ಎಚ್.ಡಿ. ರಂಗಸ್ವಾಮಿಕನ್ನಡಪ್ರಭ ವಾರ್ತೆ ನಂಜನಗೂಡು
ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಹಾಗೂ ಜೈವಿಕ ಪೀಡೆನಾಶಕಗಳ ಉತ್ಪಾದನಾ ಪ್ರಯೋಗಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವ ಹಿತದೃಷ್ಟಿಯಿಂದ ಕೃಷಿಗೆ ಸಂಬಂಧಿಸಿದಂತೆ ಕೃಷಿ ಮೇಳ ಆಯೋಜಿಸಿ ರೈತರಿಗೆ ಅರಿವು ಮೂಡಿಸುವ ಜೊತೆಗೆ ದೇಸಿ ಆಟಗಳು ಅವಸಾನದ ಅಂಚಿಗೆ ತಲುಪುತ್ತಿರುವ ಕಾಲಘಟ್ಟದಲ್ಲಿ ದೇಸಿ ಆಟಗಳ ಆಯೋಜಿಸಿ ಉತ್ತೇಜಿಸುವ ಕಾರ್ಯವನ್ನು ಜಾತ್ರಾ ಮಹೋತ್ಸವದ ಮೂಲಕ ಮಾಡುತ್ತಿದೆ. ಅಲ್ಲದೇ, ಸಾಂಸ್ಕೃತಿಕ ಮೇಳ, ಆರೋಗ್ಯ ಮೇಳದಂತಹ ಸಾಮಾಜಿಕ ಚಟುವಟಿಕೆಗಳ ಮೂಲಕ ಜನಮನ್ನಣೆ ಗಳಿಸಿದೆ ಎಂದರು.ಇಡೀ ನಾಡಿನ, ದೇಶದ ಸಮಸ್ತ ಭಕ್ತರ ಒಟನಾಟ ಸುತ್ತೂರು ಮಠದೊಂದಿಗೆ ಇರುವುದು ಇದಕ್ಕೆ ಸ್ಪಷ್ಟ ನಿದರ್ಶನ, ಸಾಮಾಜಿಕ ರಚನಾತ್ಮಕ ಸೇವಾ ಕಾರ್ಯಗಳ ಮೂಲಕ ಎಲ್ಲಾ ವರ್ಗದ ಜನರನ್ನು ಒಟ್ಟಾಗಿಸುವ ಮೂಲಕ ಬದಲಾವಣೆ ತರುವ ಕೆಲಸವನ್ನು ಸುತ್ತೂರು ಶ್ರೀಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಎ. ರಾಜಶೇಖರ್ ಮಾತನಾಡಿ, ನೀರಿನ ಸಂರಕ್ಷಣೆ ವಿಷಯದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಜನಸಂಖ್ಯೆಯಿಂದಾಗಿ ನೀರಾವರಿ ಸೆಲೆಯ ಮೇಲೆ ಒತ್ತಡ ಹೆಚ್ಚಿದೆ. ನಿರೀನ ಸಂರಕ್ಷಣೆಗಾಗಿ ರೈತರು ಹನಿ ನಿರಾವರಿ ಪದ್ದತಿಯನ್ನು ಅಳವಡಿಕೊಳ್ಳುವುದರಿಂದ ಶೇ. 40 ರಷ್ಟು ನೀರಿನ್ನು ಸಂರಕ್ಷಿಸಬಹುದು. ಜೊತೆಗೆ ಸಂವೇದಕಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ತೇವಾಂಶಕ್ಕೆ ಅನುಗುಣವಾಗಿ ನೀರು ಬಳಸಬಹುದು ಮತ್ತು ಮೊಬೈಲ್ ಆ್ಯಪ್ ಬಳಕೆ ಮೂಲಕ ನೀರಿನ ವೇಳಾಪಟ್ಟಿ ಅಳವಡಿಸಿ, ವಿದ್ಯುತ್ ಇದ್ದಾ ಸ್ವಯಂಚಾಲಿತವಾಗಿ ನೀರಿನ ಯಂತ್ರಗಳನ್ನು ಆನ್ ಅಂಡ್ ಆಫ್ ಮಾಡುವಂತಹ ಕೆಲಸವನ್ನು ಮಾಡಬಹುದಾಗಿದೆ ಎಂದರು.
ರಾಸಾಯನಿಕ ಗೊಬ್ಬರ ಸಮತೋಲನ ಬಳಕೆ ಮಾಡದೆ ದುರ್ಬಳಕೆ ಮಾಡಿಕೊಂಡ ಪರಿಣಾಮ ಮಣ್ಣಿನಲ್ಲಿ ಇಂಗಾಲದ ಅಂಶ 3.5ಕ್ಕೆ ತಲುಪಿದೆ, ಇದರಿಂದ ಮಣ್ಣಿನ ಫಲವತ್ತ ಕಡಿಮೆಯಾಗಿ ಕೃಷಿ ಲಾಭದಾಯಕವಾಗದೆ ಯುವಕರು ಕೃಷಿಯಿಂದ ವಿಮುಖರಾಗುವಂತಹ ಸನ್ನಿವೇಶ ಎದುರಾಗಿದೆ. ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ ಅವಲಂಬಿಸಬೇಕು ಎಂಬ ಕೂಗು ಏಳುತ್ತಿದೆ. ಆದರೆ ಜಾನುವಾರು ಸಂಖ್ಯೆಗಳು ಕಡಿಮೆ ಮಾಡಿ ತಿಪ್ಪೆಗೊಬ್ಬರವಿಲ್ಲದೆ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಬೇಕು ಎನ್ನುವುದು ಸರಿಯಲ್ಲ. ಅದಕ್ಕೆ ಸಕಲ ಸಿದ್ದತೆಗಳನ್ನು ಕೈಗೊಳ್ಳಬೇಕು ಜೊತೆಗೆ ಕೃಷಿಯನ್ನು ಲಾಭದಾಯಕವಾಗಿಸಲು ಕೃಷಿಕರೇ ಉದ್ದಿಮೆದಾರರಾಗಿ ಬದಲಾಗಬೇಕು ಇಲ್ಲವಾದಲ್ಲಿ ರೈತ ಉತ್ಪಾದಕ ಸಂಸ್ಥೆಗಳೊಂದಿಗೆ ಕೈಜೋಡಿಸಿ ರೈತರ ಬೆಳೆಗಳನ್ನು ಮೌಲ್ಯವರ್ದನೆ ಮಾಡಿ ಬೆಲೆ ನಿಗದಿಗೊಳಿಸಿ ಮಾರಾಟ ಮಾಡಿದಲ್ಲಿ ಕೃಷಿಯನ್ನು ಲಾಭದಾಯಕವಾಗಿಸಬಹುದಾಗಿದೆ ಎಂದರು.
ಸುತ್ತೂರು ಶಿವರಾತ್ರಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನೀಲಗಿರಿಯ ಎಡಪಲ್ಲಿಯ ಸಿದ್ದಗಿರಿ ಸಾಯಿ ಮಠದ ಮತಾಶಕ್ತಿ ಮಾಯಿ, ಮಮತಶೇಖರ್, ಸರವಣನ್, ಬಿ.ವಿ. ವಿಠ್ಠಲ್, ಲಿಂಗರಾಜ ಗಾಂಧಿ, ಗಿರಿಜಾ ಸುದರ್ಶನ್ ಇದ್ದರು.