ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಗುರ್ಲಾಪುರ ರೈತರ ಹೋರಾಟ ಸ್ಥಳಕ್ಕೆ ತೆರಳುತ್ತೇನೆ. ನನಗೆ ಯಾವುದೇ ಒತ್ತಡ ಇಲ್ಲ. ರೈತರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ. ಸಮಸ್ಯೆ ಒಮ್ಮೇಲೆ ಬ್ಲಾಸ್ಟ್ ಆಗಿದೆ. ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದೇವೆ ಎಂದರು.ಕಬ್ಬು ಬೆಳೆಗಾರರ ಬೇಡಿಕೆ ಆಗ್ರಹಿಸಿ ನಡೆಯುತ್ತಿರುವ ಪರಿಸ್ಥಿತಿ ಒಮ್ಮೆಲೆ ಬ್ಲಾಸ್ಟ್ ಆಗಿದೆ. ಹಾಗಾಗಿ, ಹೋರಾಟಗಾರರು ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು. ಸಾಮರಸ್ಯದಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಇಲ್ಲಿಯವರೆಗೆ ರೈತ ಸಂಘದವರು ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದ್ದಾರೆ. ಆ ಹೋರಾಟಕ್ಕೆ ಒಂದು ಶಕ್ತಿ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ. ಎಚ್.ಕೆ.ಪಾಟೀಲರು ಸ್ಥಳಕ್ಕೆ ಹೋಗಿ ಬಂದಿದ್ದಾರೆ. ಆ ಸಂದರ್ಭದಲ್ಲಿ ವಿರೋಧ ಇರುವುದೇ. ಆದರೆ, ರೈತರ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಕಬ್ಬಿಗೆ ದರ ಕೊಡುವುದು ನಮ್ಮ ಕೈಯಲ್ಲಿ ಇಲ್ಲ. ಕೇಂದ್ರ ಸರ್ಕಾರದ ಕಡೆ ಇದೆ. ನಾನು ಸಕ್ಕರೆ ಸಚಿವನಾಗಿ ಪ್ರತಿಭಟನಾ ಸ್ಥಳಕ್ಕೆ ಹೋಗಿಲ್ಲ ಎಂದು ಆರೋಪಿಸುತ್ತಿದ್ದಿರಿ. ಆದರೆ, ದೇಶದ ಸಕ್ಕರೆ ಸಚಿವರು ಕರ್ನಾಟಕ ರಾಜ್ಯದವರೇ ಇದ್ದಾರೆ. ದುರ್ದೈವಶಾತ್ ಪ್ರಹ್ಲಾದ ಜೋಶಿ ಅವರ ಹೆಸರು ಯಾರೂ ಇಲ್ಲಿಯವರೆಗೂ ತೆಗೆದಿಲ್ಲ ಎಂದು ತಿರುಗೇಟು ನೀಡಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಮಾಡಿರುವ ಆರೋಪಕ್ಕೆ ಉತ್ತರ ಕೊಡಲು ನಾನು ಬಂದಿಲ್ಲ. ಸಮಸ್ಯೆ ಪರಿಹರಿಸಲು ಬಂದಿದ್ದೇನೆ. ರೈತರ ಸಮಸ್ಯೆ ಬಗೆಹರಿಸುವುದು ಬಿಜೆಪಿಯವರ ಕೈಯಲ್ಲಿದೆ. ಈಗಲೂ ಅವರ ಕೈಯಲ್ಲಿಯೇ ಇದೆ. ಕಬ್ಬಿಗೆ ಎಫ್ಆರ್‌ಪಿ ದರ ನಿಗದಿ ಮಾಡುವುದು ಕೇಂದ್ರದ ಕಡೆ ಇದೆ. ಕೇಂದ್ರದವರು ದೇಶಕ್ಕೆ ಎಫ್ಆರ್‌ಪಿ ದರ ನಿಗದಿ ಮಾಡಬಹುದು. ಆದರೆ, ರೈತರ ಬೇಡಿಕೆ ಹೆಚ್ಚಿನದ್ದು ಇದೆ. ಆ ಪ್ರಯತ್ನವನ್ನು ಎಲ್ಲರೂ ಮಾಡುತ್ತೇವೆ.
-ಶಿವಾನಂದ ಪಾಟೀಲ, ಸಕ್ಕರೆ ಸಚಿವರು.