-ಯುವಾತ್ಮಾ ತಂಡದ ಮಾದರಿ ಕಾರ್ಯ
-ಆಗಷ್ಟ 2 ರಿಂದ ಶುರುವಾಗಲಿರುವ ಶ್ರೀ ಜಯತೀರ್ಥರ ಆರಾಧನೆ
----ಕನ್ನಡಪ್ರಭ ವಾರ್ತೆ ಕಲಬುರಗಿ
ಏತನ್ಮಧ್ಯೆ ಹೈದ್ರಾಬಾದ್‌ನ ಯುವಾತ್ಮಾ ತಂಡದ ನೂರಾರು ಸದಸ್ಯರು ಮಳಖೇಡಕ್ಕೆ ಆಗಮಿಸಿ, ಇಲ್ಲಿನ ಕಾಗಿಣಾ ನದಿ ಪಪಿರಸರ, ವೃಂದಾವನ ಪರಿಸರ, ಮೊಗಸಾಲೆ, ಇಂದ್ರ ಭವನ, ರಥ ಕೋಣೆ, ಭೋಜನ ಶಾಲೆ ಸೇರಿದಂತೆ ಮಳಖೇಡ ಜಯತೀರ್ಥರ ವೃಂದಾವನ ಸಮುಚ್ಚಯದ ಎಲ್ಲಾ ಭಾಗಗಳಲ್ಲಿ ಭರದ ಸ್ವಚ್ಚತೆ ಕೆಲಸ ಕೈಗೆತ್ತಿಕೊಂಡಿದ್ದಾರೆ.
ಈ ಯುವಾತ್ಮಾ ತಂಡದಲ್ಲಿ ಯುವಕರು, ಯುವತಿಯರು ಎಲ್ಲರೂ ಇದ್ದಾರೆ. ಕಳೆದ 2 ದಿನದಿಂದ ಮಳಖೇಡದಲ್ಲಿ ಬಿಡಾರ ಹೂಡಿರುವ ಈ ತಂಡದ ಸದಸ್ಯರು ಕಾಗಿಣಾ ನದಿ ನಪಿರಸರದ ಮಾರ್ಗ, ನೀರು ತುಂಬುವುದು ಪರಿಸರದಲ್ಲಿ ಭರದ ಸ್ವಚ್ಚತೆ ನಡೆಸಿದೆ.
ಇದಲ್ಲದೆ ಭೋಜನ ಶಾಲೆ, ಇಂದ್ರ ಭವನ ಮಂದಿರದಲ್ಲಿಯೂ ಭರದ ಸ್ವಚ್ಚತೆ ಕೈಗೆತ್ತಿಕೊಂಡಿದ್ದ ಇನ್ನೂ 2 ದಿನ ಮಳಖೇಡದಲ್ಲಿದ್ದು, ಸ್ವಚ್ಚತೆ ಕೆಲಸ ಕಾರ್ಯಗಳನ್ನು ಕೈಗಂತ್ತಿಕೊಳ್ಳಲಿದೆ ಎಂದು ತಂಡದ ಮಾರ್ಗದರ್ಶಕ ಪಂ. ವಾಸುದೇವಾಚಾರ್ಯ ಕಾನಗೋವಿ ಹೇಳಿದ್ದಾರೆ.
ಹೈದ್ರಾಬಾದ್ ಯುವಾತ್ಮಾ ತಂಡದ ಯುವಕರ ಜೊತೆಗೆ ಮಳಖೇಡ ಉತ್ತರಾದಿ ಮಠ, ಸ್ಥಳೀಯ ಕಲಬುರಗಿ ಸತ್ಯಾತ್ಮತೀರ್ಥರ ಭಕ್ತವೃಂದದವರು ಅನೇಕ ಯುವಕರು ಈ ಕೆಲಸದಲ್ಲಿ ಪಾಲ್ಗೊಂಡು ಸ್ವಚ್ಚತೆಯ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಮಳಖೇಡದ ವ್ಯವಸ್ಥಾಪಕ ಪಂ. ವೆಂಕಣ್ಣಾಚಾರ್ಯ ಪೂಜಾರಿ ತೀರ್ಥ ಪ್ರಸಾದ, ವಸತಿ ವ್ಯವಸ್ಥೆ ಕಲ್ಪಿಸಿ ಸ್ವಚ್ಚತೆಯ ಸೇವೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಫೋಟೋ- ಯುವಾತ್ಮಾ 1 ಮತ್ತು 2
--
ಫೋಟೋ- ಯುವಾತ್ಮಾ 3 ಮತ್ತು 4ಯುವಾತ್ಮಾ ತಂಡದ ಮಹಿಳೆಯರು ಭೋಜನ ಶಾಲೆ, ಅಡುಗೆ ಮನೆ, ಇಂದ್ರ ಭವನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭರದ ಸ್ವಚ್ಚತೆ ಕೈಗೊಂಡಿರುವುದು.