ಪೊನ್ನಂಪೇಟೆ ತಾಲೂಕು ಕೆ. ಬಾಡಗ ಗ್ರಾಮದಲ್ಲಿ ಶಾಸಕರ ವಿಶೇಷ 47 ಲಕ್ಷ ರು. ಅನುದಾನದಲ್ಲಿ ನಿರ್ಮಾಣವಾದ ತಾಯಿ ಭೂಮಿ ಪೈಸಾರಿ ಹಾಡಿ, ನಾಣಚ್ಚಿ ಗದ್ದೆ ಹಾಡಿ ಹಾಗೂ ಕೋಡಂಗೆ ಹಾಡಿ ಭಾಗದ ವಿವಿಧ ರಸ್ತೆ ಕಾಮಗಾರಿಗಳನ್ನು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.
ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕು ಕೆ. ಬಾಡಗ ಗ್ರಾಮದಲ್ಲಿ ಶಾಸಕರ ವಿಶೇಷ 47 ಲಕ್ಷ ರು. ಅನುದಾನದಲ್ಲಿ ನಿರ್ಮಾಣವಾದ ತಾಯಿ ಭೂಮಿ ಪೈಸಾರಿ ಹಾಡಿ, ನಾಣಚ್ಚಿ ಗದ್ದೆ ಹಾಡಿ ಹಾಗೂ ಕೋಡಂಗೆ ಹಾಡಿ ಭಾಗದ ವಿವಿಧ ರಸ್ತೆ ಕಾಮಗಾರಿಗಳನ್ನು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸರ್ಕಾರ ಹಾಗೂ ತಾನು ಜನಸಾಮಾನ್ಯರ ಮೂಲ ಸೌಲಭ್ಯಗಳಲ್ಲಿ ಒಂದಾದ ರಸ್ತೆ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದು, ಕಳೆದ ಹಲವಾರು ದಶಕಗಳಿಂದ ಅಭಿವೃದ್ಧಿ ಕಾಣದೆ ಜನಸಾಮಾನ್ಯರ ಬಳಕೆಗೆ ಯೋಗ್ಯವಲ್ಲದ ರಸ್ತೆಗಳನ್ನು ಉತ್ತಮಗೊಳಿಸುವತ್ತ ಗಮನಹರಿಸಿರುವುದಾಗಿ ತಿಳಿಸಿದರು.ಸಾರ್ವಜನಿಕರು ಸಲ್ಲಿಸಿದ ಬೇಡಿಕೆಗೆ ಅನುಸಾರ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಜನರ ಮೂಲ ಸೌಲಭ್ಯ ಪೂರೈಕೆಗೆ ತಾವು ಸದಾ ಬದ್ಧರಾಗಿರುವುದಾಗಿ ತಿಳಿಸಿದರು. ಗ್ರಾಮೀಣ ಜನತೆಯು ಆರ್ಥಿಕವಾಗಿ ಸದೃಢವಾಗಲು ಕೃಷಿ ಚಟುವಟಿಕೆಗಳೊಂದಿಗೆ ಉತ್ತಮ ರಸ್ತೆಯ ಸೌಲಭ್ಯದ ಅವಶ್ಯಕತೆಯನ್ನು ಮನಗಂಡಿರುವ ತಾವು, ರಸ್ತೆ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಹಲವು ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಂಡಿರುವುದಾಗಿ ತಿಳಿಸಿದರು.ಚಂದನಕೇರೆ ಹಾಡಿಯವರ ಕೋರಿಕೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಅವರ ಮನವಿಗೆ ಸ್ಪಂದಿಸಿ ರಸ್ತೆ ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತೀತಿರ ಧರ್ಮಜ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ವಲಯ ಅಧ್ಯಕ್ಷ ಚಿಮ್ಮಣಮಾಡ ರವಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಮಾಜಿ ಜಿಪಂ ಸದಸ್ಯ ಬಾನಂಡ ಪ್ರತ್ಯು, ಪಕ್ಷದ ಮುಖಂಡರಾದ ಕಟ್ಟಿ ಕಾರ್ಯಪ್ಪ, ಪಲ್ವಿನ್ ಪೂಣಚ್ಚ, ವಿಶು, ರಾಮಕೃಷ್ಣ,ಮಾಚಿ ಮಾಡ ಮನು, ಕೇಚಮಾಡ ಸಿದ್ದು ನಾಚಪ್ಪ, ಕುಂಡಚ್ಚಿರ ಮಂಜು ದೇವಯ್ಯ ಅಯೂಬ್, ಮುಕ್ಕಾಟಿರ ದೀಪು, ಮಧು, ನಿಲ್ಲು, ಬೋಪಣ್ಣ, ಸೋಮಯ್ಯ, ರಮೇಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.