ಕನ್ನಡಪ್ರಭ ವಾರ್ತೆ ಬೀರೂರು
ಅವರು ಪಟ್ಟಣ ಸಮೀಪದ ಜೋಡಿತಿಮ್ಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಇಂಗ್ಲಾರನಹಳ್ಳಿ ಗ್ರಾಮದಲ್ಲಿ ಬುಧವಾರ ನೂತನ ಸಮುದಾಯ ಭವನ ನಿರ್ಮಾಣ ಮಾಡುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಗ್ರಾಮದಲ್ಲಿ ಸಭೆ ಸಮಾರಂಭ ನಡೆಸಲು ಸಮುದಾಯ ಭವನದ ಅವಶ್ಯಕತೆ ಇದ್ದು ತಾವುಗಳು ಶಾಸಕರಾದರೇ ಸಮುದಾಯ ನಿರ್ಮಾಣ ಮಾಡಿಕೊಡುವಂತೆ ಬೇಡಿಕೆಯನ್ನು ಇಟ್ಟಿದ್ದರು. ಅದರಂತೆ ನಿಮ್ಮ ಮಾತಿಗೆ ಗೌರವಿಸಿ ಇಂದು ಭವನ ನಿರ್ಮಾಣಕ್ಕೆ ನನ್ನ ಶಾಸಕರ ನಿಧಿಯಿಂದ 10ಲಕ್ಷರೂ ಹಣ ಬಿಡುಗಡೆ ಮಾಡಿಸಿದ್ದೇನೆ. ಇಂದು ಅದರ ಭೂಮಿಪೂಜೆ ನಡೆಯುತ್ತಿದ್ದು ಹಣದ ಕೊರತೆಯಾದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ನೀಡುತ್ತೇನೆ ಎಂದರು.ಈ ಸಮುದಾಯ ಭವನ ನಿರ್ಮಾಣದಿಂದ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ರೈತಾಪಿ ಬಡ ಜನರಿಗೆ ಮದುವೆ, ನಾಮಕರಣ ಮತ್ತಿತರ ಸಭೆ ಸಮಾರಂಭ ಗಳನ್ನು ನಡೆಸಲು ಅನುಕೂಲವಾಗುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸಮುದಾಯ ಭವನ ಇಲ್ಲದ ಗ್ರಾಮಗಳಿಗೆ ಹಣ ಬಿಡುಗಡೆ ಮಾಡಿಸಿ ಕೆಲವು ಗ್ರಾಮಗಳಲ್ಲು ಸುಸಜ್ಜಿತವಾದ ಸಮುದಾಯ ಭವನಗಳು ತಲೆ ಎತ್ತುತ್ತಿವೆ. ನನ್ನ ಶಾಸಕ ಸ್ಥಾನದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ಸದಾ ದುಡಿಯಲು ಸಿದ್ಧ ಎಂದರು.
ಕೆ.ಐ.ಡಿ.ಆರ್.ಎಲ್ ನ ಎಇಇ ಅಶ್ವಿನಿ, ಇಂಜಿನಿಯರ್ ಗಿರೀಶ್, ಮಾಜಿ ತಾ.ಪಂ.ಸದಸ್ಯ ಹೊಗರೇಹಳ್ಳಿ ಶಶಿಕುಮಾರ್, ದೋಗೆಹಳ್ಳಿ ಸೋಮೇಶ್, ಬ್ಯಾಗಡೇಹಳ್ಳಿ ಶಿವು ದೇವಾಲಯ ಕಮಿಟಿ ಅಧ್ಯಕ್ಷ ವರದರಾಜು, ಗ್ರಾಮದ ಮುಖಂಡರುಗಳಾದ ಕರಿಬಸಪ್ಪ, ರಾಜಕುಮಾರ್, ಪ್ರದೀಪ್, ಗಿರೀಶ್, ನಿಂಗೇಶ್, ಮಹಾಲಿಂಗಪ್ಪ ಸೇರಿ ಇತರರು ಇದ್ದರು.