ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರಿಗೆ ಅಭಿನಂದನೆ

KannadaprabhaNewsNetwork |  
Published : Jul 02, 2025, 11:52 PM IST
1ಕೆಎಂಎನ್ ಡಿ29 | Kannada Prabha

ಸಾರಾಂಶ

ವೈದ್ಯರನ್ನು ವೈದ್ಯೋ ನಾರಾಯಣೋ ಹರಿ ಎಂದು ದೇವರಿಗೆ ಸಮಾನರಾದವ ರೆಂದು ನೆನಪಿಸಿಕೊಳ್ಳುತ್ತೇವೆ. ವೈದ್ಯರೆಂದರೆ ನಂಬಿಕೆ, ವಿಶ್ವಾಸ , ಭರವಸೆ, ಮಾನವೀಯತೆಯ ಮೂರ್ತರೂಪಗಳಾದ ವೈದ್ಯರು ಅಗೋಚರವಾದ ನೋವನ್ನು ಶಮನ ಮಾಡಿ ಆರೋಗ್ಯಯುತ ಸಮಾಜಕ್ಕೆ ಆರೋಗ್ಯವಂತ ವ್ಯಕ್ತಿಗಳ ನಿರ್ಮಿತಿಗೆ ಅವರ ಸೇವೆ ಅನುಪಮವಾದದ್ದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಮಹದೇವಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು.

ಕೃಷಿಕ ಅಲೆಯನ್ಸ್ ಸಂಸ್ಥೆ ಮಂಡ್ಯ, ಸರ್ವೋದಯ ಅಲಯನ್ಸ್ಯಸಂಸ್ಥೆ ಅರಕೆರೆ, ಸನ್ಮತಿ ಅಲಯನ್ಸ್ ಸಂಸ್ಥೆ ಮಂಡ್ಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ ಹನುಮಂತು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವೈದ್ಯ ಲೋಕದ ದಿಗ್ಗಜ ಬಿ.ಸಿ.ರಾಯ್ ಅವರು ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಗೌರವಿಸಲು ಅವರು ಹುಟ್ಟಿದ ದಿನ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ ಎಂದರು.

ಪ್ರಸ್ತುತ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಸವಾಲಾಗಿರುವಾಗ ವೈದ್ಯರ ಆರೈಕೆ ಪ್ರಮುಖವಾದದ್ದು. ವೈದ್ಯರನ್ನು ವೈದ್ಯೋ ನಾರಾಯಣೋ ಹರಿ ಎಂದು ದೇವರಿಗೆ ಸಮಾನರಾದವ ರೆಂದು ನೆನಪಿಸಿಕೊಳ್ಳುತ್ತೇವೆ. ವೈದ್ಯರೆಂದರೆ ನಂಬಿಕೆ, ವಿಶ್ವಾಸ , ಭರವಸೆ, ಮಾನವೀಯತೆಯ ಮೂರ್ತರೂಪಗಳಾದ ವೈದ್ಯರು ಅಗೋಚರವಾದ ನೋವನ್ನು ಶಮನ ಮಾಡಿ ಆರೋಗ್ಯಯುತ ಸಮಾಜಕ್ಕೆ ಆರೋಗ್ಯವಂತ ವ್ಯಕ್ತಿಗಳ ನಿರ್ಮಿತಿಗೆ ಅವರ ಸೇವೆ ಅನುಪಮವಾದದ್ದು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಎಂ.ಆರ್.ರಮ್ಯಾ ಮತ್ತು ಡಾ.ನೂರ್ ವಾಸಿಮಾ ಅವರನ್ನು ಗೌರವಿಸಲಾಯಿತು. ಅಲಯನ್ಸ್ ಸಂಸ್ಥೆ ವಲಯ್ಯಾಧ್ಯಕ್ಷ ಎ.ಆರ್.ಅನಿಲ್ ಬಾಬು, ಸರ್ವೋದಯ ಅಲೆಯನ್ಸ್ ಸಂಸ್ಥೆ ಅಧ್ಯಕ್ಷ ಜೆ. ರಾಮಕೃಷ್ಣ ಸನ್ಮತಿ, ಅಲಯನ್ಸ್ ಸಂಸ್ಥೆ ಕಾರ್ಯದರ್ಶಿ ಮಹಾಲಕ್ಷ್ಮಿ, ಎಂ.ಬಿ.ಅನಂತಯ್ಯ, ಕೃಷಿಕ ಸಂಸ್ಥೆ ಕೃಷ್ಣಪ್ಪ,

ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.ಜೆ.ಜೆ.ಪಬ್ಲಿಕ್ ಸ್ಕೂಲ್ ವತಿಯಿಂದ ವೈದ್ಯರ ದಿನ ಆಚರಣೆ

ಹಲಗೂರು: ದೇಶದ ಜನ ಸಾಮಾನ್ಯರ ಆರೋಗ್ಯಕರ ಜೀವನಕ್ಕೆ ನಿರಂತರವಾಗಿ ಶ್ರಮಿಸುವ ವೈದ್ಯರ ಸೇವೆ ಶ್ಲಾಘನೀಯ ಎಂದು ಶಿಕ್ಷಕ ರಾಜಶೇಖರ ತಿಳಿಸಿದರು. ಜೆ.ಜೆ.ಪಬ್ಲಿಕ್ ಸ್ಕೂಲ್‌ನಿಂದ ವೈದ್ಯರ ದಿನಚಾರಣೆ ಪ್ರಯುಕ್ತ ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸೌಮ್ಯಶ್ರೀ ಅವರಿಗೆ ವಿದ್ಯಾರ್ಥಿಗಳೊಂದಿಗೆ ಶುಭಾಶಯ ಕೋರಿ ಮಾತನಾಡಿದರು. ಈ ವೇಳೆ ತನಿಸ್ತ, ಚಂದುಶ್ರೀ, ನಿಧಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ