ನುಡಿನಮನ ಕಾರ್ಯಕ್ರಮ
ಮಹಾನ್ ಹೋರಾಟಗಾರ, ಕಾರ್ಮಿಕರ ಧ್ವನಿ ಕಾಮ್ರೇಡ್ ಡಿ.ಸಿ ಮಾಯಣ್ಣ ಮತ್ತು ಬಡ ಮಕ್ಕಳಿಗೆ ಶಿಕ್ಷಣ ನೀಡಿದ ಮಹಾತ್ಮ, ಕಾರ್ಮಿಕರ ನಾಯಕ ಕಾಳೇಗೌಡ ಈ ಇಬ್ಬರು ಕ್ಷೇತ್ರದ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ಮಾಣಿಕ್ಯಗಳಾಗಿ ಉಳಿದುಕೊಂಡಿದ್ದಾರೆಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಬಣ್ಣಿಸಿದರು.
ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ), ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಇತ್ತೀಚೆಗೆ ನಿಧನರಾದ ಕಾಮ್ರೆಡ್‌ಗಳಾದ ಡಿ.ಸಿ ಮಾಯಣ್ಣ, ಕಾಳೇಗೌಡ, ಅನಂತ ಸುಬ್ಬರಾವ್‌ರವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಡಿ.ಸಿ.ಮಾಯಣ್ಣ, ಕಾಳೇಗೌಡರವರನ್ನು ಕಳೆದುಕೊಂಡಿರುವುದು ತುಂಬಾ ನೋವುಂಟು ಮಾಡಿದೆ. ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಡಿ.ಸಿ ಮಾಯಣ್ಣನವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಕಾರ್ಮಿಕ ಸಂಘಟನೆಗಳ ನಾಯಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಕಾರ್ಮಿಕರು ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಡಿ.ಸಿ. ಮಾಯಣ್ಣರಂತಹ ನಾಯಕರನ್ನು ಕಳೆದುಕೊಂಡಿರುವುದು ನಮ್ಮೆಲ್ಲರ ದೌರ್ಭಾಗ್ಯ. ಕ್ಷೇತ್ರದಲ್ಲಿ ಡಿ.ಸಿ ಮಾಯಣ್ಣ ಒಂದು ಇತಿಹಾಸವಾಗಿ ಉಳಿದುಕೊಂಡಿದ್ದಾರೆ ಎಂದರು.
ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ ಲೋಕೇಶ್ ಮಾತನಾಡಿ, ಡಿ.ಸಿ ಮಾಯಣ್ಣ ಮತ್ತು ಕಾಳೇಗೌಡರವರನ್ನು ಸಿಪಿಐ ಎಂದಿಗೂ ಮರೆಯುವುದಿಲ್ಲ. ಈ ಇಬ್ಬರು ಮಹಾನ್ ನಾಯಕರು ತಮ್ಮ ಬದುಕನ್ನು ಕಾರ್ಮಿಕರಿಗಾಗಿ ಮುಡುಪಾಗಿಟ್ಟಿದ್ದಾರೆ. ಇವರು ಎಂದಿಗೂ ಹೋರಾಟಕ್ಕೆ ಸ್ಫೂರ್ತಿದಾಯಕರು ಎಂದರು.
ಭಾರತ ಕಮ್ಯೂನಿಸ್ಟ್ ಪಕ್ಷ ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದು, ಕಾರ್ಯದರ್ಶಿ ಐಸಾಕ್ ಲಿಂಕನ್ ಸ್ವಾಗತಿಸಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕಾರ್ಮಿಕ ಮುಖಂಡ ಕೆ. ರಾಜಪ್ಪ ಕಾರ್ಯಕ್ರಮ ನಿರೂಪಿಸಿದರು. ಡಿ೧-ಬಿಡಿವಿಟಿ೨
ಭದ್ರಾವತಿಯಲ್ಲಿ ಕಾಮ್ರೆಡ್ ಮಾಯಣ್ಣ, ಕಾಳೇಗೌಡ, ಅನಂತ ಸುಬ್ಬರಾವ್‌ರವರಿಗೆ ಹಮ್ಮಿಕೊಂಡ ನುಡಿನಮನ ಕಾರ್ಯಕ್ರಮದಲ್ಲಿ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಪಾಲ್ಗೊಂಡು ಮಾತನಾಡಿದರು.