ದೇವಸ್ಥಾನದ ಜಾಗಂಟೆ ಶಬ್ದದಿಂದ ಕಿರಿಕಿರಿ ವಿರುದ್ಧ ದೂರು ದಾಖಲು

KannadaprabhaNewsNetwork |  
Published : Feb 26, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಚಿಕ್ಕಮಗಳೂರು ನಗರದಲ್ಲಿ ದೇವಸ್ಥಾನದ ಜಾಗಂಟೆ ಶಬ್ದದಿಂದ ಕಿರಿಕಿರಿ ಆಗುತ್ತಿದೆ ಎಂದು ಅನ್ಯಕೋಮಿನ ವ್ಯಕ್ತಿಯೊಬ್ಬ ಪೊಲೀಸ್‌ ಠಾಣೆಗೆ ದೂರು ನೀಡಿರುವ ಘಟನೆ ಬಸವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

(ಸುದ್ದಿಗೆ ಚನ್ನಾಗಿ ಬರಲಿ)

- ನಗರದ ಹಳೆ ಉಪ್ಪಳ್ಳಿಯ ಈಶ್ವರ ದೇವಸ್ಥಾನದ ವಿರುದ್ಧ ಆಕ್ಷೇಪ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ನಗರದಲ್ಲಿ ದೇವಸ್ಥಾನದ ಜಾಗಂಟೆ ಶಬ್ದದಿಂದ ಕಿರಿಕಿರಿ ಆಗುತ್ತಿದೆ ಎಂದು ಅನ್ಯಕೋಮಿನ ವ್ಯಕ್ತಿಯೊಬ್ಬ ಪೊಲೀಸ್‌ ಠಾಣೆಗೆ ದೂರು ನೀಡಿರುವ ಘಟನೆ ಬಸವನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಹಳೆ ಉಪ್ಪಳ್ಳಿಯ ಈಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಹಾಗೂ ಸಂಜೆ ಜಾಗಂಟೆ ಹಾಕುವಕ್ಕೆ ಆಕ್ಷೇಪ ವ್ಯಕ್ತವಾಗಿದೆ. ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ಸುಮಾರು 6.30 ರಿಂದ 7 ಗಂಟೆವರೆಗೆ ಸುಪ್ರಭಾತ ಹಾಗೂ ಜಾಗಂಟೆ ಮೊಳಗಿಸ ಲಾಗುತ್ತದೆ. ಜತೆಗೆ ಬೆಳಗ್ಗೆ 15 ನಿಮಿಷ ಮತ್ತು ಸಂಜೆ 15 ನಿಮಿಷ ಜಾಗಂಟೆ ಹಾಕುವ ಆಚರಣೆ ಇದೆ. ಆದರೆ ಈ ಶಬ್ದದಿಂದ ತೊಂದರೆ ಆಗುತ್ತಿದೆ ಎಂದು ಫಾರೂಕ್ ಎಂಬ ಅನ್ಯಕೋಮಿನ ವ್ಯಕ್ತಿ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ದೂರು ಆಧಾರಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ ಪೊಲೀಸರು ಅರ್ಚಕ ಜಗದೀಶ್ ಭಟ್ ಅವರಿಗೆ ಜಾಗಂಟೆ ಶಬ್ದ ಹೊರಗೆ ಕೇಳಿಸದಂತೆ ಕ್ರಮ ಕೈಗೊಳ್ಳಲು ಸೂಚಿಸಿದರೆಂದು ತಿಳಿದುಬಂದಿದೆ.

ಪೊಲೀಸರ ನಡೆ ಬಗ್ಗೆ ಬೇಸರ:

ಜಾಗಂಟೆಯನ್ನು ಗರ್ಭಗುಡಿಯಲ್ಲಿ ಇಡುವುದು ಹಾಗೂ ದೇವಸ್ಥಾನದ ಸುತ್ತ ಎತ್ತರದ ಗೋಡೆ ನಿರ್ಮಿಸುವಂತೆ ಸಲಹೆ ನೀಡಲಾಗಿದೆ ಎನ್ನಲಾಗಿದೆ. ಹಿಂದೂ ದೇವರ ಪೂಜೆಗೆ ಇಂತಹ ಪರಿಸ್ಥಿತಿ ಎದುರಾಗುತ್ತಿದೆ ಎನ್ನುವುದು ನೋವು ತಂದಿದೆ. ನಾವು ನಮ್ಮ ಆಚರಣೆ ಮಾಡುತ್ತೇವೆ. ಇತರರ ಆಚರಣೆಗಳಿಗೆ ಗೌರವ ನೀಡುತ್ತೇವೆ. ನಮ್ಮ ಆಚರಣೆಗೂ ಗೌರವ ನೀಡ ಬೇಕು ಎಂದು ಅರ್ಚಕ ಜಗದೀಶ್ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ. ---ಕೋಟ್‌--

ಈ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಹಿಂದೂಳಿಗೆ ಒಂದು ಕಾನೂನು, ಅಲ್ಪ ಸಂಖ್ಯಾತರಿಗೆ ಒಂದು ಕಾನೂನು ಎಂಬತಾಗಿದೆ. ಇದನ್ನು ಹೆಚ್ಚು ದಿನ ಹಿಂದೂಗಳು ಸಹಿಸಿಕೊಳ್ಳುವ ಪ್ರಶ್ನೆ ಇಲ್ಲ. ಇದೇ ರೀತಿ ಮುಂದುವರಿದರೆ ಚಿಕ್ಕಮ ಗಳೂರಿನ ಎಲ್ಲ ದೇವಸ್ಥಾನದಲ್ಲಿ ಮಸೀದಿಯಲ್ಲಿ ಎಷ್ಟು ಬಾರಿ ಪ್ರಾರ್ಥನೆ ಮೊಳಗಿಸುತ್ತಾರೋ ಅಷ್ಟು ಬಾರಿ ಘಂಟೆ, ಸುಪ್ರಭಾತ ಮೊಳಗಿಸಬೇಕಾಗಲಿದೆ. ಈ ಬಗ್ಗೆ ಶಾಸಕರು ಸಂಬಂಧಪಟ್ಟವರಿಗೆ ಬುದ್ಧಿ ಹೇಳುವ ಕೆಲಸ ಮಾಡಬೇಕು.

-ದೇವರಾಜ್‌ ಶೆಟ್ಟಿ,

ಬಿಜೆಪಿ ಜಿಲ್ಲಾಧ್ಯಕ್ಷ, ಚಿಕ್ಕಮಗಳೂರು

-- ಕೋಟ್‌--

ಹಿಂದೂಗಳನ್ನು ಭಯಭೀತಗೊಳಿಸಬೇಕೆಂದು ಈ ರೀತಿ ಹಲವು ವರ್ಷದಿಂದ ಸಂಚು ನಡೆಸಲಾಗುತ್ತಿದೆ. ಈ ಬಾರಿ ಪೊಲೀಸ್‌ ಗೆ ದೂರು ಕೊಡಲಾಗಿದೆ. ಪುರಾತನ ದೇವಸ್ಥಾನವಾದ ಇದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದೀಗ ಹಿಂದೂಪರ ಸಂಘಟನೆಗಳ ಬೆಂಬಲ ನೀಡುತ್ತಿದ್ದಾರೆ.

- ಜಗದೀಶ್ ಭಟ್‌, ಈಶ್ವರನ ದೇವಸ್ಥಾನದ ಅರ್ಚಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಮಹಿಳೆಯರಿಗೆ ಸವಲತ್ತು ಒದಗಿಸಿ ಆರ್ಥಿಕ ಶಕ್ತಿತುಂಬಿ: ಸುಜಾತಾ
ಮಕ್ಕಳಿಗೆ ಅಂಗನವಾಡಿಗಳೇ ಮೊದಲ ಪಾಠಶಾಲೆ