20ರಿಂದ ಲಿಂ.ಶ್ರೀ ಕಾಡಸಿದ್ದೇಶ್ವರ ಶ್ರೀಗಳ ಪುಣ್ಯಸ್ಮರಣೋತ್ಸವ

KannadaprabhaNewsNetwork |  
Published : Apr 17, 2025, 12:02 AM IST
 ಫೋಟೋ: 16ಜಿಎಲ್ಡಿ 1- ಗುಳೇದಗುಡ್ಡದ ಮರಡಿಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಒಂದು ವಾರದವರೆಗೆ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ, ತುಲಾಭಾರ, ಪ್ರಭಾತ ಯಾತ್ರೆ, ರಥೋತ್ಸವ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸ್ಥಳೀಯ ಮರಡಿ ಮಠದ 10ನೇ ಶ್ರೀ ಕಾಡಸಿದ್ದೇಶ್ವರರ ಪುಣ್ಯಸ್ಮರಣೋತ್ಸವ, ಶ್ರೀ ಅಭಿನವ ಕಾಡಸಿದ್ದೇಶ್ವರ ಶ್ರೀಗಳ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಹಾಗೂ ನೂತನ ರಥೋತ್ಸವದ ಲೋಕಾರ್ಪಣೆ ಕಾರ್ಯಕ್ರಮ ಏ.20 ರಿಂದ 27ರವರೆಗೆ ನಡೆಯಲಿದೆ ಎಂದು ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವಾರದವರೆಗೆ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ, ತುಲಾಭಾರ, ಪ್ರಭಾತ ಯಾತ್ರೆ, ರಥೋತ್ಸವ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ಅಂಗವಾಗಿ ಏ.20ರಿಂದ 24ರ ವರೆಗೆ ನಿತ್ಯ ಸಂಜೆ 7 ಗಂಟೆಗೆ ಕಮತಗಿಯ ಗಣೇಶ ಶಾಸ್ತ್ರಿಗಳಿಂದ ವಿವೇಕ ದರ್ಶನ ಪ್ರವಚನ ನೀಡುವರು.

ಪ್ರವಚನ ಉದ್ಘಾಟನಾ ಕಾರ್ಯಕ್ರಮ ಏ.20ರಂದು ಸಂಜೆ 7ಗಂಟೆಗೆ ನಡೆಯಲಿದ್ದು, ಬಿಲ್ ಕೆರೂರಿನ ಬಿಲ್ವಾಶ್ರಮದ ಶ್ರೀ ಸಿದ್ದಲಿಂಗ ಶ್ರೀಗಳು ಪ್ರವಚನ ಉದ್ಘಾಟಿಸುವರು. ಹೊಳೆಹುಚ್ಚೇಶ್ವರ ಮಠದ ಶ್ರೀ ಹುಚ್ಚೇಶ್ವರ ಶ್ರೀಗಳು, ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಶ್ರೀಗಳು, ಸಿದ್ದನಗೊಳ್ಳದ ಶ್ರೀ ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸುವರು. ವಿಪ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಶಾಸಕ ರಾಜಶೇಖರ ಶೀಲವಂತ, ಮಹೇಶ ಬಿಜಾಪೂರ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ಸಂಜು ಕಾರಕೂನ, ಪಿ.ಎನ್. ಪವಾರ ಉಪಸ್ಥಿತರಿರುವರುಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ಸಂಗಪ್ಪ ಜವಳಿ, ಎಸ್.ಐ.ರಾಜನಾಳ, ಚಂದ್ರಶೇಖರ ತಾಂಡೂರ, ರವಿ ಗೌಡರ, ವಿಶ್ವನಾಥ ಹಿರೇಮಠ, ಮಲ್ಲಿಕಾರ್ಜುನ ಶೀಲವಂತ, ವೀರಣ್ಣ ಕುರಹಟ್ಟಿ, ಪ್ರಕಾಶ ಅಂಕದ, ಸಚಿನ ತೊಗರಿ, ಪ್ರಶಾಂತ ಜವಳಿ, ಭುವನೇಶ ಪೂಜಾರ, ಮುತ್ತಣ್ಣ ದೇವರಮನಿ, ಮಹೇಶ ಸೂಳಿಭಾವಿ, ಎಂ.ಎಸ್. ಹಿರೇಮಠ ಸೇರಿದಂತೆ ಮಠದ ಭಕ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ