ನಗರ ಅಂದ ಚಂದವಾಗಿರಲು ಪೌರ ಕಾರ್ಮಿಕರೇ ಕಾರಣ: ಅಮ್ಜಾದ್ ಪಟೇಲ್

KannadaprabhaNewsNetwork |  
Published : Sep 27, 2024, 01:27 AM ISTUpdated : Sep 27, 2024, 01:28 AM IST
25ಕೆಪಿಎಲ್2:ಕೊಪ್ಪಳ ನಗರದ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಯುಕ್ತ ಕಾರ್ಮಿಕರಿಗೆ ಏರ್ಪಡಿಸಿದ ವಿವಿಧ ಕ್ರೀಡಾಕೂಟದ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಬೆಳಗಿನ ಜಾವ ಸೂರ್ಯೋದಯ ಆಗುವುದಕ್ಕಿಂತ ಮುಂಚೆ ಇಡೀ ನಗರವನ್ನು ಸ್ವಚ್ಛವಾಗಿ ಮಾಡುವವರು ಯಾರಾದರೂ ಇದ್ದರೆ ಅದು ಪೌರಕಾರ್ಮಿಕರು.

ನಗರಸಭೆ ಅಧ್ಯಕ್ಷ । ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಒಂದು ನಗರ ಅಂದ ಚಂದವಾಗಿರುವುದಕ್ಕೆ ಪೌರ ಕಾರ್ಮಿಕರೇ ಕಾರಣ ಎಂದು ನಗರಸಭೆಯ ಅಧ್ಯಕ್ಷ ಅಮ್ಜಾದ್ ಪಟೇಲ್ ಹೇಳಿದರು.

ನಗರದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಪೌರಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಕಾರ್ಮಿಕರಿಗೆ ಏರ್ಪಡಿಸಿದ ವಿವಿಧ ಕ್ರೀಡಾಕೂಟದ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಗರ ಸ್ವಚ್ಛವಾಗಿಡಲು ಪೌರಕಾರ್ಮಿಕರ ಶ್ರಮವಿದೆ. ಬೆಳಗಿನ ಜಾವ ಸೂರ್ಯೋದಯ ಆಗುವುದಕ್ಕಿಂತ ಮುಂಚೆ ಇಡೀ ನಗರವನ್ನು ಸ್ವಚ್ಛವಾಗಿ ಮಾಡುವವರು ಯಾರಾದರೂ ಇದ್ದರೆ ಅದು ಪೌರಕಾರ್ಮಿಕರು ಎಂದರು.

ಪೌರಕಾರ್ಮಿಕರು ದುಶ್ಚಟಗಳಿಗೆ ದಾಸರಾಗಬೇಡಿ. ಅದರಿಂದ ದೂರ ಇರಿ. ನಿಮ್ಮ ಮನೆಗಳಲ್ಲಿ ನಿಮ್ಮ ಕುಟುಂಬ, ಮಕ್ಕಳು ನಿಮ್ಮ ಮೇಲೆ ಅವಲಂಬಿತರಾಗಿರುತ್ತಾರೆ. ಅವರ ಭವಿಷ್ಯದ ಸಲುವಾಗಿ ತಾವು ಶ್ರಮಿಸಬೇಕಾಗಿದೆ. ಇತ್ತೀಚೆಗಷ್ಟೇ ಕಲ್ಯಾಣ ಕರ್ನಾಟಕ ಭಾಗದ ಕೆಲ ಹೊರಗುತ್ತಿಗೆ ಪೌರಕಾರ್ಮಿಕರನ್ನು ಸರ್ಕಾರ ಖಾಯಂಮಾತಿಗೊಳಿಸಿದೆ. ಅದರಂತೆ ಇನ್ನುಳಿದ ಪೌರಕಾರ್ಮಿಕರ ಖಾಯಂಮಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ನಗರಸಭೆ ಉಪಾಧ್ಯೆಕ್ಷೆ ಅಶ್ವಿನಿ ಗದುಗಿನಮಠ್, ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಪೌರಾಯುಕ್ತ ಗಣಪತಿ ಪಾಟೀಲ್, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ನಗರಸಭೆಯ ಸದಸ್ಯರಾದ ಬಸಯ್ಯ ಹಿರೇಮಠ, ಯಲ್ಲಮ್ಮ ರಮೇಶ ಗಿಣಿಗೇರಿ, ಅಜೀಮ್ ಅತ್ತಾರ್, ಸರ್ವೇಶ ಗೌಡ, ಮಲ್ಲಪ್ಪ ಕವಲೂರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಧು, ಕಿರಿಯ ಅಭಿನಂತರ ಸೋಮು ಇತರರಿದ್ದರು. ಈ ವೇಳೆ ಕ್ರೀಡೆಯಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಬಹುಮಾನ ವಿತರಣೆ ಮಾಡಲಾಯಿತು.ಕುಕನೂರು ಪಪಂನಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ:

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಣ್ಣ ಉದ್ದಿಮೆದಾರರಿಗೆ ಸಹಾಯ ಧನ, ಬುದ್ಧಿ ಮತ್ತು ಬಹುವಿಧ ಅಂಗವಿಕಲ ಮಕ್ಕಳ ಆರೈಕೆದಾರರಿಗೆ ಪೋಷಣಾ ಭತ್ಯೆ ಹಾಗೂ ಪ.ಜಾತಿ ಜನರಿಗೆ ಶಸ್ತ್ರ ಚಿಕಿತ್ಸೆಗೆ ಸಹಾಯಧನ ನೀಡಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಕುಕನೂರು ಪಪಂ ವ್ಯಾಪ್ತಿಯ ಖಾಯಂ ನಿವಾಸಿಯಾಗಿರಬೇಕು. ಸೆ. 30 ರೊಳಗೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಪೂರ್ಣ ದಾಖಲಾತಿ ಇರದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ತಿರಸ್ಕರಿಸಲಾಗುವುದು. ಮೊದಲು ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮೊದಲನೇ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು ಎಂದು ಪಪಂ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ