ಕನ್ನಡಪ್ರಭ ವಾರ್ತೆ ಗದಗ
ಮಂಗಳವಾರ ಇಲ್ಲಿ ‘ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ ಹಮ್ಮಿಕೊಂಡಿದ್ದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಲಕ್ಕುಂಡಿ ಚಾಲುಕ್ಯರ ರಾಜಧಾನಿ ಆಗಿತ್ತು. ಚಾಲುಕ್ಯರ ಕಾಲದಲ್ಲಿ ಇಲ್ಲಿ ದೇವಸ್ಥಾನ, ಕೋಟೆ ನಿರ್ಮಿಸಲಾಗಿದೆ. ಇಲ್ಲಿ ಸಿಗುವ ಅವಶೇಷಗಳಿಂದ ಆ ಕಾಲದ ಶಿಲಾಶಾಸನಗಳ ಪರಿಚಯ ಮತ್ತು ರಾಜ್ಯಭಾರದ ಮಾಹಿತಿ ದೊರಕಿದೆ. ಸಚಿವ ಎಚ್.ಕೆ.ಪಾಟೀಲರ ಆಸಕ್ತಿಯಿಂದಾಗಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ರಚನೆ ನಮ್ಮ ಸರ್ಕಾರದ ಅವಧಿಯಲ್ಲೇ ಆಗಿದೆ. ಇಲ್ಲಿ ದೊರೆತಿರುವ ಅವಶೇಷಗಳ ಪುನರುಜ್ಜೀವನಕ್ಕೆ ಸರ್ಕಾರದಿಂದ ಹಣ ಕೊಟ್ಟಿದ್ದೇವೆ. ಇದರಿಂದ ಐತಿಹಾಸಿಕ ಕುರುಹುಗಳನ್ನು ಸಂಗ್ರಹಿಸಲು, ರಕ್ಷಿಸಲು ಸಾಧ್ಯವಾಗಿದೆ ಎಂದರು.ಬಯಲು ವಸ್ತು ಸಂಗ್ರಹಾಲಯ:
ಹಿಂದೆ ಬಂಗಾರಪ್ಪನವರ ಸರ್ಕಾರದಲ್ಲಿ ಇಂಥ ದೇವಸ್ಥಾನ, ಐತಿಹಾಸಿಕ ಸ್ಮಾರಕಗಳ ಪುನರುಜ್ಜೀವನಕ್ಕೆ ಆರಾಧನ ಯೋಜನೆ ಜಾರಿಯಲ್ಲಿತ್ತು. ನಂತರದ ದಿನಗಳಲ್ಲಿ ಅದು ನಿಂತು ಹೋಗಿತ್ತು. ಈಗ ಪ್ರವಾಸೋದ್ಯಮ ಇಲಾಖೆ ಮೂಲಕ ಈ ಪುನಃಶ್ಚೇತನ ಕಾರ್ಯಗಳು ನಿರಂತರ ನಡೆಯುತ್ತಿವೆ. ಲಕ್ಕುಂಡಿ ಮಾದರಿಯಲ್ಲಿ ರಾಜ್ಯಾದ್ಯಂತ ಕಾರ್ಯಗಳು ನಡೆಯಲಿವೆ ಎಂದು ಹೇಳಿದರು.
ಉತ್ಖನನ ಕಾರ್ಯಕ್ಕೆ ಚಾಲನೆ:
ಉತ್ಖನನ ಪ್ರಾರಂಭಿಸುವ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಬೆಳ್ಳಿಯ ಬಿಂದಿಗೆಯಲ್ಲಿದ್ದ ಹಾಲನ್ನು ಸಿಎಂ ಕೈಗೆ ಹಾಕಿದರು, ಇದಕ್ಕೆ ನರಗುಂದ ಶಾಸಕ ಸಿ.ಸಿ.ಪಾಟೀಲ ಸಾಥ್ ನೀಡಿದರು. ಹಾಲಿನಿಂದ ಕೈ ತೊಳೆದ ಸಿಎಂ, ನಂತರ ಬೆಳ್ಳಿಯಿಂದ ನಿರ್ಮಿಸಲಾದ ಹಾರೆಯಿಂದ ನೆಲ ಅಗೆಯುವ ಮೂಲಕ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ, ಪಕ್ಕದ ಆವರಣದಲ್ಲಿ ಸಂಗ್ರಹಿಸಲಾದ ಪ್ರಾಚ್ಯ ವಸ್ತುಗಳನ್ನು ವೀಕ್ಷಿಸಿ, ಲಕ್ಕುಂಡಿಯ ಶ್ರೀಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.ಬಾಕ್ಸ್:
ವಿಶೇಷವಾಗಿ ಬೆಳ್ಳಿಯಲ್ಲಿ ವಿನ್ಯಾಸಗೊಳಿಸಿದ ಗುದ್ದಲಿ, ಸಲಕಿ, ತ್ಯಾಪಿ, ಪಿಕಾಸಿ, ಹಾರೆ ಕೋಲು, ಮಣ್ಣು ತುಂಬುವ ಬುಟ್ಟಿ ಸೇರಿದಂತೆ ದೇವಸ್ಥಾನ ನಿರ್ಮಾಣಕ್ಕೆ ಬಳಸುವ ಸಾಮಗ್ರಿಗಳಿಂದಲೇ ಉತ್ಖನನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ, ಆ ಎಲ್ಲ ವಸ್ತುಗಳನ್ನು ಸಿದ್ದರಾಮಯ್ಯ ಅವರಿಗೆ ನೆನಪಿನ ಕಾಣಿಕೆ ರೂಪದಲ್ಲಿ ನೀಡಲಾಯಿತು.ಬಾಕ್ಸ್;
ಲಕ್ಕುಂಡಿ ಈ ಹಿಂದೆ ಚಾಲುಕ್ಯರ ರಾಜಧಾನಿಯಾಗಿತ್ತು. ಅಲ್ಲದೆ, ಹೊಯ್ಸಳರ ಆಡಳಿತದ ಪ್ರಭಾವಕ್ಕೂ ಒಳಗಾಗಿತ್ತು. ಜೊತೆಗೆ, 10ನೇ ಶತಮಾನದಲ್ಲಿಯೇ ಟಂಕಸಾಲೆ ನಿರ್ಮಾಣದೊಂದಿಗೆ ಪ್ರಮುಖ ವಾಣಿಜ್ಯ ನಗರವಾಗಿಯೂ ಅಭಿವೃದ್ಧಿ ಹೊಂದಿತ್ತು. ಅತ್ತಿಮಬ್ಬೆಯ ಲಕ್ಕುಂಡಿ ಶಾಸನ ಸೇರಿ ಕನ್ನಡ, ಸಂಸ್ಕೃತ ಭಾಷೆಯ ಹಲವು ಶಾಸನಗಳು ಇಲ್ಲಿ ಸಿಕ್ಕಿವೆ. ಹಿಂದೂ, ಜೈನ ಸ್ಮಾರಕಗಳು ಸೇರಿ ಕಲ್ಯಾಣ ಚಾಲುಕ್ಯ ಯುಗದ ಹಿಂದೂ ವಾಸ್ತುಶಿಲ್ಪದ ಅಧ್ಯಯನಕ್ಕೆ ಇದು ಪ್ರಮುಖ ಕೇಂದ್ರ. ನಂತರದ ದಿನಗಳಲ್ಲಿ ಪರಕೀಯರ ದಾಳಿ ಸೇರಿ ಹಲವು ಕಾರಣಗಳಿಂದ ಇಲ್ಲಿನ ಈ ಅವಶೇಷಗಳು ಹುದುಗಿ ಹೋಗಿವೆ. ಇವುಗಳ ಉತ್ಖನನ ನಡೆಸಿ, ಸಿಗುವ ಪ್ರಾಚ್ಯಾವಶೇಷಗಳನ್ನು ಸಂರಕ್ಷಿಸುವ ಕಾರ್ಯ ಇದಾಗಿದೆ.
ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ರಾಜ್ಯದ ಪಾರಂಪರಿಕ ಸಂಪತ್ತನ್ನು ಸಂರಕ್ಷಿಸುವ ದಿಸೆಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ.ಶಿಕ್ಷಣ, ಅನ್ನ, ಆರೋಗ್ಯಕ್ಕೆ ಸರ್ಕಾರದ ಆದ್ಯತೆಶಿಕ್ಷಣ, ಅನ್ನ, ಆರೋಗ್ಯಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.ಮಂಗಳವಾರ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಕರ್ನಾಟಕ ಕುರುಬರ ಸಂಘ ಆಯೋಜಿಸಿದ್ದ ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ತಿಳಿಸಿರುವ ಶಿಕ್ಷಣ, ಸಂಘಟನೆ, ಹೋರಾಟ ಎನ್ನುವ ಮಂತ್ರವನ್ನು ಎಲ್ಲರೂ ಪಾಲಿಸಬೇಕು. ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಸಂಪೂರ್ಣ ಶಿಕ್ಷಣ ಸಾಧ್ಯವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ಜಾರಿಗೆ ಮೊದಲೇ ಮುಂದಾಲೋಚನೆಯಿಂದ ಪತ್ತಿನ ಸಹಕಾರ ಸಂಘ ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಶೂದ್ರ ವರ್ಗದ ಜನ ಹಿಂದುಳಿಯಲು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದೇ ಪ್ರಮುಖ ಕಾರಣ. ಶೂದ್ರರು, ದಲಿತರು ಮಾತ್ರ ಶಿಕ್ಷಣ ಪಡೆಯುವಂತಿರಲಿಲ್ಲ. ಅಂಬೇಡ್ಕರ್ ಅವರ ಜೀವಮಾನದ ಹೋರಾಟವೇ ಈ ಅಸಮಾನತೆ ಅಳಿಸುವುದಾಗಿತ್ತು. ಇದಕ್ಕೆ ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಅಂಬೇಡ್ಕರ್ ಮನಗಂಡಿದ್ದರು ಎಂದು ಹೇಳಿದರು.+++ಶಿಕ್ಷಣ ದೊರಕದಿದ್ದರೆ ಸ್ವಾಭಿಮಾನಿಗಳಾಗಿ ಇರಲು ಸಾಧ್ಯವೇ ಇಲ್ಲ. ನನಗೆ ರಾಜಪ್ಪ ಎನ್ನುವ ಶಿಕ್ಷಕರು ಸಿಗದೇ ಹೋಗಿದ್ದರೆ ಶಿಕ್ಷಣವೂ ಸಿಗುತ್ತಿರಲಿಲ್ಲ, ನಾನು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಕುರಿ, ಹಸು ಕಾಯ್ಕೊಂಡು ಇರಬೇಕಾಗಿತ್ತು. ಅದಕ್ಕೇ ನಮ್ಮ ಸರ್ಕಾರ ಶಿಕ್ಷಣ-ಆರೋಗ್ಯ-ಅನ್ನಕ್ಕೆ ಪ್ರಮುಖ ಆದ್ಯತೆ ನೀಡುತ್ತಿದೆ. ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧಿಯವರ ಆಶಯಗಳು ಈಡೇರಬೇಕಾದರೆ ಸರ್ವರಿಗೂ ಶಿಕ್ಷಣ ಸಿಗಬೇಕು. ಎಲ್ಲರಿಗೂ ಆರ್ಥಿಕ ಶಕ್ತಿ ಬರಬೇಕು ಎಂದರು.ಕೋಟ್:
ಗದಗ ನಗರದಲ್ಲಿ ನೂರು ವರ್ಷಗಳ ಹಿಂದೆಯೇ ಕುರುಬ ಸಮಾಜ ಸಂಘಟಿಸಿ ಸಹಕಾರ ಸಂಘ ಸ್ಥಾಪಿಸಿದ್ದು, ಅತ್ಯಂತ ಮುಂದಾಲೋಚನೆಯ ಸಾಮಾಜಿಕ ನ್ಯಾಯದ ಕಾರ್ಯವಾಗಿದೆ.- ಸಿದ್ದರಾಮಯ್ಯ, ಮುಖ್ಯಮಂತ್ರಿ.