ಜಾತಿ, ಜಾತಿ ಮಧ್ಯೆ ಕಂದಕ ಸೃಷ್ಟಿದ ಸಿಎಂ

KannadaprabhaNewsNetwork |  
Published : Apr 17, 2025, 12:49 AM IST
ಚಿಕ್ಕೋಡಿ ಬಿಜೆಪಿ ಕಚೇರಿಯಲ್ಲಿ ಸಂಸದ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಅರುಣ ಶಹಾಪುರ, ಶಾಂಭವಿ ಅಶ್ವತ್ಥಪುರ, ದುಂಡಪ್ಪಾ ಬೆಂಡವಾಡೆ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಜಾತಿಗಣತಿ ವೈಜ್ಞಾನಿಕವಾಗಿ ನಡೆದಿಲ್ಲ. ಜಾತಿ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸುವ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಜಾತಿಗಣತಿ ವೈಜ್ಞಾನಿಕವಾಗಿ ನಡೆದಿಲ್ಲ. ಜಾತಿ ಜಾತಿಗಳ ಮಧ್ಯೆ ಕಂದಕ ಸೃಷ್ಟಿಸುವ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತಿ ಗಣತಿ ವರದಿ ರಾಜ್ಯದ ಜನರಿಗೆ ಮೋಸ ಮಾಡುವ ಹಾಗೂ ಮತ ಬ್ಯಾಂಕ್ ಕಮಟು ವಾಸನೆ ಹೊಂದಿದೆ. ಕಾಂತರಾಜು ಅವರಿಗೆ ಕೆಲ ಜಾತಿ ಹೆಸರೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.ಎಲ್ಲ ಸಮಾಜ ಹಾಗೂ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮೀಕ್ಷೆ ನಡೆಸಲಾಗಿಲ್ಲ. ಲಿಂಗಾಯತ ಒಳಪಂಗಡ ಗಳನ್ನು ಬೇರೆ ಬೇರೆಯಾಗಿ ನಮೂದು ಮಾಡುವ ಜನಾಂಗಗಳಿಗೆ ಮೂಲಕ ಬಹಳಷ್ಟು ವರದಿಯಿಂದ ಅನ್ಯಾಯವಾಗಿದೆ. ಮುಸ್ಲಿಂ ಸಮಾಜದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಳಪಂಗಡಗಳಿವೆ. ಅವುಗಳನ್ನು ಪ್ರತ್ಯೇಕವಾಗಿ ಏಕೆ ನಮೂದು ಮಾಡಿಲ್ಲ ಹಾಗೂ ಅನೇಕ ಮಠಾಧೀಶರು ಜಾತಿಗಣತಿ ವರದಿ ವಿರುದ್ಧ ಆಕ್ರೋಶವ್ಯಕ್ತ ಪಡಿಸುತ್ತಿದ್ದಾರೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ದಲಿತರಿಗೆ ಒಳ ಮೀಸಲಾತಿ ನೀಡುವ ನಿಟ್ಟಿನಲ್ಲಿ ಸುಪ್ರಿಂಕೋರ್ಟ್ ಆದೇಶವನ್ನುಎಲ್ಲ ರಾಜ್ಯಗಳು ಜಾರಿ ಮಾಡುವಂತೆ ಸೂಚಿಸಿದ್ದಾರೆ. ಪಕ್ಕದ ರಾಜ್ಯಗಳಲ್ಲಿ ಜಾರಿಯಾಗಿದೆ. ಒಳ ಹಲವಾರು ಮೀಸಲಾತಿ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದ ಕಾಂಗ್ರೆಸ್ಸಿಗರು ಎರಡು ವರ್ಷವಾದರೂ ಏಕೆ ಒಳ ಮೀಸಲಾತಿ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಾಂಭವಿ ಅಶ್ವತ್ಥಪುರ, ದುಂಡಪ್ಪ ಬೆಂಡವಾಡೆ, ಅಪ್ಪಾಸಾಹೇಬ ಚೌಗಲಾ, ಪವನಕುಮಾರ ಮಹಾಜನ, ಸುಭಾಷ ಯರನಾಳೆ, ದೀಪಕ ಪಾಟೀಲ, ಎಂ.ಎಸ್.ಈಟಿ, ರಮೇಶ ಕಾಳನ್ನವರ, ಬಸವರಾಜ ಡೋಣವಾಡೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ