ಕನ್ನಡಪ್ರಭ ವಾರ್ತೆ ಕೋಲಾರ ಕೋಲಾರ ವಿಧಾನ ಸಭಾ ಕ್ಷೇತ್ರದ ಶೇ.೯೯ ರಷ್ಟು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ತಾಲೂಕಿನ ಸೂಲೂರು ಗ್ರಾಮ ಪಂಚಾಯಿತಿ ಕಟ್ಟಡದ ಮೊದಲ ಅಂತಸ್ತಿನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ, ೧೦೦ ಮಂದಿ ವಿಕಲಚೇತನರಿಗೆ ತಲಾ ೫ ಸಾವಿರ ರೂ ಸಹಾಯಧನ, ಪರಿಶಿಷ್ಟ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನವಾಗಿ ತಲಾ ೫ ಸಾವಿರಗಳ ಚೆಕ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ರಾಪಂ ಕಟ್ಟಡಕ್ಕೆ ₹40 ಲಕ್ಷ ವೆಚ್ಚ
ಕೈಗಾರಿಕಾ ಪ್ರದೇಶದಲ್ಲಿ ಠಾಣೆ
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ನರಸಾಪುರ ಕೈಗಾರಿಕಾ ವಲಯದಲ್ಲಿ ಪೊಲೀಸ್ ಸ್ಟೇಷನ್ ನಿರ್ಮಾಣಕ್ಕೆ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದು, ಶಾಸಕರ ಮನವಿಗೆ ಸ್ಪಂದನೆ ನೀಡಿದ್ದಾರೆ ಎಂದರು. ಯೋಜನಾ ಪ್ರಾಧಿಕಾರದಿಂದ ಹೊಸದಾಗಿ ವೇಮಗಲ್, ನರಸಾಪುರಕ್ಕೆ ಒಳಪಟ್ಟಿದ್ದು, ಸೂಲೂರು ಹಾಗೂ ಅರಾಭಿಕೊತ್ತನೂರು ವ್ಯಾಪ್ತಿಯ ಗ್ರಾಮಗಳ ಕೈಗಾರಿಕೆಗಳಿಂದ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ಕೊತ್ತೂರು ಮಂಜುನಾಥ್ ಇವರಿಂದ ಯೋಜನಾ ಪ್ರಾಧಿಕಾರವಾಗಿದೆ ಎಂದರು.₹ ೪೦ ಲಕ್ಷ ವೆಚ್ಚದ ಗ್ರಾಮಸೌಧಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಪ್ರಾಸ್ತವಿಕವಾಗಿ ಮಾತನಾಡಿ, ಸೂಲೂರು ಗ್ರಾಮಕ್ಕೆ ೧,೫ ಕೋಟಿ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ, ವಿವಿಧ ಗ್ರಾಮಗಳಿಗೆ ಹೈಮಾಸ್ಕ್ ದೀಪಗಳು, ಸಿ.ಸಿ. ರಸ್ತೆಗಳು ಮಂಜೂರು ಮಾಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ ಅವರು ಕೆಂದಟ್ಟಿಯಿಂದ ಅಂಧ್ರಹಳ್ಳಿ ಮಾರ್ಗದ ರಸ್ತೆ, ಮೇಡಿಹಾಳದವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಗಳು, ತಲಗುಂದದಿಂದ ಚುಂಚದೇನಹಳ್ಳಿ ಮಾರ್ಗದ ರಸ್ತೆಗಳ ನಿರ್ಮಾಣಕ್ಕೆ ಮನವಿ ಮಾಡಿದರು, ಕಳೆದ ವರ್ಷ ಸೂಲೂರು ಗ್ರಾಮ ಪಂಚಾಯಿತಿ ಗಾಂಧಿಗ್ರಾಮ ಪುರಸ್ಕರಕ್ಕೆ ಎಂಎಲ್‌ಸಿ ಅನಿಲ್ ಕುಮಾರ್ ಶಿಫಾರಸು ಮಾಡಿದ್ದನ್ನು ಸ್ಮರಿಸಿದ ಅವರು ಕೋಲಾರ ವಿಧಾನ ಕ್ಷೇತ್ರಕ್ಕೆ ಯಾವೂದೇ ಅನುದಾನಗಳು ಬಂದರೂ ನಮ್ಮ ಪಂಚಾಯಿತಿಗೆ ಪ್ರಥಮ ಆದ್ಯತೆ ನೀಡುತ್ತಿರುವುದಕ್ಕೆ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಚೆಂಜಿಮಲೆ ರಮೇಶ್, ಮೈಲಾಂಡಹಳ್ಳಿ ಮುರಳಿ, ಗ್ಯಾರೆಂಟಿ ಯೋಜನೆ ಅಧ್ಯಕ್ಷ ವೈ.ಶಿವಕುಮಾರ್, ತಾಪಂ ಇಒ ಮಂಜುನಾಥ್, ಸದಸ್ಯರಾದ ಚಂದ್ರಿಕಾ, ಲೋಕೇಶ್, ಎಂ.ನಾರಾಯಣಸ್ವಾಮಿ, ಎನ್.ಕೃಷ್ಣಮೂರ್ತಿ,ಅಶೋಕ್, ಗಾಯತ್ರಮ್ಮ, ಎಂ.ನಾರಾಯಣಸ್ವಾಮಿ,ಎಸ್.ನಂದಿನಿ, ಶಿಲ್ಪ, ಸಿ.ಎನ್.ಮುನಿರಾಜು, ಪದ್ಮ, ಆದಿಮೂರ್ತಿ, ನರಸರಾಜು,ರಾಮಕ್ಕ, ರಬೀನಾತಾಜ್,ಸುಜಾತಮ್ಮ ಮತ್ತಿತರರಿದ್ದರು.