- ಕೋಣಬಲಿ, ಬೇವಿನ ಉಡುಗೆ ಹರಕೆ ನಿಷೇಧಕ್ಕೆ ಒತ್ತಾಯ- - - ಹರಿಹರ: ಮಾ.18 ರಿಂದ 22ರವರೆಗೆ ನಡೆಯುವ ಹರಿಹರದ ಗ್ರಾಮದೇವತೆ ಉತ್ಸವವನ್ನು ಮೌಢ್ಯಾಚರಣೆ ರಹಿತವಾಗಿ ಆಚರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ತಾಲೂಕು ಘಟಕದಿಂದ ತಹಸೀಲ್ದಾರ್ ಗ್ರೇಡ್-2 ಪುಷ್ಪಾವತಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಕೋಣಗಳ ಬಲಿ ನಿಷೇಧ:
ಕಾನೂನು, ನಿಬಂಧನೆಗಳ ಅನ್ವಯ ದೇವ, ದೇವಿಯ ಹೆಸರಲ್ಲಿ ಕೋಣ ಬಲಿ ನೀಡುವಂತಿಲ್ಲ. ಹೀಗಾಗಿ, ಈ ಉತ್ಸವದಲ್ಲಿ ಕೋಣಗಳ ಬಲಿ ಕಟ್ಟುನಿಟ್ಟಾಗಿ ತಡೆಯಬೇಕಾಗಿದೆ. ಗ್ರಾಮದೇವತೆ ಉತ್ಸವದಲ್ಲಿ ಭಕ್ತಿ, ಭಾವದ ಪರಾಕಾಷ್ಟೆ ಇರಲಿ. ಆದರೆ, ಮೌಢ್ಯಾಚರಣೆಗಳು ತೊಲಗಬೇಕು. ಈ ನಿಟ್ಟಿನಲ್ಲಿ ತಾಲೂಕು ಮತ್ತು ಜಿಲ್ಲಾಡಳಿತ ಬೀದಿನಾಟಕ, ಕರಪತ್ರ ವಿತರಣೆ, ಧ್ವನಿವರ್ಧಕದ ಮೂಲಕ ವ್ಯಾಪಕ ಜನಜಾಗೃತಿಯ ಪ್ರಚಾರ ಕಾರ್ಯ ನಡೆಸಬೇಕು ಎಂದರು.ಈ ಸಂದರ್ಭ ಸಮಿತಿ ಮುಖಂಡರಾದ ಕಡ್ಲೆಗೊಂದಿ ತಿಮ್ಮಣ್ಣ, ಸಂಜೀವ್, ಅಂಜನಪ್ಪ, ಪರಶುರಾಮ್, ಧನು ಕುಮಾರ್, ಬಸವರಾಜ್ ಇದ್ದರು.
- - - -21ಎಚ್‍ಆರ್‍ಆರ್01:ಹರಿಹರದಲ್ಲಿ ಮಾ.18 ರಿಂದ ಮೌಢ್ಯರಹಿತ ಗ್ರಾಮದೇವತೆ ಉತ್ಸವ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ದಸಂಸ ವತಿಯಿಂದ ತಹಶೀಲ್ದಾರ್ ಗ್ರೇಡ್-2 ಪುಷ್ಪಾವತಿ ಅವರಿಗೆ ಮನವಿ ಸಲ್ಲಿಸಲಾಯಿತು.