ಇಂದು ಲಿಂ.ಸಿದ್ದಲಿಂಗ ಶ್ರೀಗಳ ಪುಣ್ಯಸ್ಮರಣೆ, ಗದ್ದುಗೆ ಉದ್ಘಾಟನೆ

KannadaprabhaNewsNetwork |  
Published : Oct 03, 2024, 01:28 AM IST
ಅರಬಾವಿ ಮಠದಲ್ಲಿ ಲಿಂ.ಸಿದ್ದಲಿಂಗ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ, ಗುದ್ದುಗೆಯ ಉದ್ಘಾಟನೆ ಮತ್ತು ಸಂಸ್ಮರಣ ಸಂಪುಟ ಬಿಡುಗಡೆಯ ಆಮಂತ್ರಣ ಪತ್ರಿಕೆಯನ್ನು ಗುರುಬಸವಲಿಂಗ ಮಹಾಸ್ವಾಮೀಜಿಗಳು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಹಲವು ವೈಶಿಷ್ಟ್ಯಗಳಿಂದ ಕೂಡಿದ ತಾಲೂಕಿನ ಅರಬಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಸಿದ್ಧಸಂಸ್ಥಾನ ಮಠದ 11ನೇ ಪೀಠಾಧಿಪತಿ ಲಿಂ.ಸಿದ್ದಲಿಂಗ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ, ಗುದ್ದುಗೆಯ ಉದ್ಘಾಟನೆ ಮತ್ತು ಸಂಸ್ಮರಣ ಸಂಪುಟ ಬಿಡುಗಡೆ ಸಮಾರಂಭವು ಅ.3 ರಂದು ಬೆಳಗ್ಗೆ 10.30 ಗಂಟೆಗೆ ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಲಿದೆ ಎಂದು ಶ್ರೀಮಠದ ಗುರುಬಸವಲಿಂಗ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಹಲವು ವೈಶಿಷ್ಟ್ಯಗಳಿಂದ ಕೂಡಿದ ತಾಲೂಕಿನ ಅರಬಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಸಿದ್ಧಸಂಸ್ಥಾನ ಮಠದ 11ನೇ ಪೀಠಾಧಿಪತಿ ಲಿಂ.ಸಿದ್ದಲಿಂಗ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ, ಗುದ್ದುಗೆಯ ಉದ್ಘಾಟನೆ ಮತ್ತು ಸಂಸ್ಮರಣ ಸಂಪುಟ ಬಿಡುಗಡೆ ಸಮಾರಂಭವು ಅ.3 ರಂದು ಬೆಳಗ್ಗೆ 10.30 ಗಂಟೆಗೆ ಗದಗ-ಡಂಬಳದ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಲಿದೆ ಎಂದು ಶ್ರೀಮಠದ ಗುರುಬಸವಲಿಂಗ ಮಹಾಸ್ವಾಮೀಜಿ ಹೇಳಿದರು.

ಅರಬಾವಿ ಮಠದಲ್ಲಿ ಲಿಂ.ಸಿದ್ಧಲಿಂಗ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ, ಗುದ್ದುಗೆಯ ಉದ್ಘಾಟನೆ ಮತ್ತು ಸಂಸ್ಮರಣ ಸಂಪುಟ ಬಿಡುಗಡೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಲಿಂ.ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀಮಠದಲ್ಲಿ ಸುರ್ಧೀಘ 45 ವರ್ಷಗಳವರಿಗೆ ಲಿಂಗಪೂಜಾ ನಿಷ್ಠರಾಗಿ ಧಾರ್ಮಿಕ, ಸಾಹಿತ್ಯ, ಶೈಕ್ಷಣಿಕ, ಜ್ಞಾನದಾಸೋಹದೊಂದಿಗೆ ಅನ್ನದಾಸೋಹ ನಡೆಸಿ ಸಮಸ್ತ ಭಕ್ತರ ಹೃದಯದಲ್ಲಿ ನೆಲಸಿದ್ದರು. ಶ್ರೀಗಳು ಲಿಂಗೈಕ್ಯರಾಗಿ ಒಂದು ವರ್ಷ ಗತಿಸಿದ ನೆನಪಿಗಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಕಡಕೋಳದ ಸಚ್ಚಿದಾನಂದ ಶ್ರೀಗಳು, ಬೆಲ್ಲದ ಬಾಗೇವಾಡಿಯ ಶಿವಾನಂದ ಶ್ರೀಗಳು, ಹುಕ್ಕೇರಿಯ ಶಿವಬಸವ ಶ್ರೀಗಳು, ಶೇಗುಣಸಿಯ ಡಾ.ಮಹಾಂತಪ್ರಭು ಶ್ರೀಗಳ ಸಮ್ಮುಖ ವಹಿಸುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪುಣ್ಯಾರಣ್ಯ ಪುಷ್ಪ ಸಂಸ್ಮರಣ ಸಂಪುಟ ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಅರಬಾವಿ ಶಾಸಕ ಹಾಗೂ ಬೆಮ್ಯೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ನಿವೃತ್ತ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಭಾಗವಹಿಸುವರು ಎಂದು ಮಾಹಿತಿ ನೀಡಿದರು.ಗೋಕಾಕದ ಡಾ.ಸಿ.ಕೆ.ನಾವಲಗಿ ಮಾತನಾಡಿ, ಅ.3 ರಂದು ಅರಬಾವಿ ದುರದುಂಡೀಶ್ವರ ಪುಣ್ಯಾರಣ್ಯ ಸಿದ್ದಸಂಸ್ಥಾನ ಮಠದ ಪೀಠಾಧಿಪತಿ ಗುರುಬಸವಲಿಂಗ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಲಿಂ.ಸಿದ್ದಲಿಂಗ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ, ಗದ್ದುಗೆಯ ಉದ್ಘಾಟನೆ ಮತ್ತು ಸ್ಮರಣ ಸಂಪುಟ ಬಿಡುಗಡೆ ಕಾರ್ಯಕ್ರಮ ಜರುಗಲಿದ್ದು. ಶ್ರೀಮಠದ ಭಕ್ತಾದಿಗಳು ಭಾಗವಹಿಸಿ ಶ್ರೀಗಳ ಕೃಫೆಗೆ ಪಾತ್ರರಾಗಬೇಕು ಎಂದು ಕೋರಿದರು.ಈ ಸಂದರ್ಭದಲ್ಲಿ ಶ್ರೀಮಠದ ಸದ್ಭಕ್ತರಾದ ಚಂದ್ರಪ್ಪ ಘಿವಾರಿ, ಸದಾನಂದ ಅಂಗಡಿ, ಸಿದ್ಧಲಿಂಗಪ್ಪ ಅಂಗಡಿ ಉಪಸ್ಥಿತರಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ