ಹೊಸಕೋಟೆ: ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಪೀಳಿಗೆ ಮೇಲಿದ್ದು, ಪರಿಸರ ಸಂರಕ್ಷಣೆ ದೃಢಸಂಕಲ್ಪ ತೊಡುವುದು ಅಗತ್ಯ ಎಂದು ಟೌನ್ ಬಿಜೆಪಿ ಅಧ್ಯಕ್ಷ ಬಾಲಚಂದ್ರನ್ ತಿಳಿಸಿದರು.
ಹೊಸಕೋಟೆ: ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಪೀಳಿಗೆ ಮೇಲಿದ್ದು, ಪರಿಸರ ಸಂರಕ್ಷಣೆ ದೃಢಸಂಕಲ್ಪ ತೊಡುವುದು ಅಗತ್ಯ ಎಂದು ಟೌನ್ ಬಿಜೆಪಿ ಅಧ್ಯಕ್ಷ ಬಾಲಚಂದ್ರನ್ ತಿಳಿಸಿದರು.
ನಗರದ ಎಂಟಿಬಿ ಉದ್ಯಾನದಲ್ಲಿ ಟೌನ್ ಬಿಜೆಪಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ‍್ಯಕ್ರಮದಲ್ಲಿ ಗಿಡ ನೆಟ್ಟು ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನ ಅತಿಯಾಸೆ ಪರಿಣಾಮ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ರಸ್ತೆ ನಿರ್ಮಾಣ, ದೊಡ್ಡ ದೊಡ್ಡ ಭವನಗಳ ನಿರ್ಮಾಣದ ಹೆಸರಿನಲ್ಲಿ ಮರಗಳನ್ನು ಧರೆಗುಳಿಸುತ್ತಿದ್ದಾನೆ. ಗಿಡಮರಗಳನ್ನು ಬೆಳೆಸದಿದ್ದರೆ ಪರಿಣಾಮ ಮುಂದಿನ ಪೀಳಿಗೆ ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ಪರಿಸರ ರಕ್ಷಣೆಯ ದೃಢಸಂಕಲ್ಪ ತೊಡಬೇಕು. ಈ ನಿಟ್ಟಿನಲ್ಲಿ ಬಿಜೆಪಿ ವತಿಯಿಂದ 3 ತಿಂಗಳು ಕಾಲ ಸಾಕಷ್ಟು ಕಾರ‍್ಯಕ್ರಮ ರೂಪಿಸಿದ್ದು, ಪರಿಣಾಮಕಾರಿ ಅನುಷ್ಠಾನ ಮಾಡಬೇಕು ಎಂದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾದ್ಯಕ್ಷ ದೇವನಗೊಂದಿ ನಾರಾಯಣಸ್ವಾಮಿ ಮಾತನಾಡಿ, ವೃಕ್ಷ ಸಂಪತ್ತು ಒಂದು ರೀತಿ ದೇಶದ ಸಂಪತ್ತಾಗಿದೆ. ಹಲವಾರು ನೆಪವೊಡ್ಡಿ ನೂರಾರು ವರ್ಷಗಳ ಹಳೆಯ ಮರಗಳನ್ನು ಕಡಿಯುವ ಕೆಲಸವನ್ನು ಸಮಾಜದ ಬುದ್ದಿಜೀವಿಗಳು ಮಾಡುತ್ತಿದ್ದಾರೆ. ಆದರೆ ಮನುಷ್ಯ ಜೀವಿಸಲು ಅಗತ್ಯ ಆಮ್ಲಜನಕ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ವೃಕ್ಷ ಸಂಪತ್ತನ್ನು ಉಳಿಸಿ ಬೆಳೆಸಬೇಕು. ಬಿಜೆಪಿ ಪಕ್ಷದ ನಿರ್ದೇಶನದಂತೆ ತಾಲೂಕಿನಲ್ಲಿ ಪಕ್ಷದ ವತಿಯಿಂದ ಪರಿಸರ ದಿನಾಚರಣೆ ಮಾಡಲಾಗಿದೆ ಎಂದರು.
ಈ ವೇಳೆ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಚಿಕ್ಕನಲ್ಲಾಳ ನರಸಿಂಹಯ್ಯ , ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನುರೆಡ್ಡಿ, ಯುವ ಮೋರ್ಚಾ ಅಧ್ಯಕ್ಷ ಕಿರಣ್, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜೆಎಂ.ಹಸೇನ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಒಬಿಸಿ ಜಿಲ್ಲಾ ಉಪಾಧ್ಯಕ್ಷ ಕುಮಾರ್, ಟೌನ್ ಮಹಿಳಾ ಅಧ್ಯಕ್ಷೆ ಯಶೋಧ, ಹಿರಿಯ ಮುಖಂಡ ಕೆಆರ್‌ಬಿ ಶಿವಾನಂದ್ ಹಾಜರಿದ್ದರು.
ಫೋಟೋ: 22 ಹೆಚ್‌ಎಸ್‌ಕೆ 1
ಹೊಸಕೋಟೆ ಟೌನ್ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ‍್ಯಕ್ರಮಕ್ಕೆ ಟೌನ್ ಬಿಜೆಪಿ ಅಧ್ಯಕ್ಷ ಬಾಲಚಂದ್ರ ಗಿಡ ನೆಟ್ಟು ಚಾಲನೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.