ಕನ್ನಡಪ್ರಭ ವಾರ್ತೆ ಬೆಂಗಳೂರು
ತೀವ್ರ ವಿರೋಧ, ಗೊಂದಲ, ಸಮೀಕ್ಷೆಗೆ ತಡೆ ಕೋರಿ ಹಲವರು ನ್ಯಾಯಾಲಯದ ಮೊರೆ ಹೋಗಿರುವ ನಡುವೆಯೇ ಸೋಮವಾರ ಶುರುವಾದ ಸಮೀಕ್ಷೆಯಲ್ಲಿ ಮೊದಲ ದಿನ 2,765 ಕುಟುಂಬಗಳ 10,642 ಮಂದಿಯ ಸಮೀಕ್ಷೆಯಷ್ಟೇ ನಡೆಸಲಾಗಿತ್ತು. ಎರಡನೇ ದಿನವೂ ಮಧ್ಯಾಹ್ನದವರೆಗೆ ನ್ಯಾಯಾಲಯ ತಡೆಯಾಜ್ಞೆ ನೀಡುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲೇ ಅಧಿಕಾರಿಗಳು, ಗಣತಿ ಸಿಬ್ಬಂದಿ ಮುಳುಗಿದ್ದರು.
ಜತೆಗೆ ಸರ್ವರ್ ಸಮಸ್ಯೆ, ನೆಟ್‌ವರ್ಕ್ ಸಮಸ್ಯೆ, ಆ್ಯಪ್ ಡೌನ್‌ಲೋಡ್ ಸಮಸ್ಯೆ, ಕ್ರ್ಯಾಶ್ ಆಗುವುದು. ಒಟಿಪಿ ಸಮಸ್ಯೆ ಸೇರಿ ಗಣತಿದಾರರು ಹಲವು ಸಮಸ್ಯೆಗಳನ್ನು ಎದುರಿಸಿದರು. ಹೀಗಾಗಿ ಎರಡನೇ ದಿನವೂ ಸಮೀಕ್ಷೆ ವೇಗ ಪಡೆದಿಲ್ಲ. ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಒಟ್ಟಾರೆ 21,252 ಕುಟುಂಬಗಳ 89,491 ಮಂದಿಯ ಸಮೀಕ್ಷೆ ಮಾತ್ರ ಪೂರ್ಣಗೊಂಡಿತ್ತು. ಸಂಜೆ ವೇಳೆಯೂ ಗಣತಿದಾರರು ಸಮೀಕ್ಷೆಯಲ್ಲಿ ತೊಡಗಿದ್ದು, ಸ್ಪಷ್ಟ ಅಂಕಿ-ಅಂಶ ಇನ್ನಷ್ಟೇ ಬರಬೇಕಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.ಮುಂದುವರಿದ ಗೊಂದಲ:
ಆದರೆ, ಆಫ್‌ಲೈನ್‌ನಲ್ಲಿ ಸಮೀಕ್ಷೆಗೆ ಅವಕಾಶ ನೀಡಿಲ್ಲ. ಹೀಗಾಗಿ ಬಹುತೇಕ ಕಡೆ ನೆಟ್‌ವರ್ಕ್ ಇಲ್ಲದೆ ಗಣತಿದಾರರು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲೂ ಪರದಾಡುವಂತಾಯಿತು. ಗಣತಿದಾರರಿಗೇ ಆ ಆ್ಯಪ್ ಬಗ್ಗೆ ಮಾಹಿತಿ ಇಲ್ಲ.
-ಬಾಕ್ಸ್-
ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಧರ್ಮದ ಆಯ್ಕೆಯನ್ನು ಆಯೋಗದ ಪಟ್ಟಿಯಲ್ಲಿ ನೀಡಿಲ್ಲ. ಒಂದೊಮ್ಮೆ ಈ ಹೆಸರುಗಳನ್ನು ಧರ್ಮದ ಆಯ್ಕೆಯಲ್ಲಿ ಬರೆಸಿಕೊಳ್ಳುವವರು ಇತರೆ ಕಾಲಂನಲ್ಲಿ ಬರೆಸಬಹುದು ಎಂದು ಹೇಳಲಾಗಿತ್ತು. ಆದರೆ, ಜಾತಿಯಲ್ಲಿ ಮಾತ್ರ ವೀರಶೈವ ಲಿಂಗಾಯತ ಎಂದು ಬರೆಸಲು ಸಾಧ್ಯವಾಗುತ್ತಿದೆ. ಇತರೆ ಧರ್ಮದ ಕಾಲಂನಲ್ಲಿ ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಮಂಗಳವಾರವೂ ಆ್ಯಪ್ ಸಮಸ್ಯೆ, ಡೌನ್‌ಲೋಡ್ ಸಮಸ್ಯೆ, ಒಟಿಪಿ ಸಮಸ್ಯೆಯಂತಹ ತಾಂತ್ರಿಕ ತೊಡಕುಗಳು ಮುಂದುವರೆದಿವೆ. ಸಂಜೆ 6 ಗಂಟೆ ವೇಳೆಗೆ 18,487 ಕುಟುಂಬಗಳ ಸಮೀಕ್ಷೆ ಮಾತ್ರ ಆಗಿತ್ತು. ಹೀಗಾಗಿ ಇ-ಆಡಳಿತ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದು, ಬುಧವಾರದ ವೇಳೆಗೆ ಸಮಸ್ಯೆ ಬಗೆಹರಿಸಲಾಗುವುದು.
ಕೋಟ್..
- ಮಧುಸೂದನ್ ನಾಯಕ್, ಅಧ್ಯಕ್ಷ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ.