- ಲಿಂಗಾಯತ, ಒಕ್ಕಲಿಗರಿಗಷ್ಟೇ ಅಲ್ಲ, ಎಲ್ಲರಿಗೂ ತೊಂದರೆ - 10 ವರ್ಷ ಹಳೇ ವರದಿಗೆ ಬಹುತೇಕರ ವಿರೋಧವೂ ಇದೆ - - -
ನಗರದಲ್ಲಿ ಮಂಗಳವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಲಿಂಗಾಯತ, ಒಕ್ಕಲಿಗ ಇಬ್ಬರಿಗೆ ತೊಂದರೆ ಆಗಿದೆಯೆಂಬ ಪ್ರಶ್ನೆ ಇದಲ್ಲ. ಬಹುತೇಕರಿಗೆ ತೊಂದರೆ ಆಗಿದೆ. ಈಗಾಗಲೇ ಬಹುತೇಕ ಕಡೆಯಿಂದ ಜಾತಿ ಗಣತಿ ವರದಿ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಜಾತಿ ವರದಿಯಲ್ಲಿ ಲಿಂಗಾಯತರ ಸಂಖ್ಯೆಯೇ ಕಡಿಮೆ ಇದೆ. ಇನ್ನೊಂದು ವರ್ಗದ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರಕ್ಕೂ ನಾವೊಂದು ಸಲಹೆ ನೀಡುತ್ತೇವೆ ಎಂದು ತಿಳಿಸಿದರು.
ಹೊಸದಾಗಿ ರಾಜ್ಯಾದ್ಯಂತ ಜಾತಿ ಗಣತಿ ಕಾರ್ಯ ಕೈಗೊಳ್ಳುವ ಕೆಲಸ ಆಗಲಿ. ಮೇಲಾಗಿ ಈ ಜಾತಿ ವರದಿಯನ್ನು ಸ್ವತಃ ಆಡಳಿತ ಪಕ್ಷದ ಸಚಿವರು, ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ನಿರೀಕ್ಷೆಯಂತೆ ಜಾತಿ ಜನಗಣತಿ ವರದಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುವುದಿಲ್ಲ. ಅಂತಹ ಸಾಧ್ಯತೆಯೂ ಇಲ್ಲ. ವಿರೋಧ ಹಿನ್ನೆಲೆ ಈಗಿರುವ ವರದಿ ಕೈಬಿಟ್ಟು, ಹೊಸದಾಗಿ ಜಾತಿ ಗಣತಿ ಕೈಗೊಳ್ಳುವುದು ಸೂಕ್ತ ಎಂದು ಸಾಣೇಹಳ್ಳಿ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.- - -