ಸಿಎಂ ಸಿದ್ದರಾಮಯ್ಯ ಒಬ್ಬ ಕಲಾವಿದ: ಸಂಸದ ಗೋವಿಂದ ಕಾರಜೋಳ

KannadaprabhaNewsNetwork | Published : May 9, 2025 12:30 AM

ಸಾರಾಂಶ

ಸಿಎಂ ಸಿದ್ದರಾಮಯ್ಯ ಅವರು ಒಬ್ಬ ಕಲಾವಿದ ಎಂದು ವ್ಯಂಗ್ಯವಾಡಿರುವ ಚಿತ್ರದುರ್ಗದ ಸಂಸದರಾಗಿರುವ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು, ಹಿಂದೆ ಕಾಶ್ಮೀರ - ಪಾಕಿಸ್ತಾನ ಸಮಸ್ಯೆ ಬಂದಾಗ ಆಧಾರ ಕೊಡಿ ಅಂತಿದ್ರು, ಯಾಕೋ ನಿನ್ನೆ ಆಧಾರ ಕೇಳಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಿಎಂ ಸಿದ್ದರಾಮಯ್ಯ ಅವರು ಒಬ್ಬ ಕಲಾವಿದ ಎಂದು ವ್ಯಂಗ್ಯವಾಡಿರುವ ಚಿತ್ರದುರ್ಗದ ಸಂಸದರಾಗಿರುವ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು, ಹಿಂದೆ ಕಾಶ್ಮೀರ - ಪಾಕಿಸ್ತಾನ ಸಮಸ್ಯೆ ಬಂದಾಗ ಆಧಾರ ಕೊಡಿ ಅಂತಿದ್ರು, ಯಾಕೋ ನಿನ್ನೆ ಆಧಾರ ಕೇಳಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನಿನ್ನೆ ಕುಂಕುಮ ಹಚ್ಚಿಕೊಂಡು ಪ್ರೆಸ್‌ಮೀಟ್‌ ಮಾಡಿರೋ ವಿಷಯ ಪ್ರಸ್ತಾಪಿಸಿದ ಅವರು, ಅದಕ್ಕೆ ನಾನು ಅವರನ್ನು ಒಬ್ಬ ಕಲಾವಿದ ಎಂದು ಹೇಳಿರುವುದು ಎಂದರು.

ನಿನ್ನೆ ಪಾಕಿಸ್ತಾನದ ದಾಳಿಯ ಕುರಿತು ಆಧಾರ ಸಹಿತ ಬಿಡುಗಡೆ ಮಾಡಿದ್ದಾರೆ, ಇಲ್ಲದಿದ್ದರೆ ಸಿದ್ರಾಮಯ್ಯ ಅವರು ಆಧಾರ ಕೊಡಿ ಅಂತಿದ್ರು, ಹೀಗಾಗಿ ನಿನ್ನೆ ಆಧಾರ ಕೇಳಿಲ್ಲ ,ಅವರಿಗೆ ವೋಟ್ ಬ್ಯಾಂಕ್ ಚಿಂತೆ ಮಾತ್ರ ಇದೆ, ದೇಶಾಭಿಮಾನ ಇಲ್ಲ, ಇದಕ್ಕೆ ಶಾಶ್ವತ ಪರಿಹಾರ ಎಂದರೆ ಕಾಂಗ್ರೆಸ್ ನಿರ್ನಾಮ ಆಗಬೇಕು, ಇದನ್ನ ದೇಶದ ಜನ ಮಾಡಬೇಕು ಎಂದು ತಿಳಿಸಿದರು.

ಒಳಮೀಸಲಾತಿ ಜಾರಿಗೆ ಜೂನ್ 10ರ ಡೆಡ್‌ಲೈನ್‌ :

ಒಳಮೀಸಲಾತಿ ಜಾರಿ ವಿಚಾರದ ಬಗ್ಗೆ ಮಾತನಾಡಿದ ಕಾರಜೋಳ ಅವರು, ಶೀಘ್ರ ಸರ್ವೆ ಕಾರ್ಯ ಮುಗಿಸಿ ಒಳಮೀಸಲಾತಿ ಜಾರಿ ಮಾಡಬೇಕು, ಜೂನ್ 10ರೊಳಗೆ ಮಾಡದಿದ್ರೆ ಅಸ್ಪೃಶ್ಯರೆಲ್ಲ ಸೇರಿ ಹೋರಾಟ ಮಾಡ್ತೇವೆ, ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆಂದು ಎಂದು ಕಾರಜೋಳ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹಿಂದೂಗಳ ಮೇಲೆ ಹೆಚ್ಚು ಹಲ್ಲೆ ನಡೆಯುತ್ತಿವೆ, ರಾಜ್ಯದಲ್ಲಿ ಈಗ ಯಾವ ಸರ್ಕಾರ ಇದೆ, ಕಾಂಗ್ರೆಸ್ ಸರ್ಕಾರ ಇದೆ, ರಾಜ್ಯದಲ್ಲಿರೋ ಕೈ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದೆ, ಸರ್ಕಾರ ಮಾಡೋರು ಪ್ರತಿಭಟನೆ ಮಾಡ್ತಿದಾರೆ, ಅವರಿಗೆ ಕನಿಷ್ಠ ಜ್ಞಾನವೂ ಸಹ ಇಲ್ಲ, ಕೇಂದ್ರದ ವಿರುದ್ದ ಪ್ರತಿಭಟನೆ ಮಾಡ್ತಿದ್ದಾರೆ. ಹೀಗಾಗಿ ಯಾವುದೂ ಉಳಿದಿಲ್ಲ ಎಂದರು.

ರಾಜ್ಯ ಸರ್ಕಾರದ ವಿರುದ್ಧ ಪದೇ ಪದೆ ಭ್ರಷ್ಟಾಚಾರ ಸಂಬಂಧ ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿಕೆ ಕೊಡುತ್ತಿರೋ ಬಗ್ಗೆ ಮಾತನಾಡಿದ ಕಾರಜೋಳ ಅವರು, ಈ ಸಂಬಂಧ ರಾಯರೆಡ್ಡಿ ಅವರೇ ರಾಜ್ಯ ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಿದ್ದಾರೆ, ವರ್ಗಾವಣೆ ದಂದೆಗೆ ಕಡಿವಾಣಕ್ಕೆ ರಾಯರೆಡ್ಡಿ ಆಗ್ರಹಿಸ್ತಿದ್ದಾರೆ, ಆಡಳಿತ ಮಾಡ್ತಿರೋ ಕೈ ಸರ್ಕಾರದ ವಿರುದ್ದ ಸತ್ಯದ ಮಾತು ಹೇಳಿದ್ದಾರೆ, ಆಡಳಿತದ ಮೇಲೆ ದುಷ್ಪರಿಣಾಮ ಆಗಿದೆ ಎಂದಿರೋ ರಾಯರೆಡ್ಡಿ ಅವರ ಮಾತಿಗೆ ಸಿಎಂ ಬಾಯಿ ಬಿಡ್ತಿಲ್ಲ, ವಿನಾಕಾರಣ ಬಿಜೆಪಿ ಮೇಲೆ ಗೂಬೆ ಕೂರಿಸ್ತಿದ್ದಾರೆ, ಬಿಜೆಪಿ ಮೇಲಿನ ಆರೋಪ ಸಾಬೀತ ಮಾಡಿಲ್ಲ, ಇದಕ್ಕೆ ಸಿಎಂ ಸಿದ್ದರಾಮಯ್ಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಕಾಶ್ಮೀರನಲ್ಲಿ ಉಗ್ರರ ದಾಳಿಯಾದ 15 ದಿನದೊಳಗಾಗಿ ಪ್ರತೀಕಾರ ಆಗಿದೆ. ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ, ಈ ಸಂಬಂಧ ಪ್ರಧಾನಿ ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸ್ತೀನಿ ಎಂದ ಗೋವಿಂದ ಕಾರಜೋಳ ಅವರು, ಮೃತ ಪ್ರವಾಸಿಗರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದರು.

ಪ್ರಧಾನಿಗಳು ಪಾಕಿಸ್ತಾನದ ವಿರುದ್ಧ ಅನೇಕ ವಿಚಾರ ಇರಿಸಿಕೊಂಡಿದ್ದಾರೆ, ಅವುಗಳೆಲ್ಲ ಯಶಸ್ವಿಯಾಗಲೆಂದು ಹಾರೈಸುತ್ತೇನೆ, ದೇವರಲ್ಲಿ ಪ್ರಾರ್ಥಿಸುತ್ತೇನೆ, ದಾಳಿ ಕುರಿತು ನಿನ್ನೆ ಸೂಫಿಯಾ ಖುರೇಷಿ ದಾಖಲೆ ಸಮೇತ ಮಾಧ್ಯಮಗೋಷ್ಠಿ ಮಾಡಿದ್ರು, ಸೂಫಿಯಾ ನಮ್ಮ ಬೆಳಗಾವಿ ಜಿಲ್ಲೆಯ ಸೊಸೆ ಅನ್ನೋದು ಹೆಮ್ಮೆ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರಿನ ಸೂಫಿಯಾ ಖುರೇಷಿ ಕುಟುಂಬದ ಸೊಸೆ ಇದು ನಮ್ಮ ಹೆಮ್ಮೆ ಎಂದು ಕಾರಜೋಳ ಹೇಳಿದರು.

ಸಮನ್ವಯ ಮಾಡಲಿಕ್ಕೆ ಸಮಿತಿ ಮಾಡಬೇಕಾದ ಅವಶ್ಯಕತೆ ಇದೆ, ನಾವು ರಾಜ್ಯದಲ್ಲಿ 19 ಜನ ಎನ್ ಡಿಎ ಸಂಸದರಿದ್ದೇವೆ, ಒಂದು ಸಮನ್ವಯ ಮಾಡಲಿಕ್ಕೆ ಸಮಿತಿ ಮಾಡಬೇಕಾದ ಅವಶ್ಯಕತೆ ಇದೆ, ಯುದ್ಧ ಸಂದರ್ಭ ಸೇರಿದಂತೆ ತುರ್ತು ವಿಷಯಗಳನ್ನ ಚರ್ಚೆ ಮಾಡಬೇಕು, ಇದರ ಜೊತೆ ಕೇಂದ್ರದ ಯೋಜನೆಗಳನ್ನ ಜನರಿಗೆ ತಿಳಿಸಲು ಸಮಿತಿ ಮಾಡಬೇಕಿದೆ, ದೇವೇಗೌಡರ ನೇತೃತ್ವದಲ್ಲಿ ಸಮಿತಿ ಆದ್ರೆ ಇನ್ನೂ ಅನುಕೂಲ & ಯೋಗ್ಯವಾಗಲಿದೆ ಎಂದು ಕಾರಜೋಳ ಹೇಳಿದರು.

Share this article