ಸರ್ಕಾರಿ-ಖಾಸಗಿ ಶಾಲೆಗಳ ಹೋಲಿಕೆ ಸರಿಯಲ್ಲ: ಡಾ. ಮಂತರ್ ಗೌಡ

KannadaprabhaNewsNetwork |  
Published : Jun 23, 2026, 02:45 AM IST
ಚಿತ್ರ.1: ಗದ್ದೆಹಳ್ಳದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮದ್ಯಮದ ಎಲ್‌ಕೆಜಿ ತರಗತಿ ಉದ್ಘಾಟಿಸುತ್ತಿರುವ ಶಾಸಕ ಡಾ.ಮಂತರ್‌ಗೌಡ. 2: ಶಾಸಕ ಡಾ.ಮಂತರ್‌ಗೌಡ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

Comparison of government and private schools is not correct: Dr. Mantar Gowda

ಸುಂಟಿಕೊಪ್ಪ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಏಳಿಗೆಗೆ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಅಭಿಪ್ರಾಯಪಟ್ಟಿದ್ದಾರೆ.ಸೋಮವಾರ ಗದ್ದೆಹಳ್ಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ಎಲ್‌ಕೆಜಿ ತರಗತಿ ಪ್ರಾರಂಭೋತ್ಸವವನ್ನು ನೇರವೇರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳನ್ನು ಹೊಲಿಕೆ ಮಾಡುವುದು ಸರಿಯಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಆಂಗ್ಲ ಭಾಷೆ ಕಲಿಕೆ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಆಂಗ್ಲ ಮಾಧ್ಯಮ ಭಾಷೆ ತರಗತಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದರು. ಶಾಲೆಯ ಅಭಿವೃದ್ಧಿ ಕಾಮಗಾರಿಗಾಗಿ 5 ಲಕ್ಷ ರು. ಅನುದಾನ ಘೋಷಿಸಿದರು.ಗದ್ದೆಹಳ್ಳ ಶಾಲೆಗೆ ಸೇರಿದ ಮೈದಾನವನ್ನು ಟರ್ಫ್ ಮೈದಾನವನ್ನಾಗಿ ಪರಿವರ್ತನೆಗಳಿಸಿಕೊಡಬೇಕೆಂಬ ಆಮ್ಮೆಟ್ಟಿ ಪುಟ್ಬಾಲ್ ಕ್ಲಬ್ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ 2 ಶಾಲೆಗಳ ಶಾಲಾಭಿವೃದ್ಧಿ ಸಮಿತಿಯಲ್ಲಿ ನಿರ್ಧಾರವಾಗಿ ಸರ್ಕಾರದ ಅನುಮತಿ ಪಡೆಯಬೇಕಾಗಿದೆ. ಆದರೆ ಸಂಜೆ ವೇಳೆ ಮಾತ್ರ ಕ್ಲಬ್ ಮತ್ತು ಸಾರ್ವಜನಕರಿಗೆ ಮೈದಾನ ಒದಗಿಸಲಾಗುವುದು. ಯಾವುದೇ ಅನ್ಯ ಚಟುವಟಿಕೆಗಳಿಗೆ ಮೈದಾನವನ್ನು ದುರ್ಬಳಕೆ ಮಾಡಬಾರ. ಈ ಬಗ್ಗೆ ಸಮಿತಿ ಸಭೆ ಬಳಿಕ ಮುಂದುವರಿಯೋಣ ಎಂದು ಹೇಳಿದರು.

ಸುಂಟಿಕೊಪ್ಪ ಗ್ರೇಡ್ 1 ಗ್ರಾಪಂ ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್‌ ಕುಮಾರ್ ಮಾತನಾಡಿ, ಶಾಲೆಗೆ ಅವಶ್ಯಕವಾಗಿ ತಡೆಗೋಡೆ ಮತ್ತು ಶೌಚಾಲಯ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಕೆ.ಇ. ಕರೀಂ ಮಾತನಾಡಿ, ಮುಂದಿನ ವರ್ಷ ಶಾಲೆ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದು, ಗ್ರಾಮಸ್ಥರು ಸಕಲ ಸಹಕಾರ ನೀಡಬೇಕು ಎಂದು ಹೇಳಿದರು. ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್, ಯಂಕನ ಗಿರೀಶ್, ಗ್ರಾಪಂ ಪಿಡಒ ವಿ.ಜಿ. ಲೋಕೇಶ್, ಎಚ್.ಯು. ರಫೀಕ್‌ ಖಾನ್, ಪಿ.ಆರ್. ಸುಕುಮಾರ್ ಮಾತನಾಡಿದರು.

ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸಕೀನ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಶಿವಮ್ಮ ಮಹೇಶ್, ಮಾಜಿ ಸದಸ್ಯೆ ಗೀತಾ, ಯಂಕನ ಶ್ರೀರಾಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸೌಭಾಗ್ಯ, ಎಲ್‌ಕೆಜಿ ಎಸ್‌ಡಿಎಂಸಿ ಅಧ್ಯಕ್ಷ ರಶೀದ್, ಸ್ಯಾಂಡಲ್‌ವುಡ್ ತೋಟದ ವ್ಯವಸ್ಥಾಪಕ ನಿಸಾರ್, ಬಾಳೆಕಾಡು ತೋಟದ ವ್ಯವಸ್ಥಾಪಕ ಪ್ರಸನ್ನ, ಇಬ್ರಾಹಿಂ, ಸರ್ಕಾರಿ ಮಾದರಿ ಪ್ರಾಥ ಮಿಕ ಶಾಲೆ ಮುಖ್ಯೋಪಾಧ್ಯಾಯ ವೈ.ಸಿ. ಕುಮಾರ್, ಪಟ್ಟೆಮನೆ ಚರಣ್, ಸೋಮಶೇಖರ್, ಸುಂಟಿಕೊಪ್ಪ ಗದ್ದೆಹಳ್ಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಹೇಮಾವತಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಎಂವಿಟಿಐ ವಿದ್ಯಾರ್ಥಿಗಳ ಸಂಶೋಧನೆ: ‘ನಡಿಗೆಯಿಂದ ವಿದ್ಯುತ್ ಉತ್ಪಾದನೆ’
ಸಂಶೋಧನಾ ಕ್ಷೇತ್ರ ಬಡವಾಗುತ್ತಿದೆ: ಪ್ರೊ. ವಿವೇಕ ರೈ ಕಳವಳ‍