ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ರಾಷ್ಟ್ರಪತಿಗೆ ದೂರು

KannadaprabhaNewsNetwork |  
Published : Dec 23, 2024, 01:00 AM IST
ಮಧುಗಿರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಡಿಎಸ್‌ ಎಸ್‌ ಸಂಘಟನೆಗಳಿಂದ ರಾಷ್ಟ್ರಪತಿಗಳಿಗೆ ತಲುಪಿಸುವಂತೆ ಎಸಿ ಗೋಟೂರು ಶಿವಪ್ಪ ಅವರಿಗೆ ದೊಡ್ಡೇರಿ ಕಣಿಮಯ್ಯ ನೇತೃತ್ವದಲ್ಲಿ ಎಸಿ ಗೋಟೂರು ಶಿವಪ್ಪ ಅವಿರೆಗ  ಮನವಿ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಬಗ್ಗೆ ಸಂಸತ್ತಲ್ಲಿ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ಕೇಂದ್ರ ಸಚಿವ ಸಂಪುಟದಿಂದ ಕೈ ಬಿಟ್ಟು ಲೋಕಸಭಾ ಸ್ಥಾನದಿಂದ ವಜಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಧುಗಿರಿ ತಾಲೂಕು ಘಟಕದಿಂದ ರಾಷ್ಟ್ರಪತಿಗೆ ದೂರು ತಲುಪಿಸುವಂತೆ ಮನವಿ ನೀಡಲಾಯಿತು.

ಕನ್ನಡಪ್ರಭವಾರ್ತೆ ಮಧುಗಿರಿ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಬಗ್ಗೆ ಸಂಸತ್ತಲ್ಲಿ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ಕೇಂದ್ರ ಸಚಿವ ಸಂಪುಟದಿಂದ ಕೈ ಬಿಟ್ಟು ಲೋಕಸಭಾ ಸ್ಥಾನದಿಂದ ವಜಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಧುಗಿರಿ ತಾಲೂಕು ಘಟಕದಿಂದ ರಾಷ್ಟ್ರಪತಿಗೆ ದೂರು ತಲುಪಿಸುವಂತೆ ಮನವಿ ನೀಡಲಾಯಿತು.

ಇಲ್ಲಿನ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ, ಡಿಎಸ್‌ಎಸ್‌ ಸಂಚಾಲಕ ದೊಡ್ಡೇರಿ ಕಣಿಮಯ್ಯ ದೇಶದ ಸಮಗ್ರ ದಲಿತರ ಆಶಾಕಿರಣವಾಗಿರುವ ಬಾಬ ಸಾಹೇಬ್‌ ಅಂಬೇಡ್ಕರ್‌ ವಿರದ್ಧವಾಗಿ ಅಮಿತ್‌ ಶಾ ಹೇಳಿರುವುದು ಸರಿಯಲ್ಲ. ಅಂಬೇಡ್ಕರ್‌ ಇಲ್ಲದಿದ್ದರೆ ಈ ದೇಶದ ಬಹು ಸಂಖ್ಯಾತರು, ಶಿಕ್ಷಣ,ವಸತಿ ಹಾಗೂ ಸ್ವಾತಂತ್ರ್ಯವಿಲ್ಲದಂತೆ ಬದುಕು ಬೇಕಿತ್ತು. ಹಾಗಾಗಿ ನಮಗೆ ಅಂಬೇಡ್ಕರ್ ದೇವರು. ಕಷ್ಟ ಕಾಲದಲ್ಲಿದ್ದಾಗ ಯಾವ ದೇವರು ಬರುವುದಿಲ್ಲ , ಸಂವಿಧಾನವೇ ನಮ್ಮಬದುಕಿನ ಉಸಿರು. ಇಂತಹ ಸಂವಿಧಾನ ರಚಿಸಿ ದೇಶದ ಎಲ್ಲ ವರ್ಗದವರಿಗೂ ಬದುಕು ಕಟ್ಟಿಕೊಟ್ಟಿರುವ ಮಹಾನ್‌ ಮಾನವತವಾದಿ ಅಂಬೇಡ್ಕರ್‌ ಬಗ್ಗೆ ಲಘುವಾಗಿ ಮಾತನಾಡಿ, ದಲಿತರ ಭಾವನೆಗಳಿಗೆ ನೋವು ನೀಡಿದ್ದಾರೆ. ಇಂತಹ ಮನಸ್ಥಿತಿಯುಳ್ಳ ಅಮಿತ್‌ ಶಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈ ಬಿಟ್ಟು ಎಸ್ಸಿ ಎಸ್ಟಿ ಕಾಯ್ದೆಯೆಂತೆ ಕೇಸು ದಾಖಲಿಸುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಎಸಿ ಗೋಟೂರು ಶಿವಪ್ಪ ಸಂಘ ಸಂಸ್ಥೆಗಳ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುದು ಎಂದರು. ಈ ಸಂದರ್ಭದಲ್ಲಿ ಪಿಎಸ್‌ಐ ವಿಜಯ್‌ ಕುಮಾರ್‌, ಡಿಎಸ್‌ಎಸ್‌ ಮುಖಂಡ ಜೀವಿಕ ಮಂಜುನಾಥ್‌, ಸುನೀಲ್ ಕುಮಾರ್‌ , ಸಂಜೀವಯ್ಯ ರಂಗನಾಥ್‌ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ