ಮಂಡ್ಯ ಮಂಜುನಾಥ
ಚುನಾವಣಾ ಪೂರ್ವದಲ್ಲಿ ಅಧಿಕಾರಕ್ಕಾಗಿ ವಿವಿಧ ಪಕ್ಷಗಳ ನಾಯಕರ ನಡುವೆ ಪೈಪೋಟಿ ನಡೆಯುವುದು ಸಹಜ. ಆದರೆ, ರೈತ ಸಭಾಂಗಣದ ನವೀಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಧಿಕಾರಸ್ಥರ ನಡುವೆ ಪ್ರತಿಷ್ಠೆಯ ಪೈಪೋಟಿ ಏರ್ಪಟ್ಟಿರುವುದು ಕಂಡುಬಂದಿದೆ.
ನಗರದ ಪಾರಂಪರಿಕ ಕಟ್ಟಡವಾದ ರೈತ ಸಭಾಂಗಣದಲ್ಲಿ ಕರ್ನಾಟಕ ಸಂಘದಿಂದ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಘಟಕರು ರೈತ ಸಭಾಂಗಣದ ನವೀಕರಣದ ಬಗ್ಗೆ ಪ್ರಸ್ತಾಪಿಸಿದಾಗ ನವೀಕರಣದ ಕ್ರೆಡಿಟ್‌ಗೆ ಉಭಯಪಕ್ಷಗಳ ನಾಯಕರು ಪೈಪೋಟಿ ನಡೆಸಿದ್ದು ಅಚ್ಚರಿಗೆ ಕಾರಣವಾಗಿತ್ತು.ಆರು ದಶಕದ ಇತಿಹಾಸವನ್ನು ಹೊಂದಿರುವ ರೈತಸಭಾಂಗಣ ಸೌಲಭ್ಯಗಳಿಂದ ವಂಚಿತವಾಗಿ ಇಲ್ಲಿಯವರೆಗೆ ಆಧುನಿಕತೆಯ ಸ್ಪರ್ಶವನ್ನೇ ಕಾಣದೆ ಮೂಲೆಗುಂಪಾಗಿತ್ತು. ಹಲವಾರು ಬಾರಿ ನವೀಕರಣದ ಬಗ್ಗೆ ಸಂಘಟನೆಗಳು ಪ್ರಸ್ತಾಪಿಸಿದ್ದರೂ ಯಾರೊಬ್ಬರೂ ಅದರತ್ತ ಆಸಕ್ತಿ ತೋರಿರಲಿಲ್ಲ. ಸಭಾಂಗಣದ ಸ್ಥಿತಿ-ಗತಿಗಳನ್ನು ತೋರಿಸಬೇಕೆಂಬ ಉದ್ದೇಶದಿಂದಲೇ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡರು ರೈತ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು.
ಆ ವೇಳೆಗಾಗಲೇ ವೇದಿಕೆಯಲ್ಲಿದ್ದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ದೂರವಾಣಿ ಮುಖಾಂತರವೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ರೈತಸಭಾಂಗಣದ ನವೀಕರಣದ ವಿಷಯ ಪ್ರಸ್ತಾಪಿಸಿದಾಗ, ಒಂದು ಕೋಟಿಯಲ್ಲ, ಎರಡು ಕೋಟಿ ರು. ಖರ್ಚಾಗಲಿ. ಸಭಾಂಗಣದ ನವೀಕರಣಕ್ಕೆ ಸಿಎಸ್‌ಆರ್ ಫಂಡ್ ಮೂಲಕ ಹಣ ನೀಡುವ ಭರವಸೆ ನೀಡಿದಲ್ಲದೇ, ನವೀಕರಣದ ಅಂದಾಜುಪಟ್ಟಿ ಕಳುಹಿಸಿ, ಪೂಜೆಗೆ ಸಿದ್ಧಮಾಡಿಕೊಳ್ಳುವಂತೆ ತಿಳಿಸಿದ್ದನ್ನು ಸಿ.ಎಸ್.ಪುಟ್ಟರಾಜು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಅಂದಾಜುಪಟ್ಟಿ ಪ್ರಕ್ರಿಯೆ ಆರಂಭ:
ಕೇಂದ್ರದಿಂದ ಹಣ ಬಿಡುಗಡೆಗೊಳಿಸಿ ಆರು ತಿಂಗಳೊಳಗೆ ಕಾಮಗಾರಿ ಪೂರೈಸುವುದರೊಂದಿಗೆ ಕಾಂಗ್ರೆಸ್‌ನವರಿಗೆ ಹಿನ್ನಡೆ ಉಂಟುಮಾಡಬೇಕೆಂಬ ಉದ್ದೇಶವೂ ಇದರ ಹಿಂದೆ ಅಡಗಿರುವಂತೆ ಕಂಡುಬರುತ್ತಿದೆ. ಅಭಿವೃದ್ಧಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ನಡೆಸುತ್ತಿರುವ ಪ್ರತಿಷ್ಠೆಯ ಪೈಪೋಟಿಯಲ್ಲಿ ಪಾರಂಪರಿಕ ಕಟ್ಟಡ ಎನಿಸಿರುವ ರೈತಸಭಾಂಗಣ ತನ್ನ ಮೂಲ ರೂಪವನ್ನು ಉಳಿಸಿಕೊಂಡು ಯಾವ ರೀತಿ ಆಧುನಿಕ ಸ್ಪರ್ಶವನ್ನು ಪಡೆದುಕೊಳ್ಳಲಿದೆ ಎನ್ನುವುದು ಎಲ್ಲರ ಕುತೂಹಲವನ್ನು ಕೆರಳಿಸುವಂತೆ ಮಾಡಿದೆ.ಎಚ್‌ಡಿಕೆಯಿಂದಲೇ ಘೋಷಣೆ
- ಸಿ.ಎಸ್.ಪುಟ್ಟರಾಜು, ಮಾಜಿ ಸಚಿವರು