ಕಾಲ್ತುಳಿತ ಹೊಣೆಹೊತ್ತು ಸಿಎಂ, ಡಿಸಿಎಂ ರಾಜಿನಾಮೆ ನೀಡಲಿ: ಚವ್ಹಾಣ

KannadaprabhaNewsNetwork |  
Published : Jun 17, 2025, 01:33 AM ISTUpdated : Jun 17, 2025, 01:34 AM IST
ಗಜೇಂದ್ರಗಡ ಬೆಂಗಳೂರಿನಲ್ಲಿ ಕಾಲ್ತುಳಿತದಿಂದ ೧೧ ಜನರ ಸಾವಿನ ಹೊಣೆಹೊತ್ತು ಸಿಎಂ, ಡಿಸಿಎಂ ರಾಜಿನಾಮೆ ನೀಡಬೇಕು ಎಂದು ಬಿಜೆಪಿ ರೋಣ ಮತಕ್ಷೇತ್ರದಿಂದ ಸ್ಥಳೀಯ ಕೆಕೆ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಪ್ರಚಾರಗಿಳಿಗೆ ಅಮಾಯಕ ೧೧ ಜನ ಕ್ರೀಡಾಭಿಮಾನಿಗಳ ಸಾವಿಗೆ ಕಾರಣವಾಗಿರುವ ರಾಜ್ಯ ಸರ್ಕಾರದ ಸಿಎಂ ಹಾಗೂ ಡಿಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಕೆ. ಚವ್ಹಾಣ ಹೇಳಿದರು.

ಗಜೇಂದ್ರಗಡ: ಪ್ರಚಾರಗಿಳಿಗೆ ಅಮಾಯಕ ೧೧ ಜನ ಕ್ರೀಡಾಭಿಮಾನಿಗಳ ಸಾವಿಗೆ ಕಾರಣವಾಗಿರುವ ರಾಜ್ಯ ಸರ್ಕಾರದ ಸಿಎಂ ಹಾಗೂ ಡಿಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಕೆ. ಚವ್ಹಾಣ ಹೇಳಿದರು.

ಆರ್‌ಸಿಬಿ ತಂಡದ ಐಪಿಎಲ್ ವಿಜಯೋತ್ಸವ ವೇಳೆ ಬೆಂಗಳೂರಲ್ಲಿ ನಡೆದ ಕಾಲ್ತುಳಿತದ ಸಾವಿಗೆ ರಾಜ್ಯ ಸರ್ಕಾರ ಹೊಣೆಗಾರಿಕೆ ಹೊತ್ತು ಸಿಎಂ ಹಾಗೂ ಡಿಸಿಎಂ ರಾಜಿನಾಮೆಗೆ ಬಿಜೆಪಿ ರೋಣ ಮತಕ್ಷೇತ್ರದಿಂದ ಸೋಮವಾರ ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ರಾಜ್ಯದ ಜನರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನರ ಭಾವನೆಗಳಿಗೆ ವಿರುದ್ಧವಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಾ ಬರುತ್ತಿದೆ. ಪರಿಣಾಮ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿರುವ ಸರ್ಕಾರ ಇತ್ತ ಫಲಾನುಭವಿಗಳ ಖಾತೆಗೆ ಹಣವನ್ನು ಹಾಕುತ್ತಿಲ್ಲ. ಕೇಳಿದರೆ ನಾವೆಲ್ಲಿ ಪ್ರತಿ ತಿಂಗಳು ಹಾಕುತ್ತೇವೆ ಎಂಬ ಸಚಿವರ ಹೇಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿವೆ. ಇತ್ತ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಅಭಿವೃದ್ಧಿಹೀನ ಆಡಳಿತದಿಂದ ಶಾಸಕರು ಬೇಸತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವದಲ್ಲಿ ತಮ್ಮ ಪ್ರಚಾರದ ಗೀಳು ತೀರಿಸಿಕೊಳ್ಳಲು ಮುಂದಾಲೋಚನೆ ಇಲ್ಲದೆ ಕಾರ್ಯಕ್ರಮ ಆಯೋಜಿಸಿದ ಪರಿಣಾಮ ಅಮಾಯಕ ೧೧ ಕ್ರೀಡಾಭಿಮಾನಿಗಳು ಸಾವಿಗೆ ತುತ್ತಾಗಿದ್ದಾರೆ ಎಂದು ಆರೋಪಿಸಿದ ಅವರು, ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತದಿಂದ ಸಾವಿಗೆ ಕಾರಣವಾದ ಕಾಂಗ್ರೆಸ್ ಸರ್ಕಾರದ ಸಿಎಂ ಹಾಗೂ ಡಿಸಿಎಂ ನೈತಿಕ ಹೊಣೆಹೊತ್ತು ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಅಶೋಕ ನವಲಗುಂದ, ಶಿವಾನಂದ ಮಠದ, ಉಮೇಶ ಮಲ್ಲಾಪೂರ ಮಾತನಾಡಿದರು.ಇದಕ್ಕೂ ಮುನ್ನ ಮಾಜಿ ಸಚಿವ ಕಳಕಪ್ಪ ಬಂಡಿ ನಿವಾಸದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳ ಕೂಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿದರು.ಈ ವೇಳೆ ಕರಣ ಬಂಡಿ, ವೀರಪ್ಪ ಪಟ್ಟಣಶೆಟ್ಟಿ, ಯು.ಆರ್. ಚನ್ನಮ್ಮನವರ, ರಾಜೇಂದ್ರ ಘೋರ್ಪಡೆ, ರಮೇಶ ವಕ್ಕರ, ಮುತ್ತಣ್ಣ ಚಟ್ಟೇರ, ಡಿ.ಜಿ. ಕಟ್ಟಿಮನಿ, ಬುಡ್ಡಪ್ಪ ಮೂಲಿಮನಿ, ದಾನು ರಾಠೋಡ, ಸೂಗಿರೇಶ ಕಾಜಗಾರ, ಮಹಾಂತೇಶ ಸೋಮನಕಟ್ಟಿ, ಸಂತೋಷ ಕಡಿವಾಲ, ಮಹಾಂತೇಶ ಪೂಜಾರ, ಹುಲ್ಲಪ್ಪ ಕೆಂಗಾರ, ಯಮನೂರ ತಿರಕೋಜಿ, ಸಂಜು ಲೆಕ್ಕಿಹಾಳ, ಮುದಿಯಪ್ಪ ಕರಡಿ, ವೆಂಕನಗೌಡ ಪಾಟೀಲ, ಪಂಚಾಕ್ಷರಿ ಪಾಟೀಲ, ದುರಗಪ್ಪ ಕಟ್ಟಿಮನಿ ಸೇರಿ ಇತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ