ಸಿಎಂ ಕುರಿತ ಹೇಳಿಕೆ ಹಾಲುಮತ ಸಮಾಜಕ್ಕೆ ನೋವು ತಂದಿದೆ

KannadaprabhaNewsNetwork |  
Published : Feb 02, 2024, 01:04 AM IST
ಮುದ್ದೇಬಿಹಾಳ | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಜನಾಂಗವನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಅವರಲ್ಲಿದೆ. ಆದರೆ, ಈವರೆಗೆ ಮತಕ್ಷೇತ್ರದಲ್ಲಿ ಯಾವುದೇ ನಾಯಕರು ಸಿಎಂ ಬಗ್ಗೆ ಹಗುರವಾಗಿ ಮಾತನಾಡಿರಲಿಲ್ಲ. ಆದರೆ, ಮಾಜಿ ಶಾಸಕರು ಮಾತನಾಡಿರುವುದು ಹಾಲುಮತ ಸಮಾಜಕ್ಕೆ ನೋವು ತಂದಿದೆ. ಹೀಗಾಗಿ ಈ ಕೂಡಲೇ ಅವರು ಕ್ಷಮೆಯಾಚಿಸಬೇಕು ಎಂದು ಗೋವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಣ್ಣ ಮೇಟಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರು ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರದ ಆಸೆಗೆ ಇಂತಹ ಕೀಳುಮಟ್ಟದ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದ ಅವರು, ಮುದ್ದೇಬಿಹಾಳ ಮೊದಲು ಬರದ ನಾಡಾಗಿತ್ತು. ತಾಲೂಕು ಸಂಪೂರ್ಣ ನೀರಾವರಿಯಾಗಲು ಸಿದ್ದರಾಮಯ್ಯ ಅವರು ಪ್ರಮುಖ ಪಾತ್ರರು ಎಂದರು.

ದೇವರಾಜ್ ಅರಸು ನಂತರ ಅಭಿವೃದ್ಧಿ ಪರ ಸಿಎಂ ಆಗಿ ಸಿದ್ದರಾಮಯ್ಯ ಅವರು ಹೊರಹೊಮ್ಮಿದ್ದಾರೆ. ಎಲ್ಲಿವೂ ಕಪ್ಪುಚುಕ್ಕೆ ಇಲ್ಲದೇ 5 ವರ್ಷ ಸಂಪೂರ್ಣ ಆಡಳಿತ ಮಾಡಿದ್ದಾರೆ. ಹುನಗುಂದದಿಂದ ತಾಳಿಕೋಟಿವರೆಗಿನ ರಸ್ತೆಯನ್ನು ಶಾಸಕ ಸಿ.ಎಸ್ ನಾಡಗೌಡರು ತಂದಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಸಂತೋಷ ನಾಯ್ಕೋಡಿ ಮಾತನಾಡಿದರು. ಈ ವೇಳೆ ಜಿಪಂ ಮಾಜಿ ಅಧ್ಯಕ್ಷೆ ನೀಲಮ್ಮ ಮೇಟಿ, ಕುರುಬ ಸಮಾಜದ ಮುಖಂಡರಾದ ಹಣಮಂತ ಕುರಿ, ಬೀರಪ್ಪ ಯರಝರಿ, ನಾಗಪ್ಪ ಲಕ್ಕಣ್ಣವರ, ಚಂದ್ರು ಕರೆಕಲ್ಲ, ಸಂಗಪ್ಪ ಮೇಲಿಮನಿ, ಹಣಮಂತ ತಳ್ಳಿಕೇರಿ, ಶಿವಲಿಂಗಪ್ಪ ಯರಝರಿ, ನಿಂಗಪ್ಪ ಅಬ್ಬಿಹಾಳ, ಮಹೇಶ ಬಾಗೇವಾಡಿ, ರೇವಣೆಪ್ಪ ಹಂದ್ರಾಳ, ಪರುಶುರಾಮ ಹಂಗರಗಿ, ಕಾಂತು ಹಿರೇಕುರುಬರ, ಮಾಳಪ್ಪ ಕಂಬಳಿ, ಮಹಾದೇವ ಪೂಜಾರಿ, ಹಣಮಂತ ಡೋರನಳ್ಳಿ, ಹಣಮಂತ ಬಿಳುಗುಂಡಿ ಸೇರಿದಂತೆ ಹಲವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ