ಪಥಸಂಚಲನದಲ್ಲಿ ಪೌರ ಕಾರ್ಮಿಕರು: ಡಿ.ಜಿ.ಶಾಂತನಗೌಡ ಮೆಚ್ಚುಗೆ

KannadaprabhaNewsNetwork |  
Published : Aug 18, 2024, 01:46 AM IST
ಹೊನ್ನಾಳಿ ಫೋಟೋ 17ಎಚ್,ಎಲ್.ಐ3. ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ  ಪಥಸಂಚಲನದಲ್ಲಿ ಇದೇ ಪ್ರಥಮ ಬಾರಿಗೆ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ಪೌರ ಕಾರ್ಮಿಕರಿಗೆ ಶಾಸಕ ಡಿ.ಜಿ.ಶಾಂತನಗೌಡ ಅವರು ಸಮವಸ್ತ್ರ ಹಾಗೂ ಇತರೆ ಪರಿಕರಗಳನ್ನು ಹಾಗೂ ಸಿಹಿ ವಿತರಿಸಿ ಮಾತನಾಡಿದರು.  | Kannada Prabha

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಥಸಂಚಲನದಲ್ಲಿ ಇದೇ ಪ್ರಥಮ ಬಾರಿಗೆ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ಪೌರ ಕಾರ್ಮಿಕರಿಗೆ ಶಾಸಕ ಡಿ.ಜಿ.ಶಾಂತನಗೌಡ ಸಮವಸ್ತ್ರ, ಇತರೆ ಪರಿಕರ ಸೇರಿ ಸಿಹಿ ವಿತರಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯ ಸರ್ಕಾರ ಇತ್ತೀಚೆಗೆ ಪೌರಕಾರ್ಮಿಕರ ಮಕ್ಕಳಿಗೆ ಮೊರಾರ್ಜಿ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಿ 5ನೇ ತರಗತಿಯಿಂದ ನೇರ ಪ್ರವೇಶದ ಅವಕಾಶ ಕಲ್ಪಿಸಿದ್ದು, ಎಲ್ಲಾ ಪೌರಕಾರ್ಮಿಕರು ಇದರ ಸಮುದಪಯೋಗ ಪಡೆದುಕೊಂಡು ನಿಮ್ಮ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕು ಕ್ರೀಡಾಂಗಣದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹೊನ್ನಾಳಿ ಇತಿಹಾಸದಲ್ಲೇ ಇದೇ ಪ್ರಥಮವಾಗಿ ಪೌರ ಕಾರ್ಮಿಕರು ಇತರರಂತೆ ಸಮವಸ್ತ್ರ ಧರಿಸಿ ಶಿಸ್ತಿನಿಂದ ಪಥಸಂಚಲನದಲ್ಲಿ ಭಾಗವಹಿಸಿ ಪ್ರಶಂಸೆಗೆ ಭಾಜನರಾದ ಕಾರಣ, ಪುರಸಭೆಯಲ್ಲಿ ಶುಕ್ರವಾರ ರಾತ್ರಿ ವಿಶೇಷ ಅಭಿನಂದನಾ ಕಾರ್ಯಕ್ರಮ ಆಯೋಜಿಸಿ ಶಾಸಕ ಡಿ.ಜಿ.ಶಾಂತನಗೌಡ ಸಮವಸ್ತ್ರ, ಶೂ, ಹಾಂಡ್ ಗ್ಲೋಸ್‌, ಶ್ವೆಟರ್ ಜೊತೆಗೆ ಎಲ್ಲರಿಗೂ ಸಿಹಿ ತಿಂಡಿ ಬ್ಯಾಗ್ ವಿತರಿಸಿ ಮಾತನಾಡಿದರು.

ಅದೇಷ್ಟೋ ಪ್ರತಿಭೆಗಳು ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ಸಿಗದೇ ಬೆಳಕಿಗೆ ಬರುವುದಿಲ್ಲ, ಅವರಿಗೂ ಅವಕಾಶ ಸಿಕ್ಕರೆ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಪೊಲೀಸ್, ಗೃಹ ರಕ್ಷಕ ದಳ ಹಾಗೂ ವಿದ್ಯಾರ್ಥಿಗಳಂತೆ ಪೌರ ಕಾರ್ಮಿಕರು ಕೂಡ ಪಥಸಂಚಲನದಲ್ಲಿ ಭಾಗವಹಿಸಿ ತಾವೂ ಏನೂ ಕಡಿಮೆ ಇಲ್ಲ ಎನ್ನುವುದನ್ನು ಅತ್ಯುತ್ತಮವಾಗಿ ಪಥಸಂಚಲನ ಮಾಡುವ ಮೂಲಕ ನಿರೂಪಿಸಿದ್ದಾರೆ, ಇದಕ್ಕಾಗಿ ತಾನು ಶಾಸಕನಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಅಧಿಕಾರಿಗಳು ಸರ್ಕಾರದಿಂದ ಲಭ್ಯವಿರುವ ಎಲ್ಲಾ ಸೌಲಭ್ಯ ಕಾರ್ಮಿಕರಿಗೆ ಒದಗಿಸಿಕೊಡುವ ಕೆಲಸ ಮಾಡಬೇಕು. ಪೌರರ ಸೇವೆ ಅನನ್ಯವಾದದ್ದು ಇವರಿಂದಾಗಿಯೇ ನಗರ, ಪಟ್ಟಣಗಳು ಸ್ವಚ್ಛ ಕಾಣುತ್ತವೆ ಹಾಗೂ ಜನರ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂದರು.

ಇದೇ ವೇಳೆ ಪೌರಕಾರ್ಮಿಕರನ್ನು ಪಥಸಂಚಲನಕ್ಕಾಗಿ ತರಬೇತಿ ನೀಡಿ ಸಜ್ಜುಗೊಳಿಸಿದ ಸ್ಥಳೀಯ ಬಿ.ವಿ.ಎಸ್. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಿವಲಿಂಗಪ್ಪ ಹಾಗೂ ಸಮಾಜ ಕಾರ್ಯಕರ್ತ ಕತ್ತಿಗೆ ನಾಗರಾಜ್‌ರನ್ನು ಸನ್ಮಾನಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ ಪೌರಕಾರ್ಮಿಕರಿಗಾಗಿ ಆರೋಗ್ಯ ತಪಾಸಣೆ ನಿಯಮಿತವಾಗಿ ನಡೆಸಲಾಗುತ್ತಿದ್ದು ಜೊತೆಗೆ ಕುಟುಂಬ ಸಂರಕ್ಷಣೆಗಾಗಿ ವಿಮಾ ಸೌಲಭ್ಯ ಪಡೆಯಲು ಪಾಲಿಸಿ ಕೂಡ ಮಾಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಪುರಸಭೆ ಅಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿ. ಅಭಿಷೇಕ್,ಪುರಸಭೆ ಚುನಾಯಿತ ಪ್ರತಿನಿಧಿಗಳು, ಪುರಸಭೆ ಸಿಬ್ಬಂದಿ, ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''