ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗಿನೆಲೆ ಕನಕಗುರುಪೀಠ ತಿಂಥಣಿ ಬ್ರಿಜ್ನಲ್ಲಿ ಮಠದ ಸಿದ್ಧರಾಮಾನಂದಪುರಿ ಶ್ರೀಗಳು ಕಳೆದ ಜ.15ರಂದು ಶಿವೈಕ್ಯರಾಗಿದ್ದಾರೆ. ಶ್ರೀಗಳ ಕತೃ ಗದ್ದುಗೆಗೆ ಜ.31ರಂದು ಅಭಿಷೇಕ ಸೇರಿದಂತೆ ಹಾಲುಮತ ಧರ್ಮದಂತೆ ಶಿವಗಣಾರಾಧನೆ ಮಾಡಲಾಗುವುದೆಂದು ಹೇಳಿದರು.
ಶಿವೈಕ್ಯ ಶ್ರೀಗಳಿಗೆ ಫೆ. 1ರಂದು ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದಿನ ನುಡಿ ನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗ್ಗೆ 11 ಗಂಟೆಗೆ ಆಗಮಿಸಿ ಶಿವೈಕ್ಯ ಶ್ರೀಗಳಿಗೆ ನುಡಿ ನಮನ ಸಲ್ಲಿಸಲಿದ್ದಾರೆ. ಇದರ ಜೊತೆಗೆ ಸರ್ಕಾರದ ಮಂತ್ರಿ, ಮಹೋದಯರು, ನಾನಾ ಸಮಾಜದ ಗಣ್ಯ ಮಾನ್ಯರು ಹಾಲುಮತ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿದ್ದಾರೆ ಎಂದು ತಿಳಿಸಿದರು.ಸಮಾಜದ ಜಿಲ್ಲಾ ಅಧ್ಯಕ್ಷ ಗುಂಡಪ್ಪ ಸಾಹುಕಾರ ಕಾಚಾಪುರ, ಕನಕ ಗುರುಪೀಠದ ಅಧ್ಯಕ್ಷ ಸಿದ್ದಯ್ಯ ಗ್ಯಾನಪ್ಪಯ್ಯ ನವರ, ಬೀರಪ್ಪ ಪೂಜಾರಿ, ಪರಸಪ್ಪ ಹುನಕುಂಟಿ, ಗ್ಯಾನಪ್ಪ ಹೊಳೆಯಾಚಿ, ಚನ್ನಬಸವ ಹುನಕುಂಟಿ, ಶಿಶಿ ಬಿಜ್ಜೂರು ಸೇರಿದಂತೆ ಇದ್ದರು.