15ರಂದು ‘ಸ್ವಚ್ಛ ಕೊಡಗು - ಸುಂದರ ಕೊಡಗು’ ಅಭಿಯಾನ

KannadaprabhaNewsNetwork |  
Published : Oct 13, 2025, 02:03 AM IST
ಅಭಿಯಾನ | Kannada Prabha

ಸಾರಾಂಶ

ಜಿಲ್ಲೆಯಾದ್ಯಂತ ಬೃಹತ್‌ ರೀತಿಯಲ್ಲಿ ಸ್ವಚ್ಛ ಕೊಡಗು ಸುಂದರ ಕೊಡಗು ತ್ಯಾಜ್ಯ ವಿಲೇವಾರಿ ಅಭಿಯಾನ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿಕೂರ್ಗ್‌ ಹೋಟೇಲ್, ರೆಸಾರ್ಟ್‌ ಅಸೋಸಿಯೇಷನ್ ನಿಂದ ಹಲವಾರು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇದೇ ಅ. 15 ರಂದು ಬುಧವಾರ ಕೊಡಗು ಜಿಲ್ಲೆಯಾದ್ಯಂತ ಬೃಹತ್ ರೀತಿಯಲ್ಲಿ ಸ್ವಚ್ಛ ಕೊಡಗು - ಸುಂದರ ಕೊಡಗು - ತ್ಯಾಜ್ಯ ವಿಲೇವಾರಿ ಅಭಿಯಾನ ಆಯೋಜಿಸಲಾಗಿದೆ.15ರಂದು ಬೆಳಗ್ಗೆ 8 ಗಂಟೆಯಿಂದ ಕೊಡಗಿನಾದ್ಯಂತ ರಸ್ತೆ ಬದಿಗಳಲ್ಲಿನ ಕಸ, ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಮೂಲಕ ಕೂರ್ಗ್‌ ಹೋಟೇಲ್, ರೆಸಾರ್ಟ್‌ ಅಸೋಸಿಯೇಷನ್ ಹೊಣೆಯರಿತ ಪ್ರವಾಸೋದ್ಯಮಕ್ಕೆ ಪೂರಕವಾಗಿ ಸ್ಪಂದಿಸಲಿದೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಕೊಡಗು ಹೋಂಸ್ಟೇ ಅಸೋಸಿಯೇಷನ್ , ಕೊಡಗು ಚೇಂಬರ್ ಆಫ್ ಕಾಮರ್ಸ್, ಕೊಡಗು ಟ್ರಾವಲ್ ಅಸೋಸಿಯೇಷನ್, ರೋಟರಿ, ಲಯನ್ಸ್ , ರೆಡ್ ಕ್ರಾಸ್, ಗ್ರೀನ್ ಸಿಟಿ ಫೋರಂ, ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯ ಹಲವಾರು ಸಂಸ್ಥೆಗಳು ಈ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿವೆ ಎಂದು ಕೂರ್ಗ್‌ ಹೋಟೇಲ್, ರೆಸಾರ್ಟ್‌ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ.

ಕೊಡಗಿನಾದ್ಯಂತ ಮುಖ್ಯ ರಸ್ತೆಗಳ ಇಕ್ಕೆಲಗಳೂ ಸೇರಿದಂತೆ ಇತರ ರಸ್ತೆಗಳ ಬದಿಗಳಲ್ಲಿರುವ ತ್ಯಾಜ್ಯಗಳನ್ನು ಆ ವ್ಯಾಪ್ತಿಯಲ್ಲಿರುವ ರೆಸಾಟ್೯, ಹೋಟೇಲ್, ರೆಸ್ಟೋರೆಂಟ್, ವರ್ತಕರು, ಸಂಘ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳ ಸಹಕಾರದಲ್ಲಿ ವಿಲೇವಾರಿ ಮಾಡಿ ಸ್ವಚ್ಛತೆಯ ಸಂದೇಶವನ್ನು ಸಾರಲಾಗುತ್ತದೆ. ಇದೇ ಮೊದಲ ಬಾರಿಗೆ ಕೊಡಗಿನಲ್ಲಿ ಇಂಥಹ ಬೖಹತ್ ರೀತಿಯ ಸ್ವಚ್ಛತಾ ಅಭಿಯಾನ ಏಕದಿನ, ಏಕಕಾಲದಲ್ಲಿ ಆಯೋಜಿಸಲ್ಪಟ್ಟಿದೆ ಎಂದೂ ದಿನೇಶ್ ತಿಳಿಸಿದರು.

ಕೊಡಗನ್ನು ಸ್ವಚ್ಛತೆಯೊಂದಿಗೆ ಸುಂದರವಾಗಿವಲ್ಲಿ ಪ್ರತೀಯೋರ್ವರ ಪಾಲು ಮಹತ್ವದ್ದಾಗಿದೆ. ಹೀಗಾಗಿ ಕೊಡಗಿನ ಪ್ರತೀಯೋರ್ವರೂ ಕೊಡಗಿನ ಸ್ವಚ್ಛತೆಯ ಮೇಲಿನ ಕಾಳಜಿಯಿಂದ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ನಾಸೀರ್ ಅಹಮ್ಮದ್ ಕೋರಿದ್ದಾರೆ. ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಸಂಪರ್ಕಿಸಬೇಕಾದ ಸಂಖ್ಯೆ ದಿನೇಶ್ ಕಾರ್ಯಪ್ಪ. 98441 68223., ನಾಸಿರ್ ಅಹಮದ್ 87623 45879.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ