- ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಒತ್ತಾಯ । ತಾಲೂಕಿಗೆ ಭದ್ರೆ ಹರಿಸಿಯೇ ತೀರುತ್ತೇವೆ: ಶಪಥ
ಕನ್ನಡಪ್ರಭ ವಾರ್ತೆ ಜಗಳೂರು
ಜಗಳೂರು ಪಟ್ಟಣದಲ್ಲಿ ಹಾದುಹೋಗಿರುವ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿಯು ₹೨೦ ಕೋಟಿ ವೆಚ್ಚದ ವಿಸ್ತರಣೆ ಆಗುತ್ತಿದೆ. ಇದು ಶಾಶ್ವತವಾಗಿ ಉಳಿಯುವಂತಹ ಕಾಮಗಾರಿ ಆಗಬೇಕು. ನಿರ್ದಿಷ್ಟವಾಗಿ ಇಷ್ಟೇ ಅಡಿಗಳ ತೆರವು ಎಂಬುದು ಸ್ಪಷ್ಟಪಡಿಸಿ, ಕಾಮಗಾರಿ ನಡೆಸಲು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರದಿಂದ ಆಸ್ತಿ ನಷ್ಟಕ್ಕೆ ಇಂತಿಷ್ಟು ಪರಿಹಾರ ಬಿಡುಗಡೆಯಾಗಲಿದೆ ಎಂದು ಶಾಸಕರು ಹೇಳಿದ್ದರು. ಅದೇ ರೀತಿ ಕಟ್ಟಡದ ಮಾಲೀಕರಿಗೆ ಪರಿಹಾರದ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ನಮ್ಮ ವಿರೋಧವಿಲ್ಲ. ಅವರು ನಡೆದುಕೊಂಡ ರೀತಿಗೆ ನಮ್ಮ ವಿರೋಧವಿದೆ. ರಸ್ತೆ ಅಗಲೀಕರಣ ವಿಚಾರದಲ್ಲಿ ಶಾಸಕ ಬಿ.ದೇವೇಂದ್ರಪ್ಪ ರಸ್ತೆ ಮಧ್ಯೆಯಿಂದ ೬೯ ಅಡಿ ಅಗಲೀಕರಣ ಮಾಡುತ್ತೇನೆ ಎಂದು ಹೇಳಿದ್ದರು. ನಾನು ಆ ಸಂದರ್ಭ ಇದೇನು ಚಿಕ್ಕಪೇಟೆಯಲ್ಲ ಎಂದು ಉದಾಹರಣೆ ಕೊಟ್ಟು ೫೦ ಅಡಿ ರಸ್ತೆ ವಿಸ್ತರಣೆ ಮಾಡಿ ಎಂದು ಸಲಹೆ ನೀಡಿದ್ದೆ. ಆದರೂ, ಶಾಸಕರು ೬೯ ಅಡಿ ವಿಸ್ತರಣೆ ಮಾಡುತ್ತೇವೆ ಎಂದಿದ್ದರು. ರಸ್ತೆ ವಿಸ್ತರಣೆ ಸ್ಪಂದಿಸದ ಅಂಗಡಿ ಮಾಲೀಕರಿಗೆ ಬೆಂಕಿ ಹಚ್ಚುತ್ತೇನೆ ಎಂದು ಧಮ್ಕಿ ಹಾಕಿದ್ದು ರಾಜ್ಯದ ಜನ ನೋಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮರುಳಾರಾಧ್ಯ, ಮಾಜಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ರೇವಣ್ಣ, ಕೆಂಚನಗೌಡ, ಮುರುಗೇಶ್, ಮಂಜುನಾಥಯ್ಯ, ಪ್ರಶಾಂತ್ ಪಾಟೀಲ್, ಸೊಕ್ಕೆ ನಾಗರಾಜ್, ಧರ್ಮ ನಾಯ್ಕ್, ಬಿಸ್ತುವಳ್ಳಿ ಬಾಬು, ಪೂಜಾರ್ ಸಿದ್ದಪ್ಪ, ಓಬಳೇಶ್, ಜೆ.ವಿ. ನಾಗರಾಜ್, ಕಟ್ಟಿಗೆಹಳ್ಳಿ ಮಂಜುನಾಥ್, ಲ್ಯಾಬ್ ಶಿವು ಇತರ ಮುಖಂಡರು ಇದ್ದರು.
-೨೧ಜೆಎಲ್‌ಆರ್‌ಚಿತ್ರ೧ಎ: