ಕನ್ನಡಪ್ರಭ ವಾರ್ತೆ ಕಡೂರು
ಕ್ಷೇತ್ರದ ಕೊತ್ತಿಗೆರೆ ಗ್ರಾಮದಲ್ಲಿ ಸೋಮವಾರ ನೂತನವಾಗಿ ₹15 ಲಕ್ಷ ವೆಚ್ಚದಲ್ಲಿ ಕೆಆರ್ ಐಡಿಎಲ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ ಮಾಡಿ ಮಾತನಾಡಿ ಗ್ರಾಮೀಣ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಚುನಾವಣೆ ಸಂದರ್ಭದಲ್ಲಿ ಕೊತ್ತಿಗೆರೆ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕೋರಿದ್ದಂತೆ (ಶಾಸಕರ ₹9 ಲಕ್ಷ ಸಂಸದರ ₹6 ಲಕ್ಷ) ಒಟ್ಟು ₹15 ಲಕ್ಷಗಳಲ್ಲಿ ಆಧುನಿಕ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. 20 ಲೀ. ನೀರು ₹5 ರು.ಗೆ ಪಡೆಯುವ ಆಧುನಿಕ ಯಂತ್ರ ಅಳವಡಿಸಲಾಗಿದೆ ಎಂದರು.
ಕೊತ್ತಿಗೆರೆದ ಶ್ರೀ ಮಾತಂಗಮ್ಮ ದೇವಾಲಯಕ್ಕೆ ₹4 ಲಕ್ಷ, ಶ್ರೀ ಆಂಜನೇಯ ದೇಗುಲಕ್ಕೆ ₹5 ಲಕ್ಷ ನೀಡಿದ್ದು, ಶ್ರೀ ಕಲ್ಲೇಶ್ವರ ಸಮುದಾಯ ಭವನ ನಿರ್ಮಿಸಲು ಗ್ರಾಮಸ್ಥರು ನಿವೇಶನ ನಿಗದಿಪಡಿಸಿಕೊಂಡರೆ ಅನುದಾನ ನೀಡುವ ಭರವಸೆ ನೀಡಿದರು.ಹುಳಿಗೆರೆ ಗ್ರಾಮಕ್ಕೆ ₹1.6 ಕೋಟಿಯಲ್ಲಿ ಕೆ.ಬಿದರೆ ಸಂಪರ್ಕ ರಸ್ತೆಗೆ ಡಾಂಬರೀಕರಣ,₹15 ಲಕ್ಷ ಹುಳಿಗೆರೆ ಶ್ರೀವೀರಭದ್ರ ಸ್ವಾಮಿ ದೇವಾಲಯದ ಸಿಸಿ ರಸ್ತೆಗೆ, ಗೊಲ್ಲರಹಟ್ಟಿಯಲ್ಲಿ ಶ್ರೀಕೃಷ್ಣ ದೇವಾಲಯ ನಿರ್ಮಾಣಕ್ಕೆ₹ 4 ಲಕ್ಷ, ಬೈರಗೊಂಡನಹಳ್ಳಿ ಯಲ್ಲಿ ಮೊರಾರ್ಜಿ ಶಾಲೆಗೆ ₹22 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. ದೊಡ್ಡಪ್ಪನಹಳ್ಳಿ ಪ್ರಯಾಣಿಕ ತಂಗುದಾಣ ಮಾಡಿಸಿ ಕೊಡುವುದಾಗಿ ಹೇಳಿದರು.
ಗ್ಯಾರಂಟಿ ಯೋಜನೆ ಸದಸ್ಯ ಗುಜ್ಜೇನಹಳ್ಳಿ ತಿಪ್ಪೇಶ್ ಮಾತನಾಡಿದರು. ಯಗಟಿ ಗೋವಿಂದಪ್ಪ, ಪುರದ ರವಿಕುಮಾರ್, ಅಬೀದ್ ಪಾಷಾ,ಕೊತ್ತಿಗೆರೆ ಗ್ರಾಮದ ಗುಡಿ ಗೌಡರು, ಕೆಆರ್ ಐಡಿ ಎಲ್ ಗಿರೀಶ್, ಪುನೀತ್, ಜಯಣ್ಣ, ಪಿಎಸ್ಐ ಮಂಜುನಾಥ್,ಪಿಡಿಒ, ಗ್ರಾಮಸ್ಥರು ಮತ್ತಿತರರು ಇದ್ದರು.