್ಯದ ವಾತಾವರಣ ನಿರ್ಮಾಣ ಮಾಡಬೇಕು, ಅದಕ್ಕೆ ಸಹಕರಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಮಾಡೋಣ ಎಂದು ಹೇಳಿದರು.ಸಾಹಿತಿ ವೆಂಕಟೇಶ ಚಾಗಿ ಮಾತನಾಡಿ, ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ಅವಕಾಶ ಸಿಗಬೇಕು, ಕಥೆ, ಕವಿತೆ,ಲೇಖನಗಳನ್ನು ಬರೆಯುವ ಹವ್ಯಾಸ ಹಲವರಲ್ಲಿ ಇದೆ ಅವರನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಶಿಕ್ಷಕ ಹನಮಂತಪ್ಪ ಪುರ್ತಗೇರಿ, ರಾಜೇಸಾಬ್ ನದಾಫ, ಹಿರಿಯ ಶಿಕ್ಷಕ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆ ನಿರಂತರವಾಗಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚುಸಾಪ ಕಾರ್ಯದರ್ಶಿ ವಿಶ್ವನಾಥ ಅಂಬ್ಲಿಕೊಪ್ಪಮಠ, ಸುರೇಶ ಕೊರವರ, ಬುಡ್ನೇಸಾಬ್ ಕಲಾದಗಿ, ಪತ್ರಕರ್ತ ಪರಶಿವಮೂರ್ತಿ ದೋಟಿಹಾಳ, ಅನೀಲಕುಮಾರ ಕಮ್ಮಾರ, ಸಂಗಮೇಶ ಲೂತಿಮಠ ಸೇರಿದಂತೆ ಅನೇಕರು ಇದ್ದರು.