ದೇವಳ ಉದ್ಘಾಟನೆಯಲ್ಲಿ ಕೈ-ಕಮಲ ಜಟಾಪಟಿ

KannadaprabhaNewsNetwork |  
Published : Aug 22, 2026, 03:00 AM IST
ಫೋಟೋ- ರಾಜಕುಮಾರ್‌ ತೇಲ್ಕೂರ್‌ | Kannada Prabha

ಸಾರಾಂಶ

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ರಂಜೋಳ ಗ್ರಾಮದಲ್ಲಿ ವೀರಾಂಜನೇಯ ದೇವಸ್ಥಾನ ಉದ್ಘಾಟನೆ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಕಿತ್ತಾಟ ನಡೆದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ರಂಜೋಳ ಗ್ರಾಮದಲ್ಲಿ ವೀರಾಂಜನೇಯ ದೇವಸ್ಥಾನ ಉದ್ಘಾಟನೆ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಕಿತ್ತಾಟ ನಡೆದಿದೆ. ಶನಿವಾರ ದೇವಸ್ಥಾನದ ಉದ್ಘಾಟನೆ ಸಮಾರಂಭ ನಿಗದಿಯಾಗಿದ್ದರಿಂದ ಮುನ್ನಾ ದಿನವಾದ ಶುಕ್ರವಾರ ದೇವಸ್ಥಾನದಲ್ಲಿ ಹೋಮ ಹವನಗಳು ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನ ಉದ್ಘಾಟನೆಗೆ ಆಹ್ವಾನ ನೀಡಿಲ್ಲವೆಂಬ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ - ಬಿಜೆಪಿ ಅಂತ ಅಲ್ಲಿಗೆ ಬಂದು ಕಾರ್ಯಕರ್ತರು ಕಿತ್ತಾಡಿಕೊಂಡಿದ್ದರಿಂದ ವೀರಾಂಜನೇಯ ದೇವಸ್ಥಾನ ಉದ್ಘಾಟನೆಗೆ ರಾಜಕೀಯ ಲೇಪವಾಗಿದೆ. ದೇವಸ್ಥಾನ ಉದ್ಘಾಟನೆಗೆ ಉರಿಲಿಂಗ ಪೆದ್ದಿ ಸಂಸ್ಥಾನದ ಗುರುಗಳು, ಚಂದ್ರಶೇಖರ ಮದನಾ ಅವರನ್ನು ಯಾಕೆ ಕರೆದಿಲ್ಲವೆಂದು ತಗಾದೆ ತೆಗೆದ ಬಿಜೆಪಿ ಕಾರ್ಯಕರ್ತರು ಮಂದಿರದ ಪ್ರಾಂಗಣದಲ್ಲಿ ಕುಳಿತು ಭಜನೆ ಮಾಡುತ್ತ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ದೇವಸ್ಥಾನದೊಳಗೆ ಬಿಜೆಪಿ ವಕ್ತಾರ ಹಾಗೂ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ ಭಜನೆಗೆ ಮುಂದಾದಾಗ ದೇವಸ್ಥಾನದೊಳಗೆ ಭದ್ರತಾ ಕೆಲಸಕ್ಕೆ ನಿಯೋಜಿತರಾಗಿದ್ದ ಪೊಲೀಸರು ಬ್ಯಾರಿಕೇಡ್ ಹಾಕಿ ಬಿಜೆಪಿ ಕಾರ್ಯಕರ್ತರು ಬರದಂತೆ ತಡೆಯಲು ಯತ್ನಿಸಿದ್ದಾರೆ.ಪೊಲೀಸ್ ಬ್ಯಾರಿಕೇಡ್ ಕಿತ್ತು ನುಗ್ಗಿ ಬಂದು ಬಿಜೆಪಿ ಕಾರ್ಯಕರ್ತರು ಮಂದಿರದೊಳಗಿನ ಪ್ರಾಂಗಣದಲ್ಲೇ ಭಜನೆ ಆರಂಭಿಸಿದಾಗ ಅಲ್ಲಿನ ಹೋಮ ಹವನಗಳಿಗೆ ಅಡಚಣೆ ಕಾಡಿದೆ. ಮಂದಿರ ಉದ್ಘಾಟನೆಯ ಸಮೀತಿಯ ಪ್ರಮುಖರು, ಊರವರು ಇದರಿಂದ ಕಸಿವಿಸಿಗೊಂಡಿದ್ದಾರೆ. ಅಷ್ಟರಲ್ಲೇ ಆಕ್ರೋಶ ಹೊರಹಾಕುತ್ತಾ ಬಂದ ಗುಪೊಂದು ಭಜನೆ ನಿರತ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದೆ.ಇದರಿಂದ ವೀರಾಂಜನೇಯ ಸ್ಥಳದಲ್ಲಿ ಕೆಲಕಾಲ ಸ್ಥಳದಲ್ಲಿ ಪ್ರಕ್ಷುಬ್ಧ ವಾತವರಣ ನಿರ್ಮಾಣವಾಗಿದ್ದೂ ಅಲ್ಲದೆ ಉದ್ವಿಗ್ನತೆ ಮನೆ ಮಾಡಿತ್ತು. ಈ ಹಂತದಲ್ಲಿ ಗುಂಪುಗಳ ಘರ್ಷಣೆ ತಪ್ಪಿಸಲು ಪೊಲೀಸರು ದೇವಸ್ಥಾನದ ಒಳಗೆ ಭಜನೆಯಲ್ಲಿ ತೊಡಗಿದ ಬಿಜೆಪಿ ಕಾರ್ಯಕರ್ತರನ್ನು ಹೊರಗೆ ಕಳುಹಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಬೇಕಾಯ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಮಾಜಿ ಶಾಸಕ, ಬಿಜೆಪಿ ಮುಖಂಡ ರಾಜಕುಮಾರ್ ಪಾಟೀಲ್‌ ತೇಲ್ಕೂರ್‌ ಮಾತನಾಡಿ, ರಂಜೋಳದಲ್ಲಿ ನಡೆದಿರೋದು ಬರಿ ಪಕ್ಷ ರಾಜಕಾರಣ ಅಲ್ಲ, ಪಕ್ಕಾ ಜಾತಿ ರಾಜಕಾರಣ, ಸ್ಥಳೀಯ ದಲಿತ ಸ್ವಾಮೀಜಿಗಳನ್ನು ದೂರ ಇಟ್ಟು ದೇವಸ್ಥಾನ ಉದ್ಘಾಟನೆ ಮಾಡುತ್ತಿದ್ದಾರೆಂದು ಎಂದು ಹೇಳುವ ಮೂಲಕ ಸೇಡಂ ಶಾಸಕ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

------ಕೋಟ್ಸ್‌---------

ರಂಜೋಳ ಗ್ರಾಮದ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಬೆಂಬಲಿಗರೊಂದಿಗೆ ಭಜನೆ ಮಾಡುವುದರ ಮೂಲಕ ಶಾಂತ ರೀತಿಯಿಂದ ಧರಣಿ ಸತ್ಯಾಗ್ರಹದ ಮಾಡುತ್ತಿದ್ದೇವು, ಇದನ್ನು ಸಹಿಸದ ಕಾಂಗ್ರೆಸ್ಸಿಗರು ಹಲ್ಲೆಗೆ ಯತ್ನಿಸಿದರು. ಕೊಡ್ಲಾದ ಉರಿಲಿಂಗ ಪೆದ್ದಿಶ್ವರ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಜ್ಞಾನಪ್ರಕಾಶ ಮಹಾಸ್ವಾಮಿಗಳು, ಮಾಜಿ ಉಪಸಭಾಪತಿ ಚಂದ್ರಶೇಖರ ರೆಡ್ಡಿ ದೇಶಮುಖ ಮದನಾ ಅವರನ್ನು ಈ ಕಾಯ೯ಕ್ರಮಕ್ಕೆ ಏಕೆ ಆಹ್ವಾನಿಸಿಲ್ಲವೆಂದು ನಾವು ಕೇಳಿದ್ದೆ ತಪ್ಪಾಯಿತೇ ? ನಮಗೆ ಸಚಿವರ ಬೆಂಬಲವಿದೆ ಎನ್ನುವ ರಂಜೋಳ್‌ ಕಾಂಗ್ರೆಸ್‌ ಕಾರ್ಯಕರ್ತರ ಗೂಂಡಾ ವರ್ತನೆಗೂ ಸಚಿವ ಶರಣ ಪ್ರಕಾಶ ಪಾಟೀಲ್ ಅವರ ಬೆಂಬಲವಿದೆಯಾ ಎಂದು ಕಲಬುರಗಿ ಮಾಜಿ ಶಾಸಕ ಬಿಜೆಪಿ ವಕ್ತಾರ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌ ಎಂದರು.ರಂಜೋಳ ಗ್ರಾಮ ನನ್ನ ಮತಕ್ಷೇತ್ರವಾದ ಸೇಡಂನಲ್ಲಿರುವ ಶಾಂತ ಊರು. ಇಲ್ಲಿನ ಭಕ್ತಜನ ಕೂಡಿಕೊಂಡು ಮಂದಿರ ನಿರ್ಮಿಸಿ ಉದ್ಘಾಟನೆಗೆ ಹೋಮ ಹವನ ಮಾಡುತ್ತಿದ್ದಾರೆ. ಯಾರನ್ನು ಕರೆಯಬೇಕು, ಯಾರನ್ನು ಕರೆಯಬಾರದು ಎಂಬುದು ಸ್ಥಳೀಯರ ನಿರ್ಧಾರವಾಗಿರುತ್ತದೆ. ಆ ಊರಿಗೆ ಹೋಗಿ ಬಿಜೆಪಿಯವರೇ ಧಮಕಿ ಹಾಕುವ ರೀತಿ ವರ್ತಿತಿಸಿದ್ದು ನೋಡಿದರೆ ಇದು ಮಾಜಿ ಶಾಸಕ ತೇಲ್ಕೂರ್‌ ಹಾಗೂ ಅವರ ಸಂಗಡಿಗರ ಅವಿವೇಕಿತನದ ಪರಮಾವಧಿಯಾಗಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕನ್ನಡಪ್ರಭ ಜತೆ ಮಾತನಾಡಿದ ಸಚಿವರು, ರಂಜೋಳಕ್ಕೆ ಹೋಗಿ ನಮ್ಮನ್ಯಾಕೆ ಕರೆದಿಲ್ಲ ಅಂದ್ರೆ ಅವರೇನು ಹೇಳ್ತಾರೆ ಎಂದು ಇವರು ತಿಳಿದುಳಕೋಬೇಕು. ಆಹ್ವಾನ ನೀಡುವುದು ಅಲ್ಲಿನ ಊರವರ ವಿವೇಚನಗೆ ಬಿಟ್ಟ ವಿಚಾರ. ಇಲ್ಲಿ ಕಾಂಗ್ರೆಸ್‌ ಪಕ್ಷದ ಪಾತ್ರವೇ ಇಲ್ಲ. ವಿನಾಕಾರಣ ಕರೆಯದ ಕಡೆ ಹೋಗಿ ಗಲಾಟೆ ಮಾಡಿರುವ ಬಿಜೆಪಿಗರು ಅಶಾಂತಿ ಸೃಷ್ಟಿಸಲು ಯತ್ನಿಸಿದ್ದು ಅಕ್ಷಮ್ಯ, ಜನ ಇದನ್ನೆಲ್ಲ ನೋಡುತ್ತಿದ್ದಾರೆ ಎಂದು ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದರು.ಇದೇನ್‌ ಸರ್ಕಾರಿ ಸಮಾರಂಭವೇ ಶಿಷ್ಟಾಚಾರ ಪಾಲಿಸಲು? ಇಲ್ಲಿ ಭಕ್ತ ಜನರ ನಿರ್ಣಯವೇ ಅಂತಿಮ. ಅದನ್ನು ಪ್ರಸ್ನಿಸುವ ಮೊದಲು ವಿಷಯ ತಿಳಿಯಬೇಕು. ವಿನಾಕಾರಣ ಧಾರ್ಮಿಕ ವಿಷಯದಲ್ಲಿ ರಾಜಕೀಯ ಯಾಕೆ ಬಿಜೆಪಿಗರು ಬೆರೆಸುತ್ತಾರೋ ಗೊತ್ತಿಲ್ಲ. ಮಂದಿರದ ಉದ್ಘಾಟನೆ ಸಮಾರಂಭ ಶನಿವಾರ ನಡೆಯಲಿದ್ದು, ನನಗೆ ಆಹ್ವಾನವಿದೆ. ನಾನು ಅಲ್ಲಿಗೆ ಹೋಗಿ ಬರುವೆ ಎಂದು ಡಾ. ಶರಣಪ್ರಕಾಶ ಕಿಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೋಟೆಲ್, ರೆಸ್ಟೋರೆಂಟ್‌ಗಳ ಮೇಲೆ ದಿಢೀರ್ ದಾಳಿ
ಖರ್ಗೆಗೆ ಅಪಮಾನ ಖಂಡಿಸಿ ಬೀದರಲ್ಲಿ ಡಿಎಸ್ಎಸ್ ಪ್ರತಿಭಟನೆ