ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಮೂಲೆ ಮೂಲೆಯಲ್ಲಿರುವ ಕಸವನ್ನು ಪೌರ ಕಾರ್ಮಿಕರು ಸ್ವಚ್ಛತೆ ಮಾಡುತ್ತಾರೆ. ಇದರಿಂದ ಅವರಿಗೆ ಅನೇಕ ಕಾಯಿಲೆ ಬರುವ ಸಾಧ್ಯತೆಗಳು ಇರುವುದರಿಂದ ಮುಂಜಾಗ್ರತವಾಗಿ ಕಾರ್ಮಿಕರ ಆರೋಗ್ಯ ಕಾಪಾಡಬೇಕಾದದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ. ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿ ಇಂತಹ ಉಚಿತ ಆರೋಗ್ಯ ತಪಾಸಣೆಗಳ ಲಾಭ ಪಡೆಯಬೇಕು ಎಂದರು.ಕಳೆದ ಬಾರಿ ನಡೆದ ಪೌರಕಾರ್ಮಿಕರ ಕುಂದು-ಕೊರತೆ ಸಭೆಯಲ್ಲಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಡುವಂತೆ ಕೇಳಿಕೊಂಡಿದ್ದರು. ಪೌರಕಾರ್ಮಿಕರ ಆಶಯದಂತೆ ಪ್ರಪ್ರಥಮ ಬಾರಿಗೆ ನಗರಸಭೆ ವತಿಯಿಂದ ಮೊದಲ ಬಾರಿಗೆ 40 ಪೌರಕಾರ್ಮಿಕರ ತಂಡವನ್ನು ಆರೋಗ್ಯ ತಪಾಸಣೆಗೆ ಕಳುಹಿಸಲಾಗುತ್ತಿದೆ. ಈ ತಪಾಸಣೆ ಮೂಲಕ ನಿಮ್ಮ ಆರೋಗ್ಯ ಸ್ಥಿತಿ ಗೊತ್ತಾದರೆ ಅದನ್ನು ಹುಷಾರಾಗಿ ನೋಡಿಕೊಂಡು ಉತ್ತಮ ಚಿಕಿತ್ಸೆ ಪಡೆಯಲು ಇಂತಹ ಆರೋಗ್ಯ ಶಿಬಿರ ಸಹಕಾರಿಯಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡ ಎಲ್ಲರೂ ಆರೋಗ್ಯವಂತರಾಗಿರಿ, ಇಡೀ ನಗರವನ್ನೇ ಸ್ವಚ್ಛತೆ ಮಾಡುವ ನಿಮ್ಮ ಆರೋಗ್ಯದ ಕಾಳಜಿ ಬಹಳ ಮುಖ್ಯವಾಗಿದೆ. ಚಾಮರಾಜನಗರ ನಗರಸಭೆಗೆ ಇತಿಹಾಸದಲ್ಲೇ ಹೊಸ ಮುನ್ನುಡಿ ಬರೆಯಿರಿ. ಇದೇ ರೀತಿ ಪ್ರತಿ ವರ್ಷ ಮಾಡೋಣ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.ಪೌರಕಾರ್ಮಿಕ ಆರೋಗ್ಯಕ್ಕೆ ವಿಶೇಷ ಕಾಳಜಿ:
ನಗರಸಭಾ ಅಧ್ಯಕ್ಷ ಎಸ್.ಸುರೇಶ್ ಮಾತನಾಡಿ, ನಗರವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರ ಆರೋಗ್ಯ ಕಾಪಾಡಲು ನಗರಸಭೆ ಬದ್ಧವಾಗಿದ್ದು, ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು, ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮಮತ ಬಾಲಸುಬ್ರಹ್ಮಣ್ಯ, ಸದಸ್ಯ ಚಂದ್ರಶೇಖರ್, ಪೌರಾಯುಕ್ತ ರಾಮದಾಸ್, ಹಿರಿಯ ಆರೋಗ್ಯ ನಿರೀಕ್ಷಿಕ ಮಂಜುನಾಥ್, ಕಿರಿಯ ಆರೋಗ್ಯ ನಿರೀಕ್ಷಕಿ ಪುಷ್ಷಾ ಹಾಗೂ ಪೌರಕಾರ್ಮಿಕರು ಹಾಜರಿದ್ದರು.