ಕುಣಿಗಲ್‌ ತಾಲೂಕಿನ ಮೂರು ಟಿಎಂಸಿ ನೀರು ಹರಿಸಿ

KannadaprabhaNewsNetwork |  
Published : Jun 04, 2025, 12:36 AM IST
ಪೋಟೋ ಇದೆ : 3 ಕೆಜಿಎಲ್ 1 : ಪಟ್ಟಣದ ಜ್ಞಾನಜ್ಯೋತಿ ಗುರುಕುಲದಲ್ಲಿ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ   ಕರೆದಿದ್ದ ಪತ್ರಿಕಾಗೋಷ್ಠಿ | Kannada Prabha

ಸಾರಾಂಶ

ತುಮಕೂರು ಜಿಲ್ಲೆಗೆ ಕುಣಿಗಲ್ ಹೋರಾಟದಿಂದ ನೀರು ಬಂದಿದೆ ಮೊದಲು ಕುಣಿಗಲ್ ಪಾಲಿನ ನೀರು ಮೂರು ಟಿಎಂಸಿ ಹರಿಸಬೇಕೆಂದು ಆರು ಜನ ಸ್ವಾಮೀಜಿಗಳು ಹಕ್ಕು ಒತ್ತಾಯ ಮಾಡಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್ ತುಮಕೂರು ಜಿಲ್ಲೆಗೆ ಕುಣಿಗಲ್ ಹೋರಾಟದಿಂದ ನೀರು ಬಂದಿದೆ ಮೊದಲು ಕುಣಿಗಲ್ ಪಾಲಿನ ನೀರು ಮೂರು ಟಿಎಂಸಿ ಹರಿಸಬೇಕೆಂದು ಆರು ಜನ ಸ್ವಾಮೀಜಿಗಳು ಹಕ್ಕು ಒತ್ತಾಯ ಮಾಡಿದರು. ಕುಣಿಗಲ್ ಪಟ್ಟಣದ ಜ್ಞಾನಜ್ಯೋತಿ ಗುರುಕುಲದಲ್ಲಿ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕುಣಿಗಲ್ ತಾಲೂಕಿನ ಹೋರಾಟಗಾರರಾದ ವೈ ಕೆ ರಾಮಯ್ಯ, ಹುಚ್ಚ ಮಾಸ್ತಿ ಗೌಡ ಸೇರಿದಂತೆ ಹಲವಾರು ನಾಯಕರ ಹೋರಾಟದ ಫಲವಾಗಿ ತುಮಕೂರು ಜಿಲ್ಲೆಗೆ ನೀರು ಬಂದಿದೆ ಅಂದಿನ ರಾಜಕಾರಣಿಗಳು ಕುಣಿಗಲ್ ಗುರಿಯಾಗಿಸಿ ನೀರು ತರುವ ಕೆಲಸಕ್ಕೆ ಕೈ ಹಾಕಲಿಲ್ಲ ಜಿಲ್ಲೆಯ ಜನರ ಉದ್ದೇಶದ ಜೊತೆಗೆ ಹೋರಾಟ ಮಾಡಿ ಹೇಮಾವತಿ ನಾಲೆಯಿಂದ ತುಮಕೂರಿನ ಎಲ್ಲಾ ಭಾಗಗಳಿಗೂ ನೀರು ತರುವ ಕೆಲಸ ಮಾಡಿದ್ದರು. ಆದರೆ ಕೊನೆಯ ಭಾಗದಲ್ಲಿರುವ ಕುಣಿಗಲ್ ಜನತೆಗೆ ಇದುವರೆಗೂ ಆಗುತ್ತಿರುವ ಅನ್ಯಾಯ ಮುಂದುವರಿದಿದೆ. ಕುಣಿಗಲ್ ಪಾಲಿನ 90ರಷ್ಟು ನೀರನ್ನು ಸತತವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಕುಣಿಗಲ್ ಪಾಲಿನ ನೀರನ್ನು ಪಡೆಯಬೇಕಾದರೆ ರೈತರಿಗೆ ಯಾವುದೇ ತೊಂದರೆ ಆಗದೆ ಪೈಪ್ ಲೈನ್ ಮೂಲಕ ನೀರು ತರುವುದರಿಂದ ಯಶಸ್ವಿ ಕಾರ್ಯಾಚರಣೆ ಆಗುತ್ತದೆ ಇದನ್ನು ರಾಜಕೀಯ ಉದ್ದೇಶಕ್ಕೆ ಬಳಸುವುದು ಸರಿಯಲ್ಲ ಎಂದರು. ಕುಣಿಗಲ್ ಗೆ ಬಾರದ ನೀರು ಮಾಗಡಿಗೆ ಕುಣಿಗಲ್ ಪಾಲಿನ ಮೂರು ಟಿಎಂಸಿ ನೀರನ್ನು ಪಡೆಯಲು ಇದುವರೆಗೂ ಸಾಧ್ಯವಾಗುತ್ತಿಲ್ಲ. ಆದರೆ ಮಾಗಡಿ ರಾಮನಗರ ಭಾಗಕ್ಕೆ ನೀರು ತೆಗೆದುಕೊಂಡು ಹೋಗುತ್ತಾರೆ ಎಂಬುದು ಸರಿ ಇಲ್ಲ. ಕುಣಿಗಲ್ ಗೆ ಬರಬೇಕಾಗಿರುವ ಸಂಪೂರ್ಣ ನೀರನ್ನು ಲಿಂಕ್ ಮೂಲಕ ಪಡೆದುಕೊಂಡು ಈ ತಾಲೂಕಿನಲ್ಲಿ ನಿಂತಿರುವ ಬಹುತೇಕ ಹೇಮಾವತಿ ಕಾಲುವೆಗಳನ್ನ ದುರಸ್ಥಿ ಸಂಪೂರ್ಣಗೊಳಿಸಿ ಪ್ರತಿ ಎಲ್ಲಾ ಹೋಬಳಿಗೂ ನೀರು ಸರಬರಾಜು ಆಗುವ ರೀತಿ ಮತ್ತು ಪ್ರತಿಯೊಂದು ಗ್ರಾಮದ ಕೆರೆ ಕಟ್ಟೆಗಳನ್ನು ತುಂಬಿಸುವ ಪ್ರಯತ್ನ ಆಗಬೇಕಿದೆ ಎಂದರು. ಹೇಮಾವತಿ, ಕೃಷ್ಣ , ಶಿಂಷಾ ಹಲವಾರು ಕೊಳ್ಳಗಳ ವಿಚಾರ ಬೇಕಿಲ್ಲ ಪ್ರತಿಯೊಂದು ಕೂಡ ಕುಡಿಯುವ ನೀರು ವ್ಯವಸಾಯ ಹೀಗೆ ನೀರಿನ ಸಮಸ್ಯೆ ಬಗೆಹರಿಸಬೇಕು ಕುಣಿಗಲ್ ತಾಲೂಕಿನಲ್ಲಿ ಸಾವಿರ ಹಳ್ಳಿಗಳಿಗಿಂತ ಹೆಚ್ಚು ಅಂತರ್ಜಲ ಕುಸಿದಿದೆ ರೈತರು ಕಂಗಾಲಾಗಿದ್ದಾರೆ ಕುಡಿಯುವ ನೀರಿನ ಸಮಸ್ಯೆ ಮತ್ತು ಶಾಲೆ, ಕಾಲೇಜು ಸೇರಿದಂತೆ ಮನೆಗಳನ್ನು ತೀವ್ರವಾಗಿ ಕಾಡಲಾರಂಭಿಸಿದೆ. ಇಂತಹ ಸಂದರ್ಭದಲ್ಲಿ ಪಕ್ಕದ ತಾಲೂಕು ಜಿಲ್ಲೆಯವರು ಮತ್ತೊಂದು ತಾಲೂಕಿಗೆ ಸಹಕಾರ ಮಾಡಬೇಕಿದೆ ಕುಣಿಗಲ್ ಪಾಲಿನ ನೀರನ್ನು ತರಲು ಹೋರಾಟ ನಿರಂತರವಾಗಿ ನಡೆಯಬೇಕೆಂದರು. ಕುಣಿಗಲ್ ಪಾಲಿನ ನೀರನ್ನು ಪಡೆಯುವ ಉದ್ದೇಶಕ್ಕೆ ತುಮಕೂರು ಜಿಲ್ಲೆಯ ಯಾವುದೇ ನಾಯಕರು ತೊಂದರೆ ಮಾಡಬೇಡಿ ಯಾಕೆಂದರೆ ಕುಣಿಗಲ್ ಜನರ ಹೋರಾಟದ ಫಲವಾಗಿ ತುಮಕೂರು ಜನತೆ ಸೇರಿದಂತೆ ಇತರ ಭಾಗಗಳಿಗೆ ನೀರು ಬರಲು ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಹಿತ್ತಲಹಳ್ಳಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಹುಲಿಯೂರು ದುರ್ಗಾ ಸಿದ್ದಗಂಗಾ ಮಠದ ಸಿದ್ದಲಿಂಗ ಶಿವಾನಂದ ಸ್ವಾಮೀಜಿ, ಅರೆ ಶಂಕರ ಮಠದ ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿ, ಭದ್ರಗಿರಿ ಮಠದ ವೀರಭದ್ರ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ