ಕನ್ನಡಪ್ರಭ ವಾರ್ತೆ ಮಂಗಳೂರು/ ಉಳ್ಳಾಲ
ಅಲ್ಪಕಾಲ ಅನಾರೋಗ್ಯದಿಂದ ಬಳಸುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಬೆಳಗ್ಗೆ ಕೋಟೆಕಾರಿನ ಅಡ್ಕ ಸಮೀಪದ ಸ್ವಗೃಹದಲ್ಲಿ ನಿಧನರಾದರು. ಅಮೃತರು ಪತ್ನಿ ನರ್ಮದಾ, ಮಕ್ಕಳಾದ ಚೇತನ್ ಸೋಮೇಶ್ವರ, ಜೀವನ್ ಸೋಮೇಶ್ವರ ಸೇರಿದಂತೆ ಕುಟುಂಬಿಕರು, ಬಂಧು, ಬಳಗವನ್ನು ಅಗಲಿದ್ದಾರೆ.
ಕನ್ನಡ ಮತ್ತು ತುಳು ಭಾಷೆಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ ಮೇರು ಸಾಹಿತಿ, ಹಿರಿಯ ವಿಮರ್ಶಕರಾದ ಅಮೃತರು ಕರಾವಳಿ ಕರ್ನಾಟಕದ ಯಕ್ಷಗಾನ, ಭೂತಾರಾಧನೆ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಅನೇಕ ಕೃತಿಗಳನ್ನೂ ಹೊರತಂದಿದ್ದಾರೆ. ಇವರ ಕೃತಿಗಳು ಯಕ್ಷಗಾನ ಪ್ರಸಂಗಗಳಾಗಿ ಮೇಳಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ.ಮಾತೃ ಭಾಷೆ ಮಲೆಯಾಳ ಆದರೂ ಕನ್ನಡ ಪ್ರೇಮ:
ತನ್ನ ಬಾಲ್ಯವನ್ನು ಮುಂಬೈನಲ್ಲಿ ಕಳೆದ ಅಮೃತರು ಐದು ವರ್ಷವಾಗುವಾಗ ಹೆತ್ತವರು ಊರಿಗೆ ಮರಳಿದ್ದರು. ಆಗ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ನಲ್ಲಿ ಐದನೇ ತರಗತಿ ವರೆಗೆ ಕಲಿತರು. ನಂತರ ಪ್ರೌಢಶಿಕ್ಷಣ ಆನಂದಾಶ್ರಮದಲ್ಲಿ. 1954ರಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದರು. ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಪೂರೈಸಿದರು.
ಯಕ್ಷಗಾನ ಪ್ರಸಂಗಗಳಿಗೆ ಹೊಸ ಆಯಾಮ:
70ಕ್ಕೂ ಹೆಚ್ಚು ಕೃತಿ:
ಅಮೃತ ಸೋಮೇಶ್ವರರು ತುಳುವಿನಲ್ಲಿಯೂ ಕೃತಿ ರಚಿಸಿದ್ದು ತಂಬಿಲ, ರಂಗೀತ (ತುಳು ಕವನ ಸಂಕಲನಗಳು); ತುಳು ಪಾಡ್ದನ ಕತೆಗಳು, ಅವಿಲು (ತುಳು ಜಾನಪದ ಕತೆಗಳು), ಅಪಾರ್ಥಿನಿ ಎಂಬ ಕುಚೋದ್ಯದ ಶಬ್ದಕೋಶವಲ್ಲದೆ ಫಿನ್ಲೆಂಡಿನ ಜಾನಪದ ಮಹಾಕಾವ್ಯವಾದ ‘ಕಾಲೇವಾಲ’ ವನ್ನೂ ತುಳುಭಾಷೆಗೆ ಅನುವಾದಿಸಿದ್ದಾರೆ.
ಪ್ರಶಸ್ತಿಗಳ ಸರಮಾಲೆ:
ಗಣ್ಯರ ಸಂತಾಪ: ಅಮೃತ ಸೋಮೇಶ್ವರ ಅವರ ನಿಧನಕ್ಕೆ ಸಂತಾಪಗಳ ಮಹಪೂರವೇ ಹರಿದುಬಂದಿದೆ. ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ವಿಶ್ವಹಿಂದು ಪರಿಷತ್, ಬಜರಂಗದಳ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತಿತರ ಸಂಘ, ಸಂಸ್ಥೆಗಳು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಅಂತ್ಯಕ್ರಿಯೆ: ಅಮೃತ ಸೋಮೇಶ್ವರ ಅವರ ಸ್ವಗೃಹದಲ್ಲಿ ಮೃತದೇಹದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಜ.7ರಂದು ಬೆಳಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಶ್ರೀಧರ್ಮಸ್ಥಳ ಮೇಳದಲ್ಲಿ ಹಿಟ್ ಆದ ಪ್ರಸಂಗಗಳುಅಮೃತ ಸೋಮೇಶ್ವರ ಅವರು ಸುಮಾರು 32ಕ್ಕೂ ಅಧಿಕ ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಬಹುತೇಕ ಪ್ರಸಂಗಗಳನ್ನು ಶ್ರೀಧರ್ಮಸ್ಥಳ ಯಕ್ಷಗಾನ ಮೇಳಕ್ಕಾಗಿಯೇ ಬರೆದಿದ್ದು, ಅದನ್ನು ಪ್ರದರ್ಶಿಸಿ ಹಿಟ್ ಆಗಿದೆ. ಸಹಸ್ರಕವಚ ಮೋಕ್ಷ, ಕಾಯಕಲ್ಪ, ಅಮರವಾಹಿನಿ, ತ್ರಿಪುರ ಮಥನ, ಮಹಾಕಲಿ ಮಗಧೇಂದ್ರ, ವಂಶವಾಹಿನಿ, ಮಹಾಶೂರ ಭೌಮಾಸುರ, ಚಕ್ರವರ್ತಿ ದಶರಥ, ಸಾರ್ವಭೌಮ ಸಹಸ್ರಾನೀಕ, ಅಂಧಕ ಮೋಕ್ಷ, ಭುವನ ಭಾಗ್ಯ ಪ್ರಸಂಗಗಳನ್ನು ರಚಿಸಿದ್ದು, ಅವು ಜನಜೀವನಕ್ಕೆ ಸತ್ವ ನೀಡುವ ಸಂದೇಶಗಳು, ಪ್ರಕೃತಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಪಾತ್ರಗಳ ವಿಶೇಷ ಚಿತ್ರಣ ನೀಡುತ್ತಿವೆ. ಪುರಾಣವನ್ನು ಇಂದಿನ ವಾಸ್ತವತೆಗೆ ಕೈಗನ್ನಡಿಯಾಗಿ ವಿಶೇಷ ಸಂದೇಶಗಳ ಜತೆಗೆ ಪ್ರಸ್ತುತಪಡಿಸುವಂತೆ ಪ್ರಸಂಗ ರಚಿಸುತ್ತಿದ್ದರು. ಧರ್ಮಸ್ಥಳ ಮೇಳದ ಹಿಂದಿನ ಕಲಾವಿದರ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಸಂಗ ರಚಿಸುತ್ತಿದ್ದುದು ಇವರ ಹೆಚ್ಚುಗಾರಿಕೆ. ‘ಪುರಾಣದ ಚೌಕಟ್ಟು ಮೀರದೆ, ಅತೀ ಸರಳ, ಸುಂದರ ಶೈಲಿಯ ಛಂದಸ್ಸುಗಳಿಂದ ಅದ್ಭುತ ಸಂದೇಶವುಳ್ಳ ಪ್ರಸಂಗ ರಚಿಸುತ್ತಿದ್ದರು. ಯಾವುದೇ ಭಾಗವತರು ಪದ್ಯ ಹೇಳಿದರೆ ಸೈ ಎನಿಸುವ ಪ್ರಸಂಗ ರಚನೆ ಇರುತ್ತಿತ್ತು’ ಎನ್ನುವುದು ಶ್ರೀಧರ್ಮಸ್ಥಳ ಮೇಳದ ಪ್ರಧಾನ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಅಭಿಪ್ರಾಯ.ಡಾ.ವೀರೇಂದ್ರ ಹೆಗ್ಗಡೆ ಸಂತಾಪ: ಕನ್ನಡ, ತುಳು ಸಾರಸ್ವತ ಲೋಕದ ಖ್ಯಾತ ಸಾಹಿತಿಯಾಗಿ, ಸಂಶೋಧಕರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದ ಡಾ. ಅಮೃತ ಸೋಮೇಶ್ವರವರು ಮೃದು ಸ್ವಭಾವಿ, ಸಹೃದಯಿಯಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಯಕ್ಷಗಾನ ಮೇಳಕ್ಕೆ ಪುರಾಣ, ಐತಿಹಾಸಿಕ ಸೇರಿದಂತೆ ೧೧ ಪ್ರಸಂಗಗಳನ್ನು ಬರೆದುಕೊಟ್ಟಿದ್ದರು. ಅವುಗಳ ಯಶಸ್ವಿ ಪ್ರಯೋಗಗಳು ನಡೆಯುತ್ತಿದ್ದವು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ. ರಾಜ್ಯಸಭಾ ಸದಸ್ಯರೂ ಆದ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ತುಳುವಿನಲ್ಲಿ ಬರೆದ ಅವರ ಅನೇಕ ಹಾಡುಗಳು ಪ್ರಸಿದ್ಧವಾಗಿದ್ದವು. ಕೆಲವು ಹಾಡಿನ ತುಳು ಭಾಷಾಂತರ ಕೂಡ ಮಾಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯಿಂದ ಜಾನಪದ ತಜ್ಞ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿಯಿಂದ ಪಾರ್ತಿಸುಬ್ಬ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿ ಮೇರು ಸಾಹಿತಿಯಾಗಿದ್ದ ಅವರನ್ನು ಕಳೆದುಕೊಂಡದ್ದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ.
ಬದುಕಿನ ಪ್ರಯಾಣದ ನಡುವೆ ಅನಂತ ಸಾಧನೆಗೈದು ಜನಪ್ರಿಯರೂ ಬಹುಮಾನ್ಯರೂ ಆಗಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಅಭಿಮಾನಿಗಳಾಗಿದ್ದು ನಿರಂತರ ಸಂಪರ್ಕದಲ್ಲಿದ್ದವರು.ನಾಡು ಇಂದು ಅತ್ಯಂತ ಹಿರಿಯ ಹಾಗೂ ಮೇಧಾವಿ ಸಾಹಿತಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕುವಂತೆ ಭಗವಾನ್ ಶ್ರೀ ಮಂಜುನಾಥ ಸ್ವಾಮಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಡಾ.ಹೆಗ್ಗಡೆ ಅವರು ಸಂತಾಲಪ ಸೂಚಕದಲ್ಲಿ ತಿಳಿಸಿದ್ದಾರೆ.