ವಿದ್ಯಾವರ್ಧಕ ಪಾಲಿಟೆಕ್ನಿಕ್ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮ

KannadaprabhaNewsNetwork |  
Published : Jun 22, 2025, 11:47 PM IST
22 | Kannada Prabha

ಸಾರಾಂಶ

ಇದೊಂದು ಜ್ಞಾನ ದೇಗುಲ, ಇಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರ ಬಾಂಧವ್ಯ ತುಂಬಾ ಚೆನ್ನಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರುನಗರದ ವಿದ್ಯಾವರ್ಧಕ ಪಾಲಿಟೆಕ್ನಿಕ್ನಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಇನ್ಫೋಸಿಸ್ಗ್ಲೋಬಲ್ಎಜುಕೇಷನ್ಸೆಂಟರ್ಮುಖ್ಯಸ್ಥ ಹಾಗೂ ಸಹ ಉಪಾಧ್ಯಕ್ಷ ಕೆ.ಎಸ್. ಸುಂದರ್ಮಾತನಾಡಿ, ನೀವೆಲ್ಲರೂ ಸೂಕ್ತ ಸಮಯದಲ್ಲಿ ಸರಿಯಾದ ಕಾಲೇಜನ್ನು ಆರಿಸಿಕೊಂಡಿದ್ದೀರಿ, ಈ ಸಂಸ್ಥೆಯ ಆವರಣವನ್ನು ನಾನು ಎರಡು ದಶಕಗಳಿಂದ ನೋಡಿದ್ದೇನೆ. ಇಲ್ಲಿಗೆ ಬಂದರೆ ನನಗೆ ಅನಿರ್ವಚನೀಯ ಆನಂದ ಸಿಗುತ್ತದೆ ಎಂದು ಹೇಳಿದರು.ಇದೊಂದು ಜ್ಞಾನ ದೇಗುಲ, ಇಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರ ಬಾಂಧವ್ಯ ತುಂಬಾ ಚೆನ್ನಾಗಿದೆ. ಇವರು ನಿಮ್ಮ ಮಕ್ಕಳ ಶ್ರೇಯೋಭಿಲಾಷೆ ಬಯಸುತ್ತಾರೆ. ಶಿಕ್ಷಣ ಎಂಬುದು ಪ್ರತಿಯೊಬ್ಬರಿಗೂ ಅಗತ್ಯ. ನೀವಿಲ್ಲಿ ಒಂದು ಕಬ್ಬಿಣದ ತುಂಡಾಗಿ ಬಂದಿದ್ದೀರಿ. ನೀವು ಹೋಗುವಾಗ ಒಂದು ಒಳ್ಳೆಯ ಅಯಸ್ಕಾಂತವಾಗಿ ಹೋಗುತ್ತೀರಿ. ಆ ನಂಬಿಕೆ ನನಗಿದೆ ಎಂದರು.ಈ ಪರಿವರ್ತನೆಗೆ ಪೋಷಕರ ಸಹಕಾರ ತುಂಬಾ ಅಗತ್ಯ. ವಿದ್ಯಾರ್ಥಿಗಳು ತರಗತಿಗಳಿಗೆ ಬರುವ ಮುಂಚೆ ವಿಷಯವನ್ನು ಓದಿಕೊಂಡು ಬರಬೇಕು. ಇದರಿಂದ ವಿಷಯದ ಗ್ರಹಿಕೆ ಸುಲಭವಾಗುತ್ತದೆ. ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಪರಿತಪಿಸಬೇಕು ಹಾಗೆಯೇ ಉಪನ್ಯಾಸಕರು ಆಸಕ್ತಿಯಿಂದ ಕಲಿಸಬೇಕು. ಈಗ ಒಬ್ಬ ವಿದ್ಯಾರ್ಥಿಗೆ ಹೇಳಿಕೊಟ್ಟರೆ ಅವರು ಮುಂದೆ ಇನ್ನು 10 ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ವಿದ್ಯಾರ್ಥಿಗಳ ಜೀವನದಲ್ಲಿ ಇಂಗ್ಲೀಷ್ ಸಂವಹನ ತುಂಬಾ ಮುಖ್ಯ. ದಿನೇ ದಿನೇ ಸಂವಹನ ಕೌಶ್ಯಲವನ್ನು ವೃದ್ಧಿಗೊಳಿಸಿಕೊಳ್ಳಿ ಎಂದರು.ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್ ಮಾತನಾಡಿ, ಮೊಬೈಲ್ ಅನ್ನು ಆದಷ್ಟು ಶಿಕ್ಷಣಕ್ಕೆ ಅಗತ್ಯವಿರುವುದಕ್ಕೆ ಮಾತ್ರ ಬಳಸಲು ಹೇಳಿದರು.2025-26ನೇ ಸಾಲಿನಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಧನ್ಯವಾದ ಅರ್ಪಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆ ಬಿಡಬಾರದು, ಜೀವನದಲ್ಲಿ ಕಲಿಕೆ ನಿರಂತರವಾಗಿರಬೇಕು. ಡಿಪ್ಲೊಮಾ ಓದಿದ ನಂತರ ಸುಲಭವಾಗಿ ಕೆಲಸ ಸಿಗುತ್ತದೆ. ಅದು ನಿಂತ ನೀರಾಗಬಾರದು, ಹರಿವ ನೀರಾಗಬೇಕು. ಆದ್ದರಿಂದ ಮುಂದೆ ವ್ಯಾಸಂಗ ಮಾಡಲು ಸಾಕಷ್ಟು ಅವಕಾಶವಿದೆ. ಅದನ್ನು ಉಪಯೋಗಿಸಿಕೊಳ್ಳಿ ಎಂದು ತಿಳಿಸಿದರು.ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಉತ್ತಮ ಉಪನ್ಯಾಸಕರನ್ನು ಅಭಿನಂದಿಸಲಾಯಿತು.ಉಪನ್ಯಾಸಕ ರಾಕೇಶ್ ಬಾಬು ವಂದಿಸಿದರು. ಪ್ರಾಂಶುಪಾಲ ಡಾ. ಕೃಷ್ಣ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ