ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಗುಂದಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ 120 ಜನರಿಗೆ ಸರಿಯಾಗಿ ಅಕ್ಕಿ ವಿತರಣೆ ಮಾಡಿಲ್ಲ ಎಂದು ಕೆಲವರು ಸಾರ್ವಜನಿಕರ ಸಹಿ ಮಾಡಿ ತಹಸೀಲ್ದಾರ್ ಕಚೇರಿಯ ಆಹಾರ ಇಲಾಗೆ ಮನವಿ ಕೊಟ್ಟಿದ್ದು, ಹಿನ್ನಲೆ ಈ ವಿಷಯ ಗ್ರಾಮಸ್ಥರಿಗೆ ತಿಳಿದ ಕೂಡಲೇ ಗ್ರಾಮದ ಲಕ್ಷ್ಮೀದೇವ ದೇಸ್ಥಾನದಲ್ಲಿ ಧರಣಿ ನಡೆಸಿ, ತಹಸೀಲ್ದಾರರು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮಾಹಿತಿ ಪಡೆದು ನಕಲಿ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಮೇಲೆ ಕಾನೂನು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಕಲಿ ದೂರು ನೀಡಿದ ವ್ಯಕ್ತಿಗಳ ಮೇಲೆ ಕಾನೂನು ಸೂಕ್ತ ಕ್ರಮಕೈಗೊಳ್ಳುವಂತೆ ತಹಶೀಲ್ದಾರ ಹಾಗೂ ಪಿಎಸ್‌ಐಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.ತಹಸೀಲ್ದಾರ್ ಕಚೇರಿಯ ಶಿರೆಸ್ತೇದಾರ ಪರಸಪ್ಪ ನಾಯಕ, ಆಹಾರ ಇಲಾಖೆಯ ಸುನೀಲ ದೇಸಾಯಿ, ಪೊಲೀಸ್ ಸಿಬ್ಬಂದಿ ಎನ್ ಎಸ್ ಒಡೆಯರ್ ಇತರರು ಇದ್ದರು.