ದೇಶ ಉಳಿಯಲು ಹಿಂದೂ ಧರ್ಮ ಉಳಿಯಬೇಕು

KannadaprabhaNewsNetwork |  
Published : Feb 18, 2026, 02:00 AM IST
15  | Kannada Prabha

ಸಾರಾಂಶ

ದೇವನಹಳ್ಳಿ: ಜಗತ್ತಿನ ಸಂಸ್ಕೃತಿ ನಾಗರಿಕತೆ ಹಾಗೂ ಬದುಕುವ ಕಲೆಯನ್ನು ಹೇಳಿಕೊಟ್ಟವರು ಭಾರತೀಯರು. ಭಾರತ ದೇಶ ಉಳಿಯಬೇಕೆಂದರೆ ಹಿಂದೂ ಧರ್ಮ ಉಳಿಯಬೇಕು. ಈ ನಿಟ್ಟಿನಲ್ಲಿ ಹಿಂದೂ ಸಮಾಜೋತ್ಸವಗಳು ದೇಶದ ಎಲ್ಲೆಡೆ ನಡೆಯಬೇಕು ಎಂದು ಹಿಂದೂ ಸಮಾಜೋತ್ಸವದ ದಿಕ್ಸೂಚಿ ಭಾಷಣ ಮಾಡಿದ ಕಾರ್ಕಳದ ಶ್ರೀಕಾಂತ ಶೆಟ್ಟಿ ಹೇಳಿದರು

ದೇವನಹಳ್ಳಿ: ಜಗತ್ತಿನ ಸಂಸ್ಕೃತಿ ನಾಗರಿಕತೆ ಹಾಗೂ ಬದುಕುವ ಕಲೆಯನ್ನು ಹೇಳಿಕೊಟ್ಟವರು ಭಾರತೀಯರು. ಭಾರತ ದೇಶ ಉಳಿಯಬೇಕೆಂದರೆ ಹಿಂದೂ ಧರ್ಮ ಉಳಿಯಬೇಕು. ಈ ನಿಟ್ಟಿನಲ್ಲಿ ಹಿಂದೂ ಸಮಾಜೋತ್ಸವಗಳು ದೇಶದ ಎಲ್ಲೆಡೆ ನಡೆಯಬೇಕು ಎಂದು ಹಿಂದೂ ಸಮಾಜೋತ್ಸವದ ದಿಕ್ಸೂಚಿ ಭಾಷಣ ಮಾಡಿದ ಕಾರ್ಕಳದ ಶ್ರೀಕಾಂತ ಶೆಟ್ಟಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬೃಹತ್ ಶೋಭಾಯಾತ್ರೆಯಲ್ಲಿ ಪಕ್ಷಾತೀತ ಜಾತ್ಯಾತೀತವಾಗಿ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು, ಪುರುಷರು ಭಾಗವಹಿಸಿ ಹಿಂದೂ ಸಮಾಜೋತ್ಸವ ಯಶಸ್ಸಿಗೆ ಸಾಕ್ಷಿಯಾಗಿದ್ದಾರೆ ಎಂದರು.

ವಿಜಯಪುರ ಬಸವಕಲ್ಯಾಣ ಮಠದ ಮಹದೇವ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ಹಿಂದುಗಳೆಲ್ಲಾ ಒಗ್ಗಟ್ಟಾಗಬೇಕು. ಹಿಂದುಗಳನ್ನು ಜಾಗೃತಿಗೊಳಿಸಲು ಹಿಂದೂ ಸಮಾಜೋತ್ಸವ ಎಲ್ಲೆಡೆ ಹಮ್ಮಿಕೊಳ್ಳಬೇಕು. ದೇಶದ ಪ್ರತಿಯೊಬ್ಬರಲ್ಲಿಯೂ ನಾನು ಮೊದಲು ಭಾರತೀಯ, ನಾನು ಹಿಂದೂ ಎಂಬ ಭಾವನೆ ಮೂಡಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿ ಶ್ರೀ ಆಂಜನೇಯಸ್ವಾಮಿ ದೇವಾಲಯದಿಂದ ಪಟ್ಟಣದ ಪ್ರಮುಖ ರಸ್ತೆಗಳಿಂದ ಕಾಲೇಜು ಆಟದ ಮೈದಾನದವರೆಗೂ ವಿವಿಧ ಕಲಾತಂಡ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶೋಭಾಯಾತ್ರೆ ನಡೆಯಿತು.

ಯಾತ್ರೆಯಲ್ಲಿ ಎಚ್.ಎಂ. ರವಿಕುಮಾರ್, ಎಲ್.ಎನ್.ಅಂಬರೀಶಗೌಡ, ಜಿ.ಚಂದ್ರಣ್ಣ, ಚನ್ನಕೇಶವ, ಆರ್.ಕೆ.ನಂಜೇಗೌಡ, ಅಂಬರೀಶ್ ಕೃಷ್ಣಮೂರ್ತಿ, ದೇsಸೂ ನಾಗರಾಜ್, ಆರ್.ಪುನೀತ, ಎಸ್.ಆರ್.ವಿಜಯಕುಮಾರ್, ಓಬದೇನಹಳ್ಳಿ ಮುನಿಯಪ್ಪ ಗಂಗಾಧರ್, ಜಿ.ಎ.ರವೀಂದ್ರ ಇತರರಿದ್ದರು.

೧೫ ದೇವನಹಳ್ಳಿ ಚಿತ್ರಸುದ್ದಿ: ೦೨

ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಮತ್ತು ಮಹದೇವಸ್ವಾಮೀಜಿಗಳ ಜೊತೆ ಡಾ.ಅಂಬರೀಶಗೌಡ, ಯಂಬ್ರಹಳ್ಳಿ ಅಂಬರೀಶ್, ರವಿಕುಮಾರ್, ದೇಸೂ ನಾಗರಾಜ್, ನಂಜೇಗೌಡ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು: ಶಾಸಕ ಕೆ.ಎಸ್.ಆನಂದ್
‘ರೈತನ ಮದುವೆ ಆಗೋ ಹೆಣ್ಮಕ್ಕಳ ಹೆಸರಲ್ಲಿ ಠೇವಣಿ ಇಡಿ’