ಸಂವಹನ ಶಿಕ್ಷಣ ಒಂದು ಪರಿಕರ: ಪ್ರೊ.ಶಿವಚಿತ್ತಪ್ಪ ಅಭಿಪ್ರಾಯ

KannadaprabhaNewsNetwork |  
Published : Apr 19, 2024, 01:06 AM IST
10 | Kannada Prabha

ಸಾರಾಂಶ

ಸಂಶೋಧನೆಯ ಪೂರ್ವದಲ್ಲಿ ಪದವಿ ಶಿಕ್ಷಣದ ಕೊನೆಯ ಚತುರ್ಮಾಸದಲ್ಲಿ ಇಂಟರ್ ಶಿಪ್ ನಲ್ಲಿ ತೊಡಗಿಸಿಕೊಳ್ಳುವುದು ಸಂಶೋಧನೆಗೆ ಪೂರಕವಾಗುತ್ತದೆ. ಇದರಿಂದ ಕೌಶಲ್ಯದ ಸಾಮರ್ಥ್ಯ ವೃದ್ಧಿಯಾಗುತ್ತದೆ. ಅವಕಾಶಗಳನ್ನು ಕಲ್ಪಿಸಿದಾಗ ಮಾತ್ರ ಅನುಭವ ಸಿಗುತ್ತದೆ. ಜ್ಞಾನವೆಂಬುದು ನಿರಂತರ ಕಲಿಕೆ, ಸಮುದಾಯದ ಜೊತೆ ಬೆರೆತಾಗ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ. ನೂತನ ದಾರಿಗಳು ತೆರೆದುಕೊಳ್ಳುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಂವಹನ ಶಿಕ್ಷಣದ ಒಂದು ಪರಿಕರ, ಸಂವಹನದ ಭಾಷೆಗಾಗಿ ಇಂಗ್ಲೀಷ್ ಕಲಿಯಬೇಕು. ಇದರಿಂದ ಕೌಶಲ್ಯ ವೃದ್ಧಿಯಾಗುತ್ತದೆ ಎಂದು ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಪ್ರಾಧ್ಯಾಪಕ ಡಾ. ಶಿವಚಿತ್ತಪ್ಪ ತಿಳಿಸಿದರು.

ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯಶಾಸ್ತ್ರ ವಿಭಾಗವು ಗುರುವಾರ ಆಯೋಜಿಸಿದ್ದ ಇಂಟರ್ ಶಿಪ್ ವರದಿ ಬರವಣಿಗೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಶೋಧನೆಯ ಪೂರ್ವದಲ್ಲಿ ಪದವಿ ಶಿಕ್ಷಣದ ಕೊನೆಯ ಚತುರ್ಮಾಸದಲ್ಲಿ ಇಂಟರ್ ಶಿಪ್ ನಲ್ಲಿ ತೊಡಗಿಸಿಕೊಳ್ಳುವುದು ಸಂಶೋಧನೆಗೆ ಪೂರಕವಾಗುತ್ತದೆ. ಇದರಿಂದ ಕೌಶಲ್ಯದ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದರು.

ಸಮಸ್ಯೆಯ ಆಯ್ಕೆ, ಪ್ರಶ್ನಾವಳಿ ಸಂಶೋಧನ ವಿಧಾನ, ರಿವ್ಯೂವ್ ಆಫ್ ಲಿಟರೇಚರ್, ಸಂಶೋಧನೆ ಉದ್ದೇಶ, ಗುರಿ, ಕ್ಷೇತ್ರ ಕಾರ್ಯ, ಫಲಿತಾಂಶಗಳು ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಉದಾಹರಣೆಯೊಂದಿಗೆ ಸಂವಾದ ನಡೆಸಿದರು.

ಅವಕಾಶಗಳನ್ನು ಕಲ್ಪಿಸಿದಾಗ ಮಾತ್ರ ಅನುಭವ ಸಿಗುತ್ತದೆ. ಜ್ಞಾನವೆಂಬುದು ನಿರಂತರ ಕಲಿಕೆ, ಸಮುದಾಯದ ಜೊತೆ ಬೆರೆತಾಗ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ. ನೂತನ ದಾರಿಗಳು ತೆರೆದುಕೊಳ್ಳುತ್ತವೆ ಎಂದ ಅವರು, ಸಂಶೋಧನಾ ಲೇಖನಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳ ನಿದರ್ಶನದೊಂದಿಗೆ ತಿಳಿಸಿದರು.

ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯುವುದು ಕೌಶಲ್ಯದಿಂದ ಅಂತಹ ಕೌಶಲ್ಯಗಳನ್ನು ಹಲವು ಜ್ಞಾನ ಶಾಖೆಗಳಿಂದ ಪಡೆಯಬಹುದು. ವಾಣಿಜ್ಯ ಕ್ಷೇತ್ರ ತುಂಬಾ ಮುಂದುವರೆದಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಉಪ ಪ್ರಾಂಶುಪಾಲ ಡಾ.ಜಿ. ಪ್ರಸಾದಮೂರ್ತಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎನ್.ಜಿ. ಲೋಕೇಶ್, ಸಹಾಯಕ ಪ್ರಾಧ್ಯಾಪಕರಾದ ಸೂರಜ್, ಎನ್.ಆರ್. ಸಿಂಧು ಇದ್ದರು. ನಿಹಾರಿಕಾ ಪ್ರಾರ್ಥಿಸಿದರು. ಕಾವ್ಯ ನಿರೂಪಿಸಿದರು. ಅಕ್ಷಿತಾ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ