ದಾಂಡೇಲಿ: ಪಣಸೋಳಿ ಆನೆ ಶಿಬಿರದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಲಕ್ಕು ಪಟಗಾರೆ ಅವರು ಅಲ್ಲಿದ್ದ ಆನೆ ದಾಳಿಗೆ ಒಳಗಾಗಿದ್ದು, ಶಾಶ್ವತ ಅಂಗವೈಕಲ್ಯದಿoದ ಬಳಲುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಮಾತ್ರ ಲಕ್ಕು ಪಟಕಾರೆ ಅವರ ಕುಟುಂಬದವರ ನೆರವಿಗೆ ಬಂದಿಲ್ಲ.
ಲಕ್ಕು ಪಟಕಾರೆ ಅವರನ್ನು ಮೊದಲು ದಾಂಡೇಲಿ ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಧಾರವಾಡದ ಎಸ್‌ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಅವರು ಮೊದಲಿನಂತಾಗಲಿಲ್ಲ. ಯಾವುದೇ ಪರಿಹಾರ ನೀಡದೆ ಲಕ್ಕು ಲಕ್ಕು ಪಟಕಾರೆ ಅವರನ್ನು ಅಧಿಕಾರಿಗಳು ಕೆಲಸದಿಂದ ತೆಗೆದರು. ಈಗ ಲಕ್ಕು ಪಟಕಾರೆ ಕುಟುಂಬ ಬೀದಿಗೆ ಬಂದಿದೆ.
ಕರ್ತವ್ಯದ ವೇಳೆ ಅವಘಡ ನಡೆದಿದ್ದರಿಂದ ಲಕ್ಕು ಪಟಗಾರೆ ಅವರಿಗೆ ಸೂಕ್ತ ಪರಿಹಾರ ಬರಬೇಕಿತ್ತು. ಅವರ ಆರೋಗ್ಯಕ್ಕೆ ಅನುಗುಣವಾಗಿ ಪರ್ಯಾಯ ಉದ್ಯೋಗ ಸಿಗಬೇಕಿತ್ತು ಅಥವಾ ಜೀವನಕ್ಕೆ ಆಧಾರವಾಗುವ ರೀತಿಯಲ್ಲಿ ಆರ್ಥಿಕ ನೆರವನ್ನಾದರೂ ಕೊಡಬೇಕಿತ್ತು. ಕರಡಿ ದಾಳಿಗೆ ಒಳಗಾದವರಿಗೆ ₹10 ಲಕ್ಷ ವರೆಗೆ ಪರಿಹಾರ ನೀಡಿರುವ ನಿದರ್ಶನಗಳಿವೆ. ಆದರೆ ಆನೆ ದಾಳಿಗೆ ಒಳಗಾದವರಿಗೆ ಕಿಂಚಿತ್ತೂ ಕಾಸು ನೀಡದಿರುವುದು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಿದೆ.