ಸಾಮಾನ್ಯ ಜನತೆಯ ಬಜೆಟ್‌: ಕಿಶೋರ್‌ ಕುಮಾರ್ ಕುಂದಾಪುರ

KannadaprabhaNewsNetwork |  
Published : Feb 02, 2025, 01:00 AM IST
1ಬಿಜೆಪಿ | Kannada Prabha

ಸಾರಾಂಶ

ದೇಶದ ಕೋಟ್ಯಂತರ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಹತ್ತಾರು ಯೋಜನೆಗಳ ಬಜೆಟ್ ಅನ್ನು ಈ ಬಾರಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ದೇಶದ ಕೋಟ್ಯಂತರ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಹತ್ತಾರು ಯೋಜನೆಗಳ ಬಜೆಟ್ ಅನ್ನು ಈ ಬಾರಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ತಿಳಿಸಿದ್ದಾರೆ.ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಶೇ.80 ಕಾರ್ಯಗತವಾಗಿದೆ. ಈ ವರ್ಷ ಅದನ್ನು ಶೇ.100 ಮಾಡುವ ಘೋಷಣೆ ಮಾಡಲಾಗಿದೆ. ದೇಶದ ಪ್ರಜೆಗಳ ಆರೋಗ್ಯ ವರ್ಧನೆಗೆ ಹಣ್ಣು ಹಾಗೂ ಶುದ್ಧ ಸಾವಯವ ತರಕಾರಿ ಉಪಯೋಗಕ್ಕೆ ಪ್ರೋತ್ಸಾಹಿಸಲು ರಾಜ್ಯ ಸರ್ಕಾರದೊಂದಿಗೆ ಬೆಳೆಯಲು ಮತ್ತು ಬಳಸಲು ಪ್ರೋತ್ಸಾಹಿಸುವುದು. ಜಿಲ್ಲೆಗೊಂದು ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಆರಂಭಿಸುವುದು, ಪ್ರಮುಖ ಔಷಧಿಗಳ ಮೇಲಿನ ತೆರಿಗೆ ವಿನಾಯಿತಿಯೂ ಜನಸಾಮಾನ್ಯರಿಗೆ ಅನೂಕಲವಾಗಲಿದೆ ಎಂದರು.12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿರುವುದು ನಿಜಕ್ಕೂ ಮಧ್ಯಮ ವರ್ಗಕ್ಕೆ ಬಹುದೊಡ್ಡ ಕೊಡುಗೆ ಎಂದು ಪ್ರಶಂಸಿಸಿ, ಜೀವ ರಕ್ಷಕ ಔಷಧಿಗಳ ಮೇಲೆ ತೆರಿಗೆ ವಿನಾಯಿತಿ, ಮೀನುಗಾರಿಕಾ ರಫ್ತು ಉದ್ಯಮ ಉತ್ತೇಜನಕ್ಕೆ ಆರ್ಥಿಕ ನೆರವು, ಕರಾವಳಿ ಬಂದರುಗಳ ಅಭಿವೃದ್ಧಿಗೆ ನೆರವು, ಕಿಸಾನ್ ಕಾರ್ಡ್ ಮೊತ್ತವನ್ನು 3ರಿಂದ 5 ಲಕ್ಷಕ್ಕೆ ಏರಿಕೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಉದ್ಯಮ ಸ್ಥಾಪನೆಗೆ ಎರಡು ಕೋಟಿ ವರೆಗಿನ ಸಾಲ ಸೌಲಭ್ಯ ಘೋಷಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶ್ರೀಶಾ ನಾಯಕ್ ಪೆರ್ಣಂಕಿಲ, ವಿಜಯ್ ಕುಮಾರ್ ಉದ್ಯಾವರ, ಶಿವಕುಮಾರ್ ಅಂಬಲಪಾಡಿ, ದಿವಾಕರ್ ಶೆಟ್ಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!