- ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲು: ಅಭಾಲಿಂಪಂಮ ಜಿಲ್ಲಾಧ್ಯಕ್ಷ
- ಸಮಾಜಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಅಶೋಕ್ ಗೋಪನಾಳು ಒತ್ತಾಯ
- ಹೋರಾಟ ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಲಾಠಿ ಚಾರ್ಜ್ ಮಾಡಿದೆ ಎಂದು ಆಕ್ರೋಶ- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಎಂಬ ವ್ಯಕ್ತಿ ಡಿ.14ರಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಕೂಡಲ ಸಂಗಮದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದೇವೆ ಎಂದರು.
ಸ್ವಾಮೀಜಿ ಕೈ ಕತ್ತರಿಸುತ್ತೇನೆ, ಆತ ಸ್ವಾಮಿಯೇ ಅಲ್ಲ, ಬಿಜೆಪಿ ಏಜೆಂಟರಂತೆ ವರ್ತಿಸುವ ಸ್ವಾಮೀಜಿ, ಸಿಎಂ ಸಿದ್ದರಾಮಯ್ಯ ಅವರಿಗೆ ಮುಗಿಸುವ ಸುಫಾರಿ ಪಡೆದಿದ್ದಾರೆ, ಮಠ ತ್ಯಜಿಸಬೇಕು, ಪುಡಾರಿಯಂತೆ ಸ್ವಾಮೀಜಿ ವರ್ತಿಸುತ್ತಿದ್ದಾರೆ. ಸ್ವಾಮೀಜಿಯಾಗಲು ನಾಲಾಯಕ್, ಕಾವಿ ಬಟ್ಟೆ ಬಿಚ್ಚಿಟ್ಟು ಬನ್ನಿ, ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದೀರಿ ಅಂತೆಲ್ಲಾ ಅವಾಚ್ಯ ಶಬ್ಧಗಳಿಂದ ತೇಜೋವಧೆ ಮಾಡಿದ್ದಾರೆ. ಆ ಮೂಲಕ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
- - -
ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷನಾಗಿ ಶಿವರಾಮು ಅದೇ ವರ್ಗಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬಿಟ್ಟಿ ಗ್ಯಾರಂಟಿಗೆ ಬಳಸಿದ್ದು ಯಾಕೆಂದು ಸಿಎಂ ಸಿದ್ದರಾಮಯ್ಯರಿಗೆ ಪ್ರಶ್ನಿಸಲಿ. ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಬಳಿ ಕೆ.ಎಸ್.ಶಿವರಾಮು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಮುಂದಿನ ದಿನಗಳಲ್ಲಿ ರಾಜ್ಯವಾಪಿ ಹೋರಾಟ ಸಹ ಮಾಡುತ್ತೇವೆ
- - - -16ಕೆಡಿವಿಜಿ2: